ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harassment: ಉದ್ಯೋಗಿಗಳಿಗೆ ನಾಯಿಯಂತೆ ನಡೆಯುವ ಶಿಕ್ಷೆ ವಿಧಿಸಿದ ಖಾಸಗಿ ಕಂಪನಿ; ಕಾರಣವೇನು?

ಕೆಲಸದಲ್ಲಿ ಕಳಪೆ ಪ್ರದರ್ಶನ ತೋರಿರುವ ಕೊಚ್ಚಿಯ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯೊಂದರ ಉದ್ಯೋಗಿಗಳಿಗೆ ಕುತ್ತಿಗೆಗೂ ಬೆಲ್ಟ್ ಹಾಕಿಸಿ ಅವರನ್ನು ಮೊಣಕಾಲಿನ ಮೇಲೆ ನಡೆಸಿ, ನಾಣ್ಯಗಳನ್ನು ನೆಕ್ಕುವಂತೆ ಮಾಡಿ, ಎಲ್ಲರೆದುರು ಅರೆ ನಗ್ನವಾಗುವಂತೆ ಶಿಕ್ಷೆ ವಿಧಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉದ್ಯೋಗಿಗಳ ಕಳಪೆ ಪ್ರದರ್ಶನಕ್ಕೆ ಕಿರುಕುಳ: ಸಂಸ್ಥೆ ವಿರುದ್ಧ ತನಿಖೆಗೆ ಆದೇಶ

ಸಾಂದರ್ಭಿಕ ಚಿತ್ರ.

ತಿರುವನಂತಪುರಂ: ಕೆಲಸದಲ್ಲಿ ಕಳಪೆ ಪ್ರದರ್ಶನ ತೋರಿರುವ ಕೊಚ್ಚಿಯ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯೊಂದರ ಉದ್ಯೋಗಿಗಳಿಗೆ ಕುತ್ತಿಗೆಗೂ ಬೆಲ್ಟ್ ಹಾಕಿಸಿ ಅವರನ್ನು ಮೊಣಕಾಲಿನ ಮೇಲೆ ನಡೆಸಿ, ನಾಣ್ಯಗಳನ್ನು ನೆಕ್ಕುವಂತೆ ಮಾಡಿ, ಎಲ್ಲರೆದುರು ಅರೆ ನಗ್ನವಾಗುವಂತೆ ಶಿಕ್ಷೆ (Harassment) ವಿಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ. ಉದ್ಯೋಗಿಗಳನ್ನು ಕೀಳಾಗಿ ನಡೆಸಿರುವ ಸಂಸ್ಥೆಯ ಕುರಿತು ತನಿಖೆಗೆ ರಾಜ್ಯ ಕಾರ್ಮಿಕ ಇಲಾಖೆ (Labour department) ಆದೇಶ ಹೊರಡಿಸಿದೆ. ಕಂಪನಿ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯೊಂದರ ಉದ್ಯೋಗಿಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸ್ಥಳೀಯ ದೂರದರ್ಶನ ವಾಹಿನಿಗಳು ವಿಡಿಯೊ ಸಹಿತ ಸುದ್ದಿ ಪ್ರಸಾರ ಮಡಿದ ಬಳಿಕ ಕೆಲಸದ ಸ್ಥಳದಲ್ಲಿ ನಡೆದ ಅಮಾನವೀಯ ಕಿರುಕುಳದ ಬಗ್ಗೆ ರಾಜ್ಯ ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ಅವರು ತನಿಖೆಗೆ ಆದೇಶ ನೀಡಿದರು. ತಕ್ಷಣ ಘಟನೆಯ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚಿಸಿದರು.

ವಿಡಿಯೋದಲ್ಲಿ ಒಬ್ಬ ವ್ಯಕ್ತಿಯ ಕುತ್ತಿಗೆಗೆ ಬೆಲ್ಟ್ ಕಟ್ಟಿ ನಾಯಿಯಂತೆ ಮೊಣಕಾಲಿನ ಮೇಲೆ ನಡೆಸುತ್ತಿರುವುದು, ಕೆಲವರನ್ನು ಅರೆ ನಗ್ನಗೊಳಿಸಿರುವ ದೃಶ್ಯಗಳನ್ನು ಕಾಣಬಹುದು.



ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ,ಕಂಪನಿಯಲ್ಲಿ ಕಳಪೆ ಪ್ರದರ್ಶನ ತೋರಿರುವುದಕ್ಕೆ ಸಂಸ್ಥೆಯ ಆಡಳಿತ ಮಂಡಳಿಯು ಇಂತಹ ಶಿಕ್ಷೆಗಳನ್ನು ವಿಧಿಸಿದೆ ಎನ್ನಲಾಗಿದೆ. ಈ ಘಟನೆಯು ಕಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಈವರೆಗೆ ಯಾರೂ ದೂರು ನೀಡಿಲ್ಲ. ಅಲ್ಲದೇ ಮಾಲೀಕರು ಆರೋಪಗಳನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ಕಲೂರಿನಲ್ಲಿರುವ ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪೆರುಂಬವೂರ್‌ನ ಸಂಸ್ಥೆಯಲ್ಲಿ ಈ ಘಟನೆ ನಡೆದಿರಬಹುದು ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ರಾಜ್ಯ ಮಾನವ ಹಕ್ಕುಗಳ ಆಯೋಗವು ಹೈಕೋರ್ಟ್ ವಕೀಲ ಕುಲತ್ತೂರ್ ಜೈಸಿಂಗ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಘಟನೆಯ ಕುರಿತು ಪ್ರಕರಣ ದಾಖಲಿಸಿದೆ.

ಇದನ್ನು ಓದಿ: Physical Assault: ಕಳ್ಳತನದ ಆರೋಪ; ಬಾಲಕನನ್ನು ಬೆತ್ತಲೆಗೊಳಿಸಿ ಕೆಂಪಿರುವೆ ಬಿಟ್ಟು ವಿಕೃತಿ

ಕೇರಳ ರಾಜ್ಯ ಯುವ ಆಯೋಗವು ಕೂಡ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ ಸಮಿತಿಯು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಈ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ.