ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maoists Surrender: ತೆಲಂಗಾಣ ಪೊಲೀಸರ ಮುಂದೆ ಶರಣಾದ 86 ಮಾವೋವಾದಿಗಳು

ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ 86 ಮಾವೋವಾದಿಗಳು ಶನಿವಾರ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ. ಇವರಲ್ಲಿ 82 ಮಂದಿ ಭದ್ರಾದ್ರಿ- ಕೊಥಗುಡೆಮ್ ಹಾಗೂ ಉಳಿದ ನಾಲ್ವರು ಮುಲುಗು ಜಿಲ್ಲೆಗೆ ಸೇರಿದವರಾಗಿದ್ದಾರೆ. ಭದ್ರಾದ್ರಿ ಕೊಥಗುಡೆಮ್ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ

ಭದ್ರಾದ್ರಿ- ಕೊಥಗುಡೆಮ್ , ಮುಲುಗು ಜಿಲ್ಲೆಯ  ಮಾವೋವಾದಿಗಳು ಪೊಲೀಸರಿಗೆ ಶರಣು

ಹೈದರಾಬಾದ್‌: ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (Communist Party of India) 86 ಮಾವೋವಾದಿಗಳು (Maoists Surrender) ಶನಿವಾರ ತೆಲಂಗಾಣ ಪೊಲೀಸರ (telangana police) ಮುಂದೆ ಶರಣಾಗಿದ್ದಾರೆ. ಇವರಲ್ಲಿ 82 ಮಂದಿ ಭದ್ರಾದ್ರಿ- ಕೊಥಗುಡೆಮ್ ಹಾಗೂ ಉಳಿದ ನಾಲ್ವರು ಮುಲುಗು ಜಿಲ್ಲೆಗೆ ಸೇರಿದವರು. ಭದ್ರಾದ್ರಿ ಕೊಥಗುಡೆಮ್ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇವರು ಶರಣಾಗಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಬಹು- ವಲಯ I) ಎಸ್. ಚಂದ್ರಶೇಖರ್ ರೆಡ್ಡಿ ತಿಳಿಸಿದ್ದಾರೆ.

ಕೊಥಗುಡೆಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಶರಣಾಗಿರುವ 86 ಮಾವೋವಾದಿಗಳೆಲ್ಲರೂ ನೆರೆಯ ಛತ್ತೀಸ್‌ಗಢ ಜಿಲ್ಲೆಯ ಬಿಜಾಪುರ ಅರಣ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದರು.

ಮಾರ್ಚ್‌ನಲ್ಲಿ ಭದ್ರಾದ್ರಿ- ಕೊಥಗುಡೆಮ್ ಪೊಲೀಸರ ಮುಂದೆ 64 ಮಂದಿ ಮಾವೋವಾದಿಗಳು ಶರಣಾಗಿದ್ದರು. ಬಳಿಕ ಇದೀಗ ತೆಲಂಗಾಣದಲ್ಲಿ ಮಾವೋವಾದಿಗಳು ಶರಣಾಗಿದ್ದಾರೆ. ಈ ವರ್ಷ ವಿವಿಧ ಭಾಗದ ಒಟ್ಟು 224 ಮಾವೋವಾದಿಗಳು ಶರಣಾಗಿದ್ದಾರೆ ಎಂದು ಅವರು ಹೇಳಿದರು.



ತೆಲಂಗಾಣದಲ್ಲಿ ಶರಣಾಗಿರುವ ಮಾವೋವಾದಿಗಳಲ್ಲಿ ನಾಲ್ವರು ಪ್ರದೇಶ ಸಮಿತಿ ಸದಸ್ಯರು, ನಾಲ್ವರು ಪಕ್ಷದ ಸದಸ್ಯರು, ಒಬ್ಬ ಮಿಲಿಟಿಯಾ ಕಮಾಂಡರ್, 27 ಮಿಲಿಟಿಯಾ ಸದಸ್ಯರು, ಎಂಟು ಸಮಿತಿ ಸದಸ್ಯರು, ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆ (ಕೆಎಂಎಸ್)/ಕಿಸಾನ್ ಮಜ್ದೂರ್ ಸಂಘಟನೆ (ಕೆಎಂಎಸ್) ನ 20 ಸದಸ್ಯರು, 13 ಚೇತನ ನಾಟ್ಯ ಮಂಚ್ (ಸಿಎನ್‌ಎಂ) ಸದಸ್ಯರು ಮತ್ತು ಒಂಬತ್ತು ಗ್ರಾಮ ರಕ್ಷಕ ದಳಗಳು (ಜಿಆರ್‌ಡಿ) ಸೇರಿದ್ದಾರೆ. ಶರಣಾದವರಲ್ಲಿ 20 ಮಹಿಳೆಯರು ಇದ್ದರು ಎಂದು ಅವರು ತಿಳಿಸಿದರು.

ರಾಜ್ಯ ಪೊಲೀಸ್ ಇಲಾಖೆಯು ಶರಣಾದ ಮಾವೋವಾದಿಗಳಿಗೆ ಜಾರಿಗೊಳಿಸುತ್ತಿರುವ ಕಲ್ಯಾಣ ಕ್ರಮ ಹಾಗೂ ಆದಿವಾಸಿ ಜನರ ಅಭಿವೃದ್ಧಿಗಾಗಿ ಜಾರಿಗೊಳಿಸುತ್ತಿರುವ ವಿವಿಧ ಯೋಜನೆಗಳ ಬಗ್ಗೆ ತಿಳಿದ ಬಳಿಕ ಅವರು ಶರಣಾಗಿದ್ದಾರೆ ಎಂದು ರೆಡ್ಡಿ ಹೇಳಿದರು.

ಇದನ್ನೂ ಓದಿ: Droupadi Murmu: ವಕ್ಫ್​ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ನಾಯಕರ ಕಿರುಕುಳ, ಗ್ರಾಮಸ್ಥರಿಂದ ಹಣ ಸುಲಿಗೆ ಮಾಡಲು ಹೆಚ್ಚುತ್ತಿರುವ ಒತ್ತಡದಿಂದ ಅವರು ಬೇಸೆತ್ತು ಈ ನಿರ್ಧಾರ ಕೈಗೊಂಡಿದ್ದಾರೆ. ತೆಲಂಗಾಣದ ಇನ್ನೂ 95 ಮಾವೋವಾದಿಗಳು ವಿವಿಧ ಪಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಶಾಂತಿ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.

ಶರಣಾದ ಪ್ರದೇಶ ಸಮಿತಿ ಸದಸ್ಯರಿಗೆ ಪುನರ್ವಸತಿ ಕಾರ್ಯಕ್ರಮದ ಅಡಿಯಲ್ಲಿ 5 ಲಕ್ಷ ರೂ., ಮಾವೋವಾದಿ ಪಕ್ಷದ ಸದಸ್ಯರಿಗೆ 1 ಲಕ್ಷ ರೂ. ಮತ್ತು ಇತರರಿಗೆ 25,000 ರೂ. ಪರಿಹಾರವನ್ನು ಅವರು ಘೋಷಿಸಿದರು. ಅಲ್ಲದೇ ಅವರಿಗೆ ಬೇಕಾಗುವ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.