ಚಿಕ್ಕಬಳ್ಳಾಪುರ ನಗರಸಭೆ 2025-26ನೇ ಸಾಲಿನ ಆಯವ್ಯಯ ಮಂಡನೆ: 2.77 ಲಕ್ಷ ಉಳಿತಾಯ ಬಜೆಟ್ ಮಂಡಿಸಿದ ಅಧ್ಯಕ್ಷ ಗಜೇಂದ್ರ
2025-26ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿ ರೂಪದಲ್ಲಿ 31224500, ಬಂಡವಾಳ ಸ್ವೀಕೃತಿ- 411775000, ಅಸಾಧಾರಣ ಸ್ವೀಕೃತಿಗಳು-447362000, ಒಟ್ಟು 1171382000 ರೂಗಳ ನಿರೀಕ್ಷಿತ ಆದಾಯದ ನಿರೀಕ್ಷಿಸಲಾಗಿದೆ. ಈ ಪೈಕಿ 11436261000 ರೂಗಳ ನಿರೀಕ್ಷಿತ ಖರ್ಚಿನ ಬಗ್ಗೆ ಸುಧೀರ್ಘ ಚರ್ಚೆಯನ್ನು ಮಾಡಿದ ನಂತರ 27749390 ರೂ.ಗಳ ಉಳಿತಾ ಯದ ಬಜೆಟ್ ಅನ್ನು ಮಂಡಿಸಿ ರಾಜಸ್ವ ಮತ್ತು ಬಂಡವಾಳ ಪಾವತಿಗಳಿಗೆ ಅನುಮೋದನೆ ಪಡೆಯಲಾಯಿತು.


ಚಿಕ್ಕಬಳ್ಳಾಪುರ: 2025-26ನೇ ಸಾಲಿನ ಚಿಕ್ಕಬಳ್ಳಾಪುರ ನಗರಸಭೆ ವಾರ್ಷಿಕ ಆಯವ್ಯಯ ವನ್ನು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಅಧ್ಯಕ್ಷತೆಯಲ್ಲಿ ಶನಿವಾರ ನಗರಸಭೆಯ ಸರ್. ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಂಡಿಸಿದ್ದು 27749390 ರೂ.ಗಳ ಉಳಿತಾಯ ಬಜೆಟ್ ಅನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ನಗರದ ಭುವನೇಶ್ವರಿ ವೃತ್ತದಲ್ಲಿರುವ ನಗರಸಭೆಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣ ದಲ್ಲಿ ಶನಿವಾರ ನಡೆದ 2025-26ನೇ ಸಾಲಿನ ಚಿಕ್ಕಬಳ್ಳಾಪುರ ನಗರಸಭೆ ವಾರ್ಷಿಕ ಆಯ ವ್ಯಯವನ್ನು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಸಮ್ಮುಖದಲ್ಲಿ ಆಯುಕ್ತ ಮನ್ಸೂರ್ ಆಲಿ ಮಂಡಿಸಿದರು.
ಇದನ್ನೂ ಓದಿ: Chikkaballapur News: ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮ್ ಜನ್ಮದಿನ: ಸೇವಾಕಾರ್ಯಗಳ ಮೂಲಕ ಆಚರಣೆ
2025-26ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿ ರೂಪದಲ್ಲಿ 31224500, ಬಂಡವಾಳ ಸ್ವೀಕೃತಿ- 411775000, ಅಸಾಧಾರಣ ಸ್ವೀಕೃತಿಗಳು-447362000, ಒಟ್ಟು 1171382000 ರೂಗಳ ನಿರೀಕ್ಷಿತ ಆದಾಯದ ನಿರೀಕ್ಷಿಸಲಾಗಿದೆ. ಈ ಪೈಕಿ 11436261000 ರೂಗಳ ನಿರೀಕ್ಷಿತ ಖರ್ಚಿನ ಬಗ್ಗೆ ಸುಧೀರ್ಘ ಚರ್ಚೆಯನ್ನು ಮಾಡಿದ ನಂತರ 27749390 ರೂ.ಗಳ ಉಳಿತಾ ಯದ ಬಜೆಟ್ ಅನ್ನು ಮಂಡಿಸಿ ರಾಜಸ್ವ ಮತ್ತು ಬಂಡವಾಳ ಪಾವತಿಗಳಿಗೆ ಅನುಮೋದನೆ ಪಡೆಯಲಾಯಿತು.
ನಗರಸಭೆ ಅಧ್ಯಕ್ಷ ಎ. ಗಜೇಂದ್ರ ಅವರು ಬಜೆಟ್ ಮಂಡನೆಯ ಮೇಲೆ ವಿಸ್ತೃತವಾಗಿ ಚರ್ಚಿಸಲು ನಗರಸಭೆಯ ಸದಸ್ಯರಿಗೆ ಅವಕಾಶ ಕಲ್ಪಿಸಿದರು. ಈ ವೇಳೆ ಮಾತನಾಡಿ ಚಿಕ್ಕಬಳ್ಳಾಪುರ ನಗರದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಕ್ರಮ ಗಳನ್ನು ಕೈಗೊಳ್ಳಲಾಗುವುದು. ನಗರಸಭೆ ಅಧೀನದಲ್ಲಿರುವ 99 ಅಂಗಡಿ ಮುಂಗಟ್ಟುಗಳ ಮಳಿಗೆಗಳನ್ನು ಏಪ್ರಿಲ್ 16 ರಂದು ಬಹಿರಂಗ ಹರಾಜು ಮಾಡಲಾಗುತ್ತಿದ್ದು, ಆಸಕ್ತರು ಈ ಹರಾಜಿನಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಆದಾಯದ ಬಾಬತ್ತಿನ ಮಾರ್ಗಗಳು ಹೀಗಿವೆ.
77 ಕೋಟಿ ಅನುದಾನ
2025-26 ನೇ ಸಾಲಿನಲ್ಲಿ ಸರಕಾರದಿಂದ ವಿವಿಧ ಉದ್ದೇಶಗಳಿಗಾಗಿ ಒಟ್ಟು 77 ಕೋಟಿ 77 ಲಕ್ಷ 11 ಸಾವಿರ ಅನುದಾನ ನಿರೀಕ್ಷಿಸಲಾಗಿದ್ದು ಮುಖ್ಯವಾಗಿ 15ನೇ ಹಣಕಾಸು 2023-24ರಿಂದ 3.33ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ 6 ಕೋಟಿ, ದಲ್ಟ್ ಅನುದಾನದಿಂದ 9.3.8ಕೋಟಿ, ಎಸ್.ಎಫ್.ಸಿ ಸ್ಯಾಲರಿ ಗ್ರಾಂಟ್-5.12ಕೋಟಿ, ಅಮೃತ್-2 ಯೋಜನೆ ಅನುದಾನದಿಂದ 10 ಕೋಟಿ, ಎಸ್‌ಡಬ್ಲ್ಯುಎಂ/ಎಸ್‌ಟಿಪಿಯಿಂದ 20 ಕೋಟಿ, ಎಸ್‌ಎಎಸ್ ಪ್ರಾಪರ್ಟಿ ಟ್ಯಾಕ್ಸ್-8.5ಕೋಟಿ, ನೀರಿನ ತೆರಿಗೆ-1.83ಕೋಟಿ, ಬಾಡಿಗೆ ಆದಾಯ-1.05 ಕೋಟಿ ಹೀಗೆ ವಿವಿಧ ಯೋಜನೆ ಮೂಲಗಳಿಂದ 77.77 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.
ಆಸ್ತಿ ತೆರಿಗೆ
2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ 8.5 ಕೋಟಿ ಆದಾಯ, ಆಸ್ತಿ ತೆರಿಗೆ ಮೇಲಿನ ದಂಡ ಬಾಬತ್ತು-1 ಕೋಟಿ, ಜಾಹೀರಾತು ಫಲಕಗಳಿಂದ 10 ಲಕ್ಷ, ಕಟ್ಟಡ ನಿರ್ಮಾಣ ಹಾಗೂ ಪರವಾನಿಗೆ ಶುಲ್ಕದಿಂದ 30 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.
ನೀರು ಸರಬರಾಜು
ನಗರಸಭೆ ವ್ಯಾಪ್ತಿಯಲ್ಲಿರುವ 10 ಸಾವಿರ ಮನೆಗಳಿಗೆ ಹಾಲಿ ನಲ್ಲಿ ಸಂಪರ್ಕವಿರುವ,ಹೊಸ ಸಂಪರ್ಕಗಳಿಗೆ ಸೇರಿ 1. ಕೋಟಿ 83 ಲಕ್ಷ ವಸೂಲಿ ಅಂದಾಜಿಸಲಾಗಿದೆ. ನಗರಸಭೆ ಬ್ಯಾಂಕು ಗಳಲ್ಲಿರುವ ಮೊತ್ತಗಳ ಮೇಲೆ 2025-26ನೇ ಸಾಲಿನಲ್ಲಿ 35 ಲಕ್ಷ ಬಡ್ಡಿ ಅಂದಾಜಿಸಲಾಗಿದೆ.
ನಗರಸಭೆಯಲ್ಲಿ 300 ಕ್ಕೂ ಹೆಚ್ಚು ಮಳಿಗೆಗಳಿದ್ದು ಅವುಗಳಿಂದ 2025-26ನೇ ಸಾಲಿನಲ್ಲಿ 1ಕೋಟಿ 5 ಲಕ್ಷ ಆದಾಯ ನಿರೀಕ್ಷಿಸಲಾಗದೆ. ನೆಲಬಾಡಿಗೆ 10 ಲಕ್ಷ, 2300 ವಾಣಿಜ್ಯ ಅಂಗಡಿ ಗಳಿದ್ದು ಇವುಗಳಿಂದ ವಾರ್ಷಿಕ 40 ಲಕ್ಷ ಆದಾಯ ನಿರೀಕ್ಷೆ ಮಾಡಲಾಗಿದೆ. ಖರ್ಚಿನ ಬಾಬತ್ತು ಹೀಗಿದೆ.
ನಗರ ಸೌಂದರೀಕರಣ
ರಸ್ತೆ, ಕಲ್ಲುಹಾಸು, ಪಾದಚಾರಿ ಮಾರ್ಗ, ರಸ್ತೆಪಕ್ಕದ ಚರಂಡಿ ನಿರ್ಮಾಣಕ್ಕಾಗಿ ೯.೬೮ಕೋಟಿ ನಿಗಧಿಪಡಿಸಲಾಗಿದೆ.ನಗರದ ಉದ್ಯಾನವನ ಮತ್ತು ಅರಣ್ಯೀಕರಣಕ್ಕಾಗಿ ಅಮೃತ-೨ ಯೋಜನೆಯಲ್ಲಿ ೧೩ಕೋಟಿ, ಬೀದಿ ದೀಪಗಳ ಅಳವಡಿಕೆಗೆ ೫೦ ಲಕ್ಷ,ಮಳೆನೀರಿನ ಚರಂಡಿ, ತೆರೆದ ಚರಂಡಿ,ಸಣ್ಣ ಸೇತುವೆ, ಸೇತುವೆ ಮಾರ್ಗಗಳ ನಿರ್ಮಾಣಕ್ಕೆ ೧.೮೦ ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗಾಗಿ ೩.೧೫ಕೋಟಿ, ನೀರು ಸರಬರಾಜು ವ್ಯವಸ್ಥೆಯ ಉನ್ನತೀಕರಣಕ್ಕಾಗಿ, ನೀರು ಶೇಖರಣೆ ಸಾಮರ್ಥ್ಯ ಹೆಚ್ಚಿಸಲು ೫.೪೦ಕೋಟಿ,ಒಳಚರಂಡಿ ಅಭಿವೃದ್ಧಿಗಾಗಿ ೩೦ಕೋಟಿ,ಎಸ್,ಟಿಪಿ ಮೇಲ್ದರ್ಜೆಗೆ ಏರಿಸಲು ೮.೪೮ಕೋಟಿ ನಿಗದಿಪಡಿಸ ಲಾಗಿದೆ.
*
ಈ ವೇಳೆ ಸಂಸದ ಡಾ. ಕೆ.ಸುಧಾಕರ್ ಅವರು ಮಾತನಾಡಿ, ಚಿಕ್ಕಬಳ್ಳಾಪುರ ನಗರದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸಗಳನ್ನು ಪಕ್ಷಾತೀತವಾಗಿ, ಜಾತಿ ಹಾಗೂ ಧರ್ಮಾತೀ ತವಾಗಿ ಮಾಡಬೇಕು. ಒಬ್ಬ ಜನಪ್ರತಿನಿಧಿಯಾಗಿ ಆಯ್ಕೆಯಾದ ಮೇಲೆ ಕಾನೂನು ಬದ್ದವಾಗಿ ನಡೆದುಕೊಳ್ಳುವುದು ಆತನ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ಆದ್ದರಿಂದ ಸುಮಾರು 117 ಕೋಟಿಗೂ ಹೆಚ್ಚಿನ ಆಯವ್ಯಯ ಇಂದು ನಗರಸಭೆಯಲ್ಲಿ ಮಂಡನೆ ಯಾಗಿದೆ. ಈ ನಿರೀಕ್ಷಿತ ಆದಾಯದಲ್ಲಿ ಒಂದು ರೂಪಾಯಿಯೂ ಕೂಡ ವ್ಯರ್ಥವಾಗದ ರೀತಿಯಲ್ಲಿ ಹಣ ವೆಚ್ಚವಾಗಿ ಜನರ ಸೇವೆಗಾಗಿ ಸಾರ್ಥಕವಾಗಬೇಕು. ಆ ನಿಟ್ಟಿನಲ್ಲಿ ನಗರ ಸಭೆಯ ಸದಸ್ಯರು ಬಜೆಟ್ ಮಂಡನೆಯ ಮೇಲೆ ಆರೋಗ್ಯಕರ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.
*
ನಗರಸಭೆಯ ಬಜೆಟ್ ಮಂಡನೆ ವೇಳೆ ಉಪಾಧ್ಯಕ್ಷ ನಾಗರಾಜು ಪ್ರಸ್ತಾಪಿಸಿದ ೯೯ ಮಳಿಗೆಗಳ ಮುಂದೂಡಿಕೆ ವಿಚಾರ ಸಭೆಯಲ್ಲಿ ೧ಗಂಟೆಗೂ ಹೆಚ್ಚುಕಾಲ ಕೋಲಾಹಲಕ್ಕೆ ಕಾರಣ ವಾಯಿತು. ಸಂಸದ ಸುಧಾಕರ್ ಸಮ್ಮುಖದಲ್ಲಿಯೇ ಹಿರಿಯ ನಗರಸಭಾ ಸದಸ್ಯ ರಫೀಕ್ ಮತ್ತು ಸದಸ್ಯರಾದ ನರಸಿಂಹಮೂರ್ತಿ, ಸತೀಶ್ ನಡುವೆ ನಡುವೆ ಏಕವಚನ ಪದ ಪ್ರಯೋಗವೂ ಎಗ್ಗು ಸಿಗ್ಗಿಲ್ಲದೆ ನಡೆದಿತ್ತು. ಮಳಿಗೆಗಳ ಹರಾಜು ಏ.೧೬ರಂದು ನಡೆಸುವುದೇ ಸೂಕ್ತ ಎಂದು ಸಂಸದರು ಸ್ಪಷ್ಟನೆ ಕೊಟ್ಟ ಮೇಲೆ ಬಜೆಟ್ ಸಭೆ ಪ್ರಾರಂಭವಾಗಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಗಜೇಂದ್ರ, ಪೌರಾಯುಕ್ತ ಮನ್ಸೂರ್ ಅಲಿಖಾನ್, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.