RR vs PBKS: ಶೇನ್ ವಾರ್ನ್ ದಾಖಲೆ ಮುರಿದ ಸಂಜು ಸ್ಯಾಮ್ಸನ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ 4 ವಿಕೆಟಿಗೆ 205 ರನ್ನುಗಳ ದೊಡ್ಡ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಸೋಲಿನೊಂದಿಗೆ ಪಂಜಾಬ್ ತಂಡ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿತು. ರಾಜಸ್ಥಾನ್ ವೇಗಿ ಜೋಫ್ರಾ ಆರ್ಚರ್ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮುಲ್ಲಾನ್‌ಪುರ: ರಾಜಸ್ಥಾನ್ ರಾಯಲ್ಸ್(Rajasthan Royals) ತಂಡವು ಶನಿವಾರದ ಐಪಿಎಲ್(IPL 2025) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ತಂಡದೆದುರು 50 ರನ್ ಅಮೋಘ ಜಯ ಸಾಧಿಸಿ ಹಾಲಿ ಆವೃತ್ತಿಯಲ್ಲಿ ಎರಡನೇ ಗೆಲುವು ತನ್ನದಾಗಿಸಿಕೊಂಡಿತು. ಗಾಯದಿಂದ ಚೇತರಿಕೆ ಕಂಡು ನಾಯಕನಾಗಿ ಮರಳಿದ ಮೊದಲ ಪಂದ್ಯದಲ್ಲೇ ಸಂಜು ಸ್ಯಾಮ್ಸನ್(Sanju Samson) ರಾಜಸ್ಥಾನ್ ಪರ ನೂತನ ದಾಖಲೆಯೊಂದನ್ನು ನಿರ್ಮಿಸಿದರು.
ಈ ಗೆಲುವಿನೊಂದಿಗೆ ಸಂಜು ಅವರು ರಾಜಸ್ಥಾನ್ ರಾಯಲ್ಸ್ ಪರ ಅತ್ಯಧಿಕ ಗೆಲುವು ಸಾಧಿಸಿದ ಮೊದಲ ನಾಯಕ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ಶೇನ್ ವಾರ್ನ್ ಹೆಸರಿನಲ್ಲಿತ್ತು. ವಾರ್ನ್ ರಾಜಸ್ಥಾನ್ ಪರ 55 ಪಂದ್ಯಗಳಿಂದ 31 ಗೆಲುವು ಸಾಧಿಸಿದ್ದರು. ಅಲ್ಲದೆ ಚೊಚ್ಚಲ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಸಂಜು ಸ್ಯಾಮ್ಸನ್ 62 ಪಂದ್ಯಗಳಿಂದ 32 ಪಂದ್ಯ ಗೆದ್ದಿದ್ದಾರೆ. ಸಂಜು ಗಾಯದ ಕಾರಣ ಆರಂಭಿಕ ಮೂರು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಆಡಿದ್ದರು. ರಿಯಾನ್ ಪರಾಗ್ ಉಸ್ತುವಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.
ನಾಯಕನಾಗಿ ರಾಜಸ್ಥಾನ್ ಪರ ಅತ್ಯಧಿಕ ಗೆಲುವು
ಸಂಜು ಸ್ಯಾಮ್ಸನ್-32 ಗೆಲುವು
ಶೇನ್ ವಾರ್ನ್- 31 ಗೆಲುವು
ರಾಹುಲ್ ದ್ರಾವಿಡ್- 18 ಗೆಲುವು
ಸ್ಟೀವನ್ ಸ್ಮಿತ್- 15 ಗೆಲುವು
ಅಜಿಂಕ್ಯ ರಹಾನೆ- 9 ಗೆಲುವು
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ 4 ವಿಕೆಟಿಗೆ 205 ರನ್ನುಗಳ ದೊಡ್ಡ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಸೋಲಿನೊಂದಿಗೆ ಪಂಜಾಬ್ ತಂಡ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿತು. ರಾಜಸ್ಥಾನ್ ವೇಗಿ ಜೋಫ್ರಾ ಆರ್ಚರ್ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ IPL 2025 Points Table: ಡೆಲ್ಲಿಗೆ ಅಗ್ರಸ್ಥಾನ, ಏಳಕ್ಕೇರಿದ ರಾಜಸ್ಥಾನ್
ಬ್ಯಾಟಿಂಗ್ ವೇಳೆ ಬಿರುಸಿನ ಆಟವಾಡಿದ ಸ್ಯಾಮ್ಸನ್ 26 ಎಸೆತಗಳಿಂದ 38 ರನ್ ಗಳಿಸಿದರು. ಬ್ಯಾಟಿಂಗ್ ಲಯಕ್ಕೆ ಮರಳಿದ ಜೈಸ್ವಾಲ್ 45 ಎಸೆತಗಳಿಂದ 67 ರನ್ ಗಳಿಸಿದರು. ಮೂರು ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದ್ದರು.