ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇದು ಮಂಚನಾ.? ಇಲ್ಲ... ಕಾರು? ಏನಿದು ಚಿತ್ರ-ವಿಚಿತ್ರ ಸಂಗತಿ? ವಿಡಿಯೊ ಒಮ್ಮೆ ನೋಡಿ ಬಿಡಿ

ಪಶ್ಚಿಮ ಬಂಗಾಳದ ವ್ಯಕ್ತಿ ನವಾಬ್ ಶೇಖ್ (27) ತಾನು ಮಲಗಿದ್ದ ಹಾಸಿಗೆಯನ್ನೇ ಕಾರಿನಂತೆ ರೆಡಿ ಮಾಡಿ ಮುರ್ಷಿದಾಬಾದ್‍ನ ರಸ್ತೆಯಲ್ಲಿ ಓಡಿಸಿಕೊಂಡು ಬಂದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದು ಸಹ ಪ್ರಯಾಣಿಕರ ಜೊತೆಗೆ ನೆಟ್ಟಿಗರನ್ನು ಆಕರ್ಷಿಸಿದೆ.

ಬೀದಿಯಲ್ಲಿ ಓಡಾಡಿದ ʼಬೆಡ್‌ ಕಾರ್‌ʼ! ಏನಿದರ ವಿಶೇಷತೆ?

Profile pavithra Apr 5, 2025 4:48 PM

ಕೋಲ್ಕತ್ತಾ: ಸೋಶಿಯಲ್‌ ಮೀಡಿಯಾದಲ್ಲಿ ದಿನ ಬೆಳಗಾದರೆ ಒಂದಿಲ್ಲೊಂದು ಚಿತ್ರ ವಿಚಿತ್ರ ಸಂಗತಿಗಳು ಗಮನ ಸೆಳೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ಹೀಗೂ ಉಂಟೇ ಎಂದು ಮೂಗು ಮೇಲೆ ಬೆರಳಿಡುವಂತೆ ಮಾಡುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೊ ವೈರಲ್‌ ಆಗುತ್ತಿದೆ. ರಸ್ತೆಯಲ್ಲಿ ಹಾಸಿಗೆ, ಮಂಚ ಓಡಾಡುವುದನ್ನು ನೀವೆಲ್ಲಾದ್ರೂ ನೋಡಿದ್ರಾ...? ಹೌದು ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ತಾನು ಮಲಗುವ ಹಾಸಿಗೆಯನ್ನೇ ಕಾರಿನಂತೆ ರೆಡಿಮಾಡಿ ಮುರ್ಷಿದಾಬಾದ್‍ನ ರಸ್ತೆಯಲ್ಲಿ ಓಡಿಸಿದ್ದಾನೆ. ಅರೆ...ಇದೇನಿದು ಎಂದು ನಿಮಗೂ ಕೂಡ ಆಶ್ಚರ್ಯವಾಗುತ್ತಿದೆಯಾ...? ಇವನ ಕಾರಿನಂತೆ ಓಡಾಡಿದ ಹಾಸಿಗೆ ಮಂಚದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿ ಎಲ್ಲರನ್ನೂ ಶಾಕ್‌ ಆಗುವಂತೆ ಮಾಡಿದ್ದಾನೆ.

ನವಾಬ್ ಶೇಖ್ (27) ಎಂದು ಗುರುತಿಸಲ್ಪಟ್ಟ ವ್ಯಕ್ತಿ ರಾಣಿನಗರ-ಡೊಮ್ಕಲ್ ಮಾರ್ಗದಲ್ಲಿ ತಮ್ಮ ಹಾಸಿಗೆ ಆಧಾರಿತ ವಾಹನವನ್ನು ಓಡಿಸುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೊದಲ್ಲಿ ಆತ ತನ್ನ 'ಬೆಡ್ ಕಾರ್' ಅನ್ನು ಬೀದಿಗಳಲ್ಲಿ ಓಡಿಸುವುದು ಸೆರೆಯಾಗಿದೆ. ಇವನ ಈ ವಾಹನವನ್ನು ನೋಡಿ ರಸ್ತೆಯಲ್ಲಿದ್ದ ಜನರು ಕೂಡ ಶಾಕ್‌ ಆಗಿದ್ದಾರೆ.

ಈ ವಿಶಿಷ್ಟ ಕಾರಿನ ವಿಡಿಯೊ ಇಲ್ಲಿದೆ ನೋಡಿ...



ನವಾಬನ ಈ ವಿಭಿನ್ನ ಕಾರಿನಲ್ಲಿ ಡ್ರೈವ್‍ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆಯೂ ಇದೆಯಂತೆ. ಇವನ ಈ ಬೆಡ್‌ ಕಾರಿನಲ್ಲಿ ಬ್ರೇಕ್‍, ರಿಯರ್ ವ್ಯೂ ಮಿರರ್‌ಗಳು ಮತ್ತು ಸ್ಟೀರಿಂಗ್ ಅಳವಡಿಸಲಾಗಿತ್ತು ಮತ್ತು ಇದು ಸಾಮಾನ್ಯ ಕಾರಿನಂತೆ ನಾಲ್ಕು ಚಕ್ರಗಳಲ್ಲಿ ಚಲಿಸುತ್ತಿತ್ತು. ಸೀಟುಗಳು ಸಹ ಹೈಲೈಟ್ ಆಗಿದ್ದವು. ಕಾರಿನ ಆರಾಮದಾಯಕ ಸೀಟುಗಳ ಬದಲು, ಈ ವ್ಯಕ್ತಿ ಅಲ್ಲಿ ಸಂಪೂರ್ಣ ಹಾಸಿಗೆಯನ್ನು ಅಳವಡಿಸಿದ್ದಾನೆ.

ಈ ವಾಹನದ ಬಗ್ಗೆ ಆತ ನೀಡಿದ ಮಾಹಿತಿಯಲ್ಲಿ ಈ 'ಬೆಡ್ ಕಾರ್' ಅನ್ನು ರಚಿಸಲು ಮತ್ತು ಅದನ್ನು ರಸ್ತೆಗಳಿಗೆ ತರಲು ಅವನು ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದಾನಂತೆ. ಇದರ ಸಂಪೂರ್ಣ ಯೋಜನೆಗೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಆತ ತಿಳಿಸಿದ್ದಾನೆ. ಅವನು ತನ್ನ ವಿಶಿಷ್ಟ ಕಾರನ್ನು ತಯಾರಿಸಲು ತನ್ನ ಹೆಂಡತಿಯ ಆಭರಣಗಳನ್ನು ಮಾರಾಟ ಮಾಡಿದ್ದಾನೆ ಎಂಬುದಾಗಿ ತಿಳಿಸಿದ್ದಾನೆ.

ಈದ್ ದಿನದಂದು ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದರಿಂದ ಇದು ಹಲವಾರು ನೆಟ್ಟಿಗರನ್ನು ಆಕರ್ಷಿಸಿದೆ. ಹೀಗಾಗಿ ಇದು ತಕ್ಷಣ ವೈರಲ್ ಆಗಿ ನವಾಬ್ ಅವನನ್ನು ಇಂಟರ್ನೆಟ್ ಸೆನ್ಸೇಷನ್ ಆಗಿ ಮಾಡಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಕಾರು, ಸ್ಕೂಟರ್‌ ಬಿಡಿಭಾಗಗಳೇ ಈತನ ಮನೆಯ ಅಲಂಕಾರಿಕ ವಸ್ತು! ಇಲ್ಲಿದೆ ವಿಡಿಯೊ

ಇತ್ತೀಚೆಗೆ ಕೇರಳದ ಬೈಕ್ ಪ್ರೇಮಿಯೊಬ್ಬ ತಮ್ಮ ಮನೆಯ ಪ್ರತಿಯೊಂದು ಕೋಣೆಯನ್ನು ವಾಹನದ ಬಿಡಿ ಭಾಗ‌ ಬಳಸಿಕೊಂಡು ಕಲಾತ್ಮಕ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾನೆ.  ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ  ವೈರಲ್ ಆಗಿದೆ.ಕೇರಳದ  ಪ್ರಿಯಮ್ ಸಾರಸ್ವತ್  ಎನ್ನುವ ಬೈಕ್ ಉತ್ಸಾಹಿಯೊಬ್ಬರು ಈ ಕಲಾತ್ಮಕ ಕ್ರಿಯೇಟಿವಿಟಿ ಮಾಡಿದ್ದಾರೆ.

ತಮ್ಮ ಮನೆಯ ಪ್ರತಿಯೊಂದು ಕೋಣೆಯನ್ನು ವಾಹನದ ವಿವಿಧ  ಬಿಡಿಭಾಗ ಬಳಸಿಕೊಂಡು  ವಿನ್ಯಾಸಗೊಳಿಸಿದ್ದಾರೆ. ಬಜಾಜ್ ಸ್ಕೂಟರ್ ಹ್ಯಾಂಡಲ್‌ನಿಂದ ಮಾಡಿದ ಲೈಟ್, ಸ್ಕೂಟರ್ ಬಳಸಿ ರಚಿಸಲಾದ ಸೋಫಾ ಇವರ ಮನೆಯನ್ನು ಕಣ್ಮನ ಸೆಳೆಯುವಂತೆ ಮಾಡಿದೆ.  ತನ್ನ  ರೂಮ್‌ನಿಂದ ಹಿಡಿದು  ಡೈನಿಂಗ್ ರೂಮ್‌ವರೆಗೆ ಪ್ರತಿ ಜಾಗವನ್ನು ಬೈಕ್‌ನ ಪಾರ್ಟ್‌ಗಳಿಂದ  ಸೃಜನಾತ್ಮಕವಾಗಿ ಅಲಂಕರಿಸಿದ್ದಾರೆ. ಐಐಟಿ ಪದವೀಧರರಾಗಿರುವ ಸಾರಸ್ವತ್  ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿಯೂ ಕೆಲಸ ಮಾಡಿದ್ದಾರೆ.