ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bath Every day: ದಿನ ನಿತ್ಯ ಸ್ನಾನ ಮಾಡಿದ್ರೆ ಸಿಗುವ ಪ್ರಯೋಜನಗಳೇನು?

ತಜ್ಞರು ಹೇಳುವಂತೆ, ಚರ್ಮವನ್ನು ರಕ್ಷಿಸಲು ಹಾಗೇ ಚರ್ಮದ ಮೇಲಿನ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ತೆಗೆದು ಹಾಕಲು ಸ್ನಾನ ಮುಖ್ಯ. ಹಾಗಾಗಿ ನಿಯಮಿತ ಸ್ನಾನವು ಉತ್ತಮ ಅಭ್ಯಾಸ ಎನಿಸಿಕೊಂಡಿದೆ. ಪ್ರತಿದಿನ ತಪ್ಪದೇ ಸ್ನಾನ ಮಾಡುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುವ ಜತೆಗೆ ಒತ್ತಡ ಹಾರ್ಮೋನುಗಳ ನಿಯಂತ್ರಣವಾಗುತ್ತದೆ.

ವೈದ್ಯರ ಪ್ರಕಾರ ದಿನ ನಿತ್ಯ ಸ್ನಾನ‌ಮಾಡಬೇಕೋ? ಬೇಡವೋ?

Every Day Bath

Profile Pushpa Kumari Apr 5, 2025 7:00 AM

ಬೆಂಗಳೂರು: ದೇಹವನ್ನು ಸ್ವಚ್ಛವಾಗಿ ಮತ್ತು ಲವಲವಿಕೆಯಿಂದ ಇರುವಂತೆ ಮಾಡಲು ಸ್ನಾನ ಅತ್ಯಗತ್ಯ. ಪ್ರತಿದಿನ ಸ್ನಾನ ಮಾಡಿದ್ರೆ (Bath Every day) ಮಾತ್ರ ಒಂಥರಾ ಫ್ರೆಶ್ ಫೀಲ್ ಇರುತ್ತದೆ. ಹೆಚ್ಚಿನ ಜನರು ದಿನಕ್ಕೆ ಒಮ್ಮೆ ಸ್ನಾನ ಮಾಡಿದರೆ ಇನ್ನು ಕೆಲವರು ದಿನಕ್ಕೆ 2ರಿಂದ 3 ಬಾರಿ ಸ್ನಾನ ಮಾಡುತ್ತಾರೆ. ಪ್ರಾಚೀನ ಗ್ರಂಥಗಳಲ್ಲಿಯು ಸ್ನಾನ ಮಾಡುವುದರಿಂದ ಅದೃಷ್ಟ, ಖುಷಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ಬಗ್ಗೆಯು ಉಲ್ಲೇಖವಿದೆ. ಹಾಗಾದರೆ ಸ್ನಾನ ಮಾಡುವುದರಿಂದ ಉಂಟಾಗುವ ಪ್ರಯೋಜನವೇನು? ಪ್ರತಿದಿನ ಸ್ನಾನ ಮಾಡಬೇಕೋ? ಬೇಡವೋ ಈ ಬಗ್ಗೆ ವೈದ್ಯರ ಸಲಹೆ ಏನು? ಎನ್ನುವ ಮಾಹಿತಿ‌ ಇಲ್ಲಿದೆ.

ತಜ್ಞರು ಹೇಳುವಂತೆ, ಚರ್ಮವನ್ನು ರಕ್ಷಿಸಲು ಹಾಗೇ ಚರ್ಮದ ಮೇಲಿನ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ತೆಗೆದು ಹಾಕಲು ಸ್ನಾನ ಬಹಳಷ್ಟು ಮುಖ್ಯ. ಹಾಗಾಗಿ ನಿಯಮಿತ ಸ್ನಾನವು ಆರೋಗ್ಯಕರ ಅಭ್ಯಾಸ. ಪ್ರತಿದಿನ ತಪ್ಪದೇ ಸ್ನಾನ ಮಾಡುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುವ ಜತೆಗೆ ಒತ್ತಡ ಹಾರ್ಮೋನುಗಳನ್ನು ನಿಯಂತ್ರಿಬಹುದು. ಇನ್ನು ಎಷ್ಟು ದಿನಕೊಮ್ಮೆ ಸ್ನಾನ ಮಾಡುತ್ತೇವೆ ಎನ್ನುವುದಕ್ಕಿಂತಲೂ ಸ್ನಾನ ಮಾಡಲು ತೆಗೆದುಕೊಳ್ಳುವ ಸಮಯ ಬಹಳ ಮುಖ್ಯವಾಗುತ್ತದೆ. ಕೆಲವರು ಬಹಳ ಸಮಯದವರೆಗೆ ಸ್ನಾನ ಮಾಡುತ್ತಾರೆ. ನೀರಿನಲ್ಲಿ ಹೆಚ್ಚು ಸಮಯ ಇದ್ದಾಗ ಅದು ತ್ವಚೆ ಹಾಗೂ ಕೂದಲಿಗೆ ಹಾನಿಯಾಗುವ ಸಾಧ್ಯತೆ ಎಂದು ತಜ್ಞರು ತಿಳಿಸುತ್ತಾರೆ. ಹಾಗಾಗಿ ದಿನದಲ್ಲಿ ಸುಮಾರು 4ರಿಂದ 6 ನಿಮಿಷಗಳ ಕಾಲ ಸ್ನಾನ ಮಾಡಿದರೆ ಸಾಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಅನೇಕ ಬಾರಿ ನಾವು ಚರ್ಮದ ಆರೈಕೆಗಾಗಿ ನೈಸರ್ಗಿಕ ತೈಲ, ಸೋಪ್ ಇತ್ಯಾದಿಯನ್ನು ಬಳಸಿ ಸ್ನಾನ ಮಾಡುತ್ತೇವೆ‌. ಇಂತಹ ಉತ್ಪನ್ನಗಳು ಚರ್ಮದ ಬ್ಯಾಕ್ಟೀರಿಯಾ, ಸೋಂಕು ಬರದಂತೆ ರಕ್ಷಣಾತ್ಮಕ ರೀತಿಯಲ್ಲಿ ಕೆಲಸ ಮಾಡುತ್ತದೆ. ಆದರೆ ಅತಿಯಾದ ಬಳಕೆಯಿಂದ ನೈಸರ್ಗಿಕ ಚರ್ಮ ಶುಷ್ಕವಾಗುವ ಸಾಧ್ಯತೆ ಇದೆ. ಶುಷ್ಕ ತ್ವಚೆಗೆ ಸೋರಿಯಾಸಿಸ್ ಮತ್ತು ಎಸ್ಜಿಮಾದಂತ ಚರ್ಮ ರೋಗ ಬರುವ ಅಪಾಯವೂ ಇಲ್ಲದಿಲ್ಲ.

ಕಡಿಮೆ ಸಮಯ ತೆಗೆದುಕೊಳ್ಳಿ

ನೀರಿನಲ್ಲಿ ಅಧಿಕ ಸಮಯ ಸ್ನಾನ ಮಾಡಿದಾಗ ನಿಮ್ಮ ದೇಹದ ತೇವಾಂಶ ಕಳೆದುಕೊಳ್ಳಲಿದೆ. ಹೆಚ್ಚು ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಸಹ ಒಣ ತ್ವಚೆ ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ನೀವು ಸ್ನಾನವನ್ನು ಹೆಚ್ಚು ಸಮಯ ಮಾಡದೆ ಕಡಿಮೆ ಸಮಯ ತೆಗೆದುಕೊಳ್ಳುವುದು ಉತ್ತಮ. ಹೆಚ್ಚು ಬಿಸಿ ನೀರಿಗಿಂತಲು ಉಗುರು ಬೆಚ್ಚನೆ ನೀರಿನ ಸ್ನಾನ ಮಾಡಿದರೆ ಚರ್ಮದ ಸಮಸ್ಯೆ ಬರಲಾರದು.

ಬಳಸುವ ಉತ್ಪನ್ನ ಮುಖ್ಯ

ಸ್ನಾನ ಎಷ್ಟು ಸಮಯ ಮಾಡುತ್ತೇವೆ ಎನ್ನುದಕ್ಕಿಂತಲೂ ಯಾವ ಉತ್ಪನ್ನಗಳನ್ನು ಬಳಸುತ್ತೇವೆ ಎನ್ನುವುದು ಮುಖ್ಯ. ಅಂದರೆ ನೀವು ಬಳಸುವ ಶಾಂಪೂ, ಸೋಪ್ ಇತ್ಯಾದಿ ಉತ್ಪನ್ನದಲ್ಲಿ ಚರ್ಮಕ್ಕೆ ಹಾನಿಯಾಗುವ ಅಂಶ ಇದೆ ಅಥವಾ ಇಲ್ಲವೇ ಎಂದು ಪರಿಶೀಲಿಸಬೇಕು. ಜತೆಗೆ ಮೃದುವಾದ, ಸುಗಂಧ ರಹಿತ ಕ್ಲೇನರ್‌ಗಳನ್ನು ಬಳಸಬೇಕು. ಹೀಗೆ ಮಾಡುವುದರಿಂದ ಚರ್ಮದ ತುರಿಕೆ, ಅಲರ್ಜಿ ಇತರ ಸಮಸ್ಯೆ ಬರದಂತೆ ತಡೆ ಹಿಡಿಯಬಹುದು. ಒಣ ತ್ವಚೆ, ಎಣ್ಣೆ ಅಂಶದ ತ್ವಚೆ, ಸೂಕ್ಷ್ಮ ತ್ವಚೆಗಾಗಿ ಪ್ರತ್ಯೇಕ ಕ್ರೀಮ್, ಲೋಷನ್ ಇದ್ದು ಅವುಗಳನ್ನು ಸರಿಯಾಗಿ ತಿಳಿದ ಬಳಿಕವೇ ಬಳಸಿ.

ಇದನ್ನು ಓದಿ: Health Tips: ರಾಸಾಯನಿಕ ಬಳಸಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ?

ನಿತ್ಯ ಸ್ನಾನ ಮಾಡುವುದರಿಂದ ಏನೆಲ್ಲ ಉಪಯೋಗ ಇದೆ?

*ಚರ್ಮಕ್ಕೆ ಪುನಶ್ಚೇತನ ಸಿಕ್ಕಿ ರಕ್ತ ಪರಿಚಲನೆ ಸರಾಗವಾಗುತ್ತದೆ.

*ಮಾನಸಿಕ ಮತ್ತು ದೈಹಿಕ ಒತ್ತಡದ ವಿರುದ್ಧ ಹೋರಾಡುವ ಜತೆಗೆ ಸ್ನಾಯು ಒತ್ತಡದ ಸಮಸ್ಯೆ ನಿವಾರಣೆ ಆಗುತ್ತದೆ.

*ಬ್ಯಾಕ್ಟೀರಿಯಾ, ಇತರ ಸಾಂಕ್ರಾಮಿಕ ರೋಗ ಬರದಂತೆ ತಡೆಯುತ್ತದೆ.

*ಶ್ವಾಸಕೋಶದ ಮೇಲೆ ಧನಾತ್ಮಕ ಪರಿಣಾಮ ಬೀರಿ ಉಸಿರಾಟದ ಸಮಸ್ಯೆ ನಿವಾರಣೆ ಆಗುತ್ತದೆ.

*ತ್ವಚೆಯ ಡ್ರೈನೆಸ್ ಸಮಸ್ಯೆ ಬರಲಾರದು.

* ಖಿನ್ನತೆ ಸಮಸ್ಯೆ ಬಗೆಹರಿಯುತ್ತದೆ.