Chikkaballapur News: ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮ್ ಜನ್ಮದಿನ: ಸೇವಾಕಾರ್ಯಗಳ ಮೂಲಕ ಆಚರಣೆ
ಎಂ.ಆರ್.ಸೀತಾರಾಮ್ ಅವರು ಪ್ರಬುದ್ಧ ರಾಜಕಾರಣಿ. ಎಂ.ಎಸ್.ರಾಮಯ್ಯ ಅವರ ಸುಪುತ್ರ ರಾದ ಇವರು ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತವಾಗದೆ ನಿರಂತರವಾಗಿ ಸಮಾಜ ಸೇವೆ ಯಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯಕ್ಕೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ಬಡವರಿಗೆ ತಮ್ಮ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಒದಗಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು, ಅವರು ರಾಜಕೀಯವಾಗಿ ಇನ್ನಷ್ಟು ಬೆಳೆಯಲಿ, ದೇವರು ಆಯಸ್ಸು ಆರೋಗ್ಯ ನೀಡಲಿ ಎಂದರು

ಚಿಕ್ಕಬಳ್ಳಾಪುರ ಮಕ್ಕಳ ಆಸ್ಪತ್ರೆಯಲ್ಲಿ ಎಂ.ಆರ್.ಸೀತಾರಾಂ ಅವರ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.

ಚಿಕ್ಕಬಳ್ಳಾಪುರ : ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಅವರ ಹುಟ್ಟುಹಬ್ಬ ವನ್ನು ಕಾಂಗ್ರೆಸ್ ಮುಖಂಡರು ಸೇವಾ ಕಾರ್ಯಗಳ ಮೂಲಕ ವಿಶಿಷ್ಟವಾಗಿ ಆಚರಿಸಿ ಶುಭ ಕೋರಿದರು. ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ, ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಕೂಲಿ ಕಾರ್ಮಿಕರಿಗೆ ಅನ್ನಸಂತರ್ಪಣೆ, ರಂಗಸ್ಥಳದ ವೃದ್ಧಾಶ್ರಮದಲ್ಲಿ ಹಿರಿಯ ಜೀವಗಳಿಗೆ ಊಟದ ವ್ಯವಸ್ಥೆ ಏರ್ಪಡಿಸಿದ್ದರು.
ಈ ವೇಳೆ ಮಾತನಾಡಿದ ಜಿ.ಪಂ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ, ಎಂ.ಆರ್.ಸೀತಾರಾಮ್ ಅವರು ಪ್ರಬುದ್ಧ ರಾಜಕಾರಣಿ. ಎಂ.ಎಸ್.ರಾಮಯ್ಯ ಅವರ ಸುಪುತ್ರರಾದ ಇವರು ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತವಾಗದೆ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯಕ್ಕೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ಬಡವರಿಗೆ ತಮ್ಮ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಒದಗಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು, ಅವರು ರಾಜಕೀಯವಾಗಿ ಇನ್ನಷ್ಟು ಬೆಳೆಯಲಿ, ದೇವರು ಆಯಸ್ಸು ಆರೋಗ್ಯ ನೀಡಲಿ ಎಂದರು.
ಇದನ್ನೂ ಓದಿ: Chikkaballapur News: ಶಾಂತಿಯನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿ, ಎಲ್ಲರ ಜೀವನದಲ್ಲಿ ಸುಖ ಶಾಂತಿ ನೆಲೆಸಲಿ
ಹಿರಿಯ ಕಾಂಗ್ರೆಸ್ ಮುಖಂಡ ಲಾಯರ್ ನಾರಾಯಣಸ್ವಾಮಿ ಮಾತನಾಡಿ ಎಂಎಲ್‌ಸಿ ಎಂ.ಆರ್ ಸೀತಾರಾಮ್ ಅವರ ಕುಟುಂಬ ಬಹಳಷ್ಟು ಕಷ್ಟಪಟ್ಟು ಮುಂದುಬಂತಹ ಕುಟುಂಬವಾಗಿದೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇದೆ. ಶಿಕ್ಷಣ ಸಮಾಜಸೇವೆ ಆರೋಗ್ಯ ಸೇವೆಗಳಲ್ಲಿ ಕೊಡುಗೈದಾನಿಗಳಾಗಿದ್ದಾರೆ. ಬಡವ ಶ್ರೀಮಂತ,ಚಿಕ್ಕ ದೂಡ್ಡ ಎಂಬ ಭಾವನೆ ಅವರಲ್ಲಿಲ್ಲ.ಎಲ್ಲರ ಜೊತೆ ಸರಳವಾಗಿ ಬೆರೆತು ಮುನ್ನೆಡೆಯುವ ರೀತಿ ಇತರರಿಗೆ ಮಾದರಿ. ದೂಡ್ಡ ಮನಸ್ಸುಳ್ಳ ಸೀತಾರಾಮ್ ಅವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದರು.
ಈ ವೇಳೆ ಮುಖಂಡ ಲಾಯರ್ ನಾರಾಯಣಸ್ವಾಮಿ, ಕಣಜೇನಹಳ್ಳಿ ಕೆ.ವಿ.ಸುರೇಶ್, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಕಾಂಗ್ರೆಸ್ ಉಪಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ, ಪ್ರಧಾನ ಕಾರ್ಯದರ್ಶಿ ವಿ.ಸುರೇಶ್, ನಗರಸಭೆ ಸದಸ್ಯ ನರಸಿಂಹಮೂರ್ತಿ, ವೀಣಾ ರಾಮು, ವೆಂಕಟೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಆವಲ ರೆಡ್ಡಿ, ನಾಯನಹಳ್ಳಿ ನಾರಾಯಣ ಸ್ವಾಮಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ ಅಚ್ಚು, ಡೇರಿ ಗೋಪಿ, ಅಣ್ಣೆಮ್ಮ, ಮೊಲ್ಡ್ ವೆಂಕಟೇಶ್, ಸುಮಿತ್ರ, ನಜೀರಬೇಗಂ, ವೆಂಕಟಲಕ್ಷ್ಮಮ್ಮ, ಮಂಗಳ ಪ್ರಕಾಶ್, ಕಲಾವತಿ ಇದ್ದರು.