Star fashion: ಕಟೌಟ್ ಡೆನಿಮ್ ಡ್ರೆಸ್‌ನಲ್ಲಿ ನಟಿ ದೀಪಕಾ ದಾಸ್ ಬಿಂದಾಸ್ ಲುಕ್
Star fashion: ಸಮ್ಮರ್‌ನಲ್ಲಿ ಟ್ರೆಂಡಿಯಾಗಿರುವ ಕಟೌಟ್ ಡೆನಿಮ್ ಶೀತ್ ಡ್ರೆಸ್‌ನಲ್ಲಿ ನಟಿ ದೀಪಿಕಾ ದಾಸ್ ಸಖತ್ ಬಿಂದಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ ಏನಿದು ಕಟೌಟ್ ಡೆನಿಮ್ ಡ್ರೆಸ್? ಅವರಂತೆ ಕಾಣಿಸಲು ಆಯ್ಕೆ ಹಾಗೂ ಸ್ಟೈಲಿಂಗ್ ಮಾಡುವುದು ಹೇಗೆ? ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ವಿವರಿಸಿದ್ದಾರೆ.

ಚಿತ್ರಗಳು: ದೀಪಿಕಾ ದಾಸ್, ನಟಿ, ಚಿತ್ರಕೃಪೆ: ಪ್ರದೀಪ್ ಫೋಟೋಗ್ರಾಫಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ನ ಟ್ರೆಂಡ್‌ನಲ್ಲಿರುವ ಕಟೌಟ್ ಡೆನಿಮ್ ಡ್ರೆಸ್‌ನಲ್ಲಿ ನಟಿ ದೀಪಿಕಾ ದಾಸ್ ಬಿಂದಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಔಟ್‌ಫಿಟ್‌ನಲ್ಲಿ ನೋಡಲು ಗ್ಲಾಮರಸ್ ಆಗಿ ಕಾಣಿಸುತ್ತಿರುವ ದೀಪಿಕಾ ದಾಸ್ (Star fashion), ಫ್ಯಾಷನ್ ಪ್ರಿಯ ಫಾಲೋವರ್‌ಗಳನ್ನು ಸೆಳೆದಿದ್ದಾರೆ. ಪರಿಣಾಮ, ಇವರ ಈ ಉಡುಗೆ ಬಿಂದಾಸ್ ಲುಕ್ ಬಯಸುವ ಯುವತಿಯರನ್ನು ಆಕರ್ಷಿಸಿದೆ. ಅಂದಹಾಗೆ, ಸಮ್ಮರ್‌ನಲ್ಲಿ ಡೆನಿಮ್ ಡ್ರೆಸ್ ಧರಿಸುವವರು ತೀರಾ ಕಡಿಮೆ. ಯಾಕೆಂದರೆ ಅದರ ಫ್ಯಾಬ್ರಿಕ್ ತೀರಾ ದಪ್ಪನಾಗಿರುತ್ತದೆ. ಇದನ್ನು ಮನಗಂಡ ಡೆನಿಮ್ ಕಂಪನಿಯು, ಕೆಲವು ವರ್ಷಗಳಿಂದ ಬೇಸಿಗೆಗೂ ಮ್ಯಾಚ್ ಆಗುವಂತಹ ಲೈಟ್‌ವೈಟ್ ಹಾಗೂ ತೆಳುವಾದ ಡೆನಿಮ್ ಫ್ಯಾಬ್ರಿಕ್‌ನ ಉಡುಪುಗಳನ್ನು ಬಿಡುಗಡೆಗೊಳಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಸಮ್ಮರ್ ಸೀಸನ್‌ನಲ್ಲೂ ಕೂಡ ಗ್ಲಾಮರಸ್ ಲುಕ್ ನೀಡುವ ಡೆನಿಮ್ ಉಡುಗೆಗಳು ಆಗಮಿಸುತ್ತಿವೆ.
ಇನ್ನು ಈ ಉಡುಗೆಯಲ್ಲಿ ಸೆಕೆಯಾಗದಂತೆ ಕಟೌಟ್ ಅಂದರೆ ವಿನ್ಯಾಸ ಮಾಡುವಾಗ ಕತ್ತರಿ ಪ್ರಯೋಗ ಮಾಡಿದ ಡಿಸೈನ್‌ನನ್ನು ನಾನಾ ಉಡುಗೆಗಳಲ್ಲಿ ಪರಿಚಯಿಸಲಾಗುತ್ತಿದೆ. ಇದು ಪಾಪುಲರ್ ಕೂಡ ಆಗಿದೆ. ಇವನ್ನು ಧರಿಸಿದರೂ ಸೆಕೆಯಾಗುವುದಿಲ್ಲ! ಗ್ಲಾಮರಸ್ ಆಗಿಯೂ ಕಾಣಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ದೇವ್. ಅವರ ಪ್ರಕಾರ, ಡೆನಿಮ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಲು ಸಾಧ್ಯವಿಲ್ಲ ಎನ್ನುವವರಿಗೆ ಈ ಶೈಲಿಯ ಉಡುಪು ಉತ್ತರವಾಗಬಹುದು ಎನ್ನುತ್ತಾರೆ.

ದೀಪಿಕಾ ಕಟೌಟ್ ಡೆನಿಮ್ ಡ್ರೆಸ್ ಸ್ಟೈಲಿಂಗ್
ಇನ್ನು ದೀಪಿಕಾ ದಾಸ್ ಅವರ ಸ್ಟೈಲಿಂಗ್ ಕೂಡ ಈ ಉಡುಗೆಗೆ ಪೂರಕವಾಗುವಂತಿದೆ. ಗ್ಲಾಮರಸ್ ಲುಕ್ ನೀಡಿದೆ. ಅವರ ಹಾಫ್ ಹನ್ ಹೇರ್‌ಸ್ಟೈಲ್ ಬಿಂದಾಸ್ ಲುಕ್ ನೀಡಿದೆ. ಲಿಂಕ್ ಚೈನ್ ಹಾಗೂ ಕಾಂಪಾಕ್ಟ್ ಸ್ಲಿಂಗ್ ಬ್ಯಾಗ್ ಮಾಡರ್ನ್ ಟಚ್ ನೀಡಿದೆ. ಈ ಜನರೇಷನ್ ಹುಡುಗಿಯರ ಲುಕ್ ಅನ್ನು ಪ್ರತಿಬಿಂಬಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಹುಡುಗಿಯರ ವೀಕೆಂಡ್ ಲುಕ್‌ಗೆ ಡೆನಿಮ್ ಕಟೌಟ್ ಸಾಥ್
ಈ ಔಟ್‌ಫಿಟ್ ಹುಡುಗಿಯರ ವೀಕೆಂಡ್ ಪಾರ್ಟಿಗಳಿಗೆ ಸೂಕ್ತ. ಬಿಂದಾಸ್ ಲುಕ್‌ನೊಂದಿಗೆ ಗ್ಲಾಮರಸ್ ಆಗಿಯೂ ಕಾಣಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

ಕಟೌಟ್ ಡೆನಿಮ್ ಡ್ರೆಸ್‌ನಲ್ಲಿ ಸ್ಟೈಲಿಂಗ್/ಮೇಕೋವರ್ ಹೇಗೆ?
- ಪರ್ಸನಾಲಿಟಿಗೆ ತಕ್ಕಂತೆ ಕಟೌಟ್ ಡೆನಿಮ್ ಆಯ್ಕೆ ಮಾಡಬೇಕು.
- ಕಟೌಟ್‌ಗಳು ಸೂಕ್ತ ಬಾಡಿಟೈಪ್‌ಗೆ ಹೊಂದುವುದೇ ಎಂಬುದನ್ನು ಟ್ರಯಲ್ ನೋಡಿ ಪರಿಶೀಲಿಸಬೇಕು.
- ಸಿಂಪಲ್ ಮೇಕಪ್ ಹಾಗೂ ಜೆನ್ ಜಿ ಹೇರ್‌ಸ್ಟೈಲ್ ಹೊಂದುತ್ತದೆ.
- ಹೈ ಹೀಲ್ಸ್ ಸೆಲೆಬ್ರೆಟಿ ಲುಕ್ ನೀಡುತ್ತದೆ.
- ಉದ್ದಗಿರುವವರಿಗೆ ಇದು ಹೇಳಿ ಮಾಡಿಸಿದ ಔಟ್‌ಫಿಟ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Wedding Fashion: ವೆಡ್ಡಿಂಗ್ ಬ್ರೈಡಲ್‌ವೇರ್ ಶಾಪಿಂಗ್ ಮಾಡುವವರಿಗೆ 5 ಸಿಂಪಲ್ ಐಡಿಯಾ