ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ʼಕಾಂತಾರʼ, ʼಜೈ ಹನುಮಾನ್‌ʼ, ʼಶಿವಾಜಿʼ; 3 ಭಾಷೆಗಳ, 3 ವಿಭಿನ್ನ ಪಾತ್ರಗಳಲ್ಲಿ ರಿಷಬ್‌ ಶೆಟ್ಟಿ

Kantara—Chapter 1: ಕಾಂತಾರ ಚಿತ್ರದ ಮೂಲಕ ದೇಶದ ಗಮನ ಸೆಳೆದ ಸ್ಯಾಂಎಲ್‌ವುಡ್‌ ನಟ, ನಿರ್ದೇಶಕ ಸದ್ಯ ವಿವಿಧ ಭಾಷೆಗಳ ಅವಕಾಶವನ್ನು ಬಾಚಿಕೊಳ್ಳುತ್ತಿದ್ದಾರೆ. ಕಾಂತಾರ: ಚಾಪ್ಟರ್‌ 1 ಜತೆಗೆ ಬಹು ನಿರೀಕ್ಷಿತ ಟಾಲಿವುಡ್‌ನ ಜೈ ಹನುಮಾನ್‌, ಬಾಲಿವುಡ್‌ನ ʼದಿ ಪ್ರೈಡ್‌ ಆಫ್‌ ಭಾರತ್‌-ಛತ್ರಪತಿ ಶಿವಾಜಿ ಮಹಾರಾಜ್‌ʼ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ.

3 ವಿಭಿನ್ನ ಪಾತ್ರಗಳಲ್ಲಿ ರಿಷಬ್‌ ಶೆಟ್ಟಿ; ಮತ್ತೊಂದು ಮ್ಯಾಜಿಕ್‌ಗೆ ಸಜ್ಜು

ರಿಷಬ್‌ ಶೆಟ್ಟಿ.

Profile Ramesh B Apr 5, 2025 5:48 PM

ಬೆಂಗಳೂರು: ನಟನಾಗಿ ವೃತ್ತಿ ಜೀವ ಆರಂಭಿಸಿ ಬಳಿಕ ನಿರ್ದೇಶಕನ ಕ್ಯಾಪ್‌ ತೊಟ್ಟು ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ರಿಷಬ್‌ ಶೆಟ್ಟಿ (Rishab Shetty) ಅವರ ಸಿನಿ ಜರ್ನಿ ಗಮನ ಸೆಳೆಯುವಂತಹದ್ದು. 2022ರಲ್ಲಿ ತೆರೆಕಂಡ ʼಕಾಂತಾರʼ (Kantara) ಸಿನಿಮಾ ಮೂಲಕ ಇಡೀ ದೇಶದ ಗಮನವನ್ನು ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ರಿಷಬ್‌ ಶೆಟ್ಟಿ ಸದ್ಯ ಬಹು ಬೇಡಿಕೆಯ ನಟ, ನಿರ್ದೇಶಕ. ʼಕಿರಿಕ್‌ ಪಾರ್ಟಿʼ, ʼಸ.ಹಿ.ಪ್ರಾ.ಶಾಲೆ ಕಾಸರಗೋಡುʼ ಮುಂತಾದ ಸೂಪರ್‌ ಹಿಟ್‌ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ಅವರು 'ಕಾಂತಾರ'ದ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ತೆರೆದಿಟ್ಟರು. ಮಾಸ್‌ ಜತೆಗೆ ಕ್ಲಾಸ್‌ ಚಿತ್ರಕ್ಕೂ ಸೈ ಎನಿಸಿಕೊಂಡರು. ನಿರ್ದೇಶನದ ಜತೆಗೆ ನಾಯಕನಾಗಿಯೂ ಮಿಂಚಿದರು. ಸದ್ಯ ಕನ್ನಡದ ಜತೆಗೆ ವಿವಿಧ ಭಾಷೆಗಳಿಂದ ಅವಕಾಶ ಅವರನ್ನು ಅರಸಿಕೊಂಡು ಬರುತ್ತಿದೆ.

ಇದೀಗ ರಿಷಬ್‌ ಶೆಟ್ಟಿ 3 ಭಾಷೆಗಳ 3 ವಿಭಿನ್ನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಈ 3 ಚಿತ್ರಗಳೂ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವಂತಹ ಸಾಮರ್ಥ್ಯ ಹೊಂದಿವೆ. ʼಕಾಂತಾರ: ಚಾಪ್ಟರ್‌ 1ʼ, ʼಜೈ ಹನುಮಾನ್‌ʼ ಮತ್ತು ʼದಿ ಪ್ರೈಡ್‌ ಆಫ್‌ ಭಾರತ್‌-ಛತ್ರಪತಿ ಶಿವಾಜಿ ಮಹಾರಾಜ್‌ʼ ಚಿತ್ರಗಳಲ್ಲಿ ಸದ್ಯ ರಿಷಬ್‌ ಶೆಟ್ಟಿ ತೊಡಗಿಸಿಕೊಂಡಿದ್ದಾರೆ. ರಿಷಬ್‌ ಶೆಟ್ಟಿ ಅವರ ಕಾರಣಕ್ಕೆ ಈ ಚಿತ್ರಗಳ ಮೇಲೆನ ನಿರೀಕ್ಷೆ ಈಗಾಗಲೇ ಗರಿಗೆದರಿದೆ.

ʼಕಾಂತಾರ: ಚಾಪ್ಟರ್‌ 1ʼ ಚಿತ್ರ ಪೋಸ್ಟರ್‌:

ಈ ಸುದ್ದಿಯನ್ನೂ ಓದಿ: Kantara Chapter 1: ರಿಷಬ್‌ ಶೆಟ್ಟಿಯ 'ಕಾಂತಾರ: ಚಾಪ್ಟರ್‌ 1' ರಿಲೀಸ್‌ ಡೇಟ್‌ ಮುಂದೂಡಿಕೆ ಆಯ್ತಾ? ಇಲ್ಲಿದೆ ಚಿತ್ರತಂಡದ ಸ್ಪಷ್ಟನೆ

ʼಕಾಂತಾರ: ಚಾಪ್ಟರ್‌ 1ʼ

ಈ ವರ್ಷ ಅತ್ಯಂತ ಕುತೂಹಲ ಕೆರಳಿದ ಚಿತ್ರಗಳ ಪೈಕಿ ಸ್ಯಾಂಡಲ್‌ವುಡ್‌ನ ʼಕಾಂತಾರ: ಚಾಪ್ಟರ್‌ 1ʼ ಮೊದಲ ಸಾಲಿನಲ್ಲಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಇದು. ಅಂದರೆ ʼಕಾಂತಾರʼದ ಕಥೆ ನಡೆಯುವುದಕ್ಕೆ ಮೊದಲು ಏನಾಗಿತ್ತು ಎನ್ನುವುದನ್ನು ಈ ಭಾಗದಲ್ಲಿ ರಿಷಬ್‌ ವಿವರಿಸಲಿದ್ದಾರೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ಅವರು ಮುಂದುವರಿದಿದ್ದಾರೆ. ಅವರ ಹೊರತು ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಗುಟ್ಟು ಇನ್ನೂ ಹೊರ ಬಿದ್ದಿಲ್ಲ. ಈ ಸಿನಿಮಾ ಅ. 2ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಕೆಲವು ತಿಂಗಳ ಹಿಂದ ಹೊರ ಬಿದ್ದಿರುವ ಫಸ್ಟ್‌ ಲುಕ್‌ ಪೋಸ್ಟರ್‌ ಗಮನ ಸೆಳೆದಿದ್ದು, ರಿಷಬ್‌ ಶೆಟ್ಟಿ ಅದ್ಧೂರಿಯಾಗಿ, ವಿಶಿಷ್ಟವಾಗಿ ಸಿನಿಮಾ ಕಟ್ಟಿ ಕೊಡಲಿದ್ದಾರೆ. ಇದರ ಬಜೆಟ್‌ ಸುಮಾರು 125 ಕೋಟಿ ಎನ್ನಲಾಗಿದೆ. ಹೊಂಬಾಳೆ ಫಿಲ್ಮ್ಸ್‌ ಚಿತ್ರವನ್ನು ನಿರ್ಮಿಸುತ್ತದೆ.

ʼಜೈ ಹನುಮಾನ್‌ʼ ಚಿತ್ರದ ಪೋಸ್ಟರ್‌:

ʼಜೈ ಹನುಮಾನ್‌ʼ

ʼಕಾಂತಾರʼ ಜತೆಗೆ ರಿಷಬ್‌ ಶೆಟ್ಟಿ ಒಪ್ಪಿಕೊಂಡಿರುವ ಮತ್ತೊಂದು ಬಹು ನಿರೀಕ್ಷಿತ ಚಿತ್ರ ʼಜೈ ಹನುಮಾನ್‌ʼ. ಟಾಲಿವುಡ್‌ ಮೂಲದ ಈ ಚಿತ್ರವೂ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕಳೆದ ವರ್ಷ ತೆರೆಕಂಡ ʼಹನುಮಾನ್‌ʼ ಸಿನಿಮಾದ ಸೀಕ್ವೆಲ್‌ ಇದಾಗಿದ್ದು, ಪ್ರಶಾಂತ್‌ ವರ್ಮಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಹನುಮಂತನ ಪಾತ್ರ ನಿರ್ವಹಿಸಲಿದ್ದಾರೆ. ಭಕ್ತ ಮತ್ತು ಹನುಮಂತನ ನಡುವಿನ ಕಥೆ ಹೊಂದಿರುವ ಈ ಸಿನಿಮಾ ಈ ವರ್ಷವೇ ತೆರೆಗೆ ಬರಲಿದೆ. ʼಹನುಮಾನ್‌ʼ ಸಿನಿಮಾದಲ್ಲಿ ಗಮನ ಸೆಳದ ತೇಜ್‌ ಸಜ್ಜಾ ನಾಯಕನಾಗಿ ಮುಂದುವರಿಯಲಿದ್ದಾರೆ.

ʼದಿ ಪ್ರೈಡ್‌ ಆಫ್‌ ಭಾರತ್‌-ಛತ್ರಪತಿ ಶಿವಾಜಿ ಮಹಾರಾಜ್‌ʼ ಚಿತ್ರದ ಪೋಸ್ಟರ್‌:

ʼದಿ ಪ್ರೈಡ್‌ ಆಫ್‌ ಭಾರತ್‌-ಛತ್ರಪತಿ ಶಿವಾಜಿ ಮಹಾರಾಜ್‌ʼ

ಭಾರತ ಕಂಡ ಅಪ್ರತಿಮ ದೇಶಭಕ್ತ, ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪಾತ್ರವನ್ನೂ ರಿಷಬ್‌ ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ತಯಾರಾಗಲಿರುವ ಈ ಸಿನಿಮಾದ ಮೂಲಕ ರಿಷಬ್‌ ಮೊದಲ ಬಾರಿ ಔತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಸಂದೀಪ್‌ ಸಿಂಗ್‌ ನಿರ್ದೇಶನದ ಈ ಚಿತ್ರ 2027ರ ಜ. 21ರಂದು ರಿಲೀಸ್‌ ಆಗಲಿದೆ. ಈ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಕೂಡ ಗಮನ ಸೆಳೆದಿದೆ.

ಒಟ್ಟಿನಲ್ಲಿ ರಿಷಬ್‌ ಶೆಟ್ಟಿ ಕಾಣಿಸಿಕೊಳ್ಳುತ್ತಿರುವ ಒಂದಲ್ಲ ಎರಡಲ್ಲ ಬರೋಬ್ಬರಿ 3 ಚಿತ್ರಗಳು ಕುತೂಹಲ ಕೆರಳಿಸಿದ, ಬಹು ನಿರೀಕ್ಷಿತ ಚಿತ್ರಗಳ ಪೈಕಿ ಸ್ಥಾನ ಪಡೆದಿವೆ. ಈಗಾಗಲೇ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಅವರು 3 ವರ್ಷಗಳ ಬಳಿಕ ಮತ್ತೊಮ್ಮೆ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಲು ಸಜ್ಜಾಗಿದ್ದಾರೆ.