ಬಿಪಿಸಿಎಲ್ ಅಂಕುರ್ ಫಂಡ್‌ಗೆ ಸಲಹೆಗಾರರಾಗಿ ಐಡಿಬಿಐ ಕ್ಯಾಪಿಟಲ್ ಮಾರ್ಕೆಟ್ಸ್ & ಸೆಕ್ಯುರಿಟೀಸ್ ಲಿಮಿಟೆಡ್ ನೇಮಕ
ಬಿಪಿಸಿಎಲ್ ಅಂಕುರ್ ಫಂಡ್ಸ್ ನ್ನು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ವ್ಯವಹಾರ ಕ್ಷೇತ್ರಗಳಿಗೆ ಅನುಗುಣವಾದ ವಲಯಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಸಾಮರ್ಥ್ಯದ ನವೋದ್ಯಮಗಳಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. 2016ರಿಂದ ಅಂಕುರ್ ಫಂಡ್ಸ್ 28 ಕೋಟಿ ರೂ ನೆರವಿನ ಮೂಲಕ 30ಕ್ಕೂ ಅಧಿಕ ನವೋದ್ಯ ಮಗಳಿಗೆ ಬೆಂಬಲ ನೀಡಿದೆ.

ಮುಂಬೈ : ಬಿಪಿಸಿಎಲ್ ಅಂಕುರ್ ಫಂಡ್ಸ್ ಗೆ ಸಲಹೆಗಾರರಾಗಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(ಬಿಪಿಸಿಎಲ್) ಐಡಿಬಿಐ ಕ್ಯಾಪಿಟಲ್ ಮತ್ತು ಸೆಕ್ಯೂರಿಟಿಸ್ ಲಿಮಿಟೆಡ್ (ಐಸಿಎಮ್‌ಎಸ್)ನ್ನು ನೇಮಕ ಮಾಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.
ಬಿಪಿಸಿಎಲ್ ಅಂಕುರ್ ಫಂಡ್ಸ್ ನ್ನು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ವ್ಯವಹಾರ ಕ್ಷೇತ್ರಗಳಿಗೆ ಅನುಗುಣವಾದ ವಲಯಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಸಾಮರ್ಥ್ಯದ ನವೋದ್ಯಮಗಳಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. 2016ರಿಂದ ಅಂಕುರ್ ಫಂಡ್ಸ್ 28 ಕೋಟಿ ರೂ ನೆರವಿನ ಮೂಲಕ 30ಕ್ಕೂ ಅಧಿಕ ನವೋದ್ಯ ಮಗಳಿಗೆ ಬೆಂಬಲ ನೀಡಿದೆ.
ಪ್ರಮುಖ ಹಣಕಾಸು ಹಾಗೂ ಹೂಡಿಕೆ ಸಲಹಾ ಸಂಸ್ಥೆಯಾಗಿರುವ ಐಡಿಬಿಐ ಕ್ಯಾಪಿಟಲ್ ಮಾರ್ಕೆಟ್ ಮತ್ತು ಸೆಕ್ಯೂರಿಟಿಸ್ ಲಿಮಿಟೆಡ್(ಐಸಿಎಮ್‌ಎಸ್) ನವೋದ್ಯಮಗಳ ಆರಂಭಿಕ ಪ್ರಸ್ತಾವನೆ ಪರಿಶೀಲನೆ, ಹೂಡಿಕೆ ನಂತರದ ಮೇಲ್ವಿಚಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದರ ಜೊತೆಗೆ ಐಸಿಎಮ್‌ಎಸ್ ಭರವಸೆಯ ನವೋದ್ಯಮಕ್ಕೆ ಅಗತ್ಯವಾದ ಹೂಡಿಕೆ ಹಾಗೂ ಹಣಕಾಸು ಸಲಹೆಗಳು ಸಿಗುವಂತೆ ತಂತ್ರಾತ್ಮಕ ಬೆಂಬಲವನ್ನು ನೀಡಲಿದೆ.