ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಬೇಸಿಗೆಯಲ್ಲಿ ಗರ್ಭಿಣಿಯ ಆಹಾರ ಹೇಗಿರಬೇಕು?

ಗರ್ಭಾವಸ್ಥೆಯೆಂದರೆ ಆರೋಗ್ಯದ ಬಗ್ಗೆ ಮಾತ್ರವಲ್ಲ, ಆಹಾರದ ಕುರಿತಾಗಿಯೂ ಕಾಳಜಿ ಮಾಡಬೇಕಾದ ದಿನಗಳು. ಅದರಲ್ಲೂ ಬೇಸಿಗೆಯ ಕಾಲದಲ್ಲಿ ಗರ್ಭಿಣಿ ಯರು ಐಸ್‌ಕ್ರೀಮ್‌, ಮಿಲ್ಕ್‌ಶೇಕ್‌ನಂಥವಷ್ಟೇ ಅಲ್ಲ, ತರಹೇವಾರಿ ಹಣ್ಣು ತರ ಕಾರಿ ಗಳನ್ನೂ ಸೇವಿಸಬೇಕಾಗುತ್ತದೆ. ವಸಂತ ಕಾಲದಲ್ಲಿ ದೊರೆಯುವ ರಸ ಭರಿತ ಮತ್ತು ರುಚಿಕರವಾದ ಹಣ್ಣುಗಳು ಆಕೆಯ ಒಡಲನ್ನು ತಂಪಾಗಿಡು ವುದರ ಜೊತೆಗೆ ಬಗೆಬಗೆಯ ಖನಿಜಗಳು ಮತ್ತು ಜೀವಸತ್ವಗಳನ್ನು ನೀಡಬಲ್ಲವು. ಬೇಸಿಗೆಯನ್ನು ಗರ್ಭಿಣಿಯರು ತಂಪಾಗಿ ಕಳೆಯಲು ಅವರ ಆಹಾರಕ್ರಮ ಹೇಗಿರಬೇಕು?

ಬೇಸಿಗೆಯಲ್ಲಿ ಗರ್ಭಿಣಿಯರ ಆಹಾರಕ್ರಮ ಹೀಗಿರಲಿ!

Profile Pushpa Kumari Apr 5, 2025 6:00 AM

ನವದೆಹಲಿ: ಮಹಿಳೆಯರ ʻಬಯಕೆʼಯ ದಿನಗಳೆಂದರೆ ಸಿಕ್ಕಿದ್ದೆಲ್ಲಾ ತಿನ್ನುವ ದಿನಗಳು ಎಂಬ ಭಾವನೆ ಇಂದಿಗೂ ಪ್ರಚಲಿತವಾಗಿದೆ. ಆದರೆ ಗರ್ಭಾ ವಸ್ಥೆಯೆಂದರೆ ಆರೋಗ್ಯದ (Health Tips) ಬಗ್ಗೆ ಮಾತ್ರವಲ್ಲ, ಆಹಾ ರದ ಕುರಿತಾಗಿಯೂ ಕಾಳಜಿ ಮಾಡಬೇಕಾದ ದಿನಗಳು. ಅದರಲ್ಲೂ ಬೇಸಿಗೆಯ ಕಾಲದಲ್ಲಿ ಗರ್ಭಿಣಿಯರು ಐಸ್‌ಕ್ರೀಮ್‌, ಮಿಲ್ಕ್‌ಶೇಕ್‌ ನಂಥ ವಷ್ಟೇ ಅಲ್ಲ, ತರಹೇವಾರಿ ಹಣ್ಣು ತರಕಾರಿ ಗಳನ್ನೂ ಸೇವಿಸಬೇಕಾಗುತ್ತದೆ. ವಸಂತ ಕಾಲದಲ್ಲಿ ದೊರೆಯುವ ರಸಭರಿತ ಮತ್ತು ರುಚಿಕರವಾದ ಹಣ್ಣು ಗಳು ಆಕೆಯ ಒಡಲನ್ನು ತಂಪಾಗಿಡುವುದರ ಜೊತೆಗೆ ಬಗೆಬಗೆಯ ಖನಿಜ ಗಳು ಮತ್ತು ಜೀವಸತ್ವಗಳನ್ನು ನೀಡಬಲ್ಲವು. ಬೇಸಿಗೆಯನ್ನು ಗರ್ಭಿಣಿಯರು ತಂಪಾಗಿ ಕಳೆಯಲು ಅವರ ಆಹಾರಕ್ರಮ ಹೇಗಿರಬೇಕು? ಇಲ್ಲಿದೆ ಕಿವಿಮಾತು.

ನಿರೀಕ್ಷೆಯಲ್ಲೇ ಕಳೆಯುವ ಆ ಒಂಬತ್ತು ತಿಂಗಳುಗಳು ತಾಯಿಯ ಬದುಕಿನ ಸುಂದರ ದಿನಗಳು ಎಂದೇ ಕರೆಸಿಕೊಳ್ಳುತ್ತವೆ. ಹಾಗೆಂದು ಆಗ ಎಲ್ಲವೂ ಸರಾಗವಾಗಿ ಖಂಡಿತ ಇರುವುದಿಲ್ಲ. ದೇಹ-ಮನಸ್ಸುಗಳೆರಡೂ ಬದುಕಿನ ಮಹತ್ವದ ಬದಲಾವಣೆಗೆ ಸಿದ್ಧವಾಗುತ್ತಿರುವುದರಿಂದ, ಹಲವು ಬಗೆಯ ಅನಿ ರೀಕ್ಷಿತ ಸವಾಲುಗಳು ಎದುರಾಗಬಹುದು. ಇವೆಲ್ಲವುಗಳ ನಡುವೆ ಆರೋಗ್ಯ ಮತ್ತು ಆಹಾರದ ಬಗ್ಗೆ ಕಾಳಜಿ ಮಾಡಲೇ‌ ಬೇಕಾಗುತ್ತದೆ. ಅದರಲ್ಲೂ ಬೇಸಿಗೆಯ ಕಾಲದಲ್ಲಿ ಯಾವೆಲ್ಲ ಆಹಾರಗಳು ಹಿತವಾಗುತ್ತವೆ ಎಂಬುದನ್ನು ತಿಳಿಯುವುದು ಅಗತ್ಯ.

ಇವು ಬೇಕು

  • ಸುಸ್ತು, ಸಂಕಟಗಳೆಲ್ಲ ಸಹಜವಾಗಿಯೇ ಹೆಚ್ಚಿರುವ ಅವಸ್ಥೆ ಯಿದು. ಹಾಗಾಗಿ ಈ ಬೇಸಿಗೆಯಲ್ಲಿ ಕಲ್ಲಂಗಡಿ, ಬೆರ್ರಿಗಳು, ಕರಬೂಜದಂಥ ರಸಭರಿತ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಇದರಿಂದ ದಾಹ ತಣಿದು, ದೇಹ ನಿತ್ರಾಣವಾಗದಂತೆ ಕಾಪಾಡಿ ಕೊಳ್ಳಬಹುದು.
  • ವಿಟಮಿನ್‌ ಸಿ ಹೆಚ್ಚಿರುವಂಥ ಆಹಾರಗಳು ಬೇಕು. ಇವು ಬೇಸಿಗೆಯ ಸೋಂಕಿನಿಂದ ರಕ್ಷಿಸುತ್ತವೆ. ಅದಕ್ಕಾಗಿ ಕಿತ್ತಳೆ, ಪೇರಲೆ, ನೇರಳೆ, ಪೀಚ್‌, ಪ್ಲಮ್‌, ಕಿವಿ ಮುಂತಾದವು ಅಗತ್ಯ. ಇವು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ ಕಬ್ಬಿಣದಂಶವನ್ನು ಹೀರಿಕೊಳ್ಳುವುದಕ್ಕೂ ನೆರವಾಗುತ್ತವೆ.
  • ಈ ಸಮಯದಲ್ಲಿ ಮಲಬದ್ಧತೆ ಕಾಡುವ ದಿನಗಳೂ ಎದುರಾಗಬಹುದು. ಹಾಗಾಗಿ ಆರೋಗ್ಯಕರವಾದ ಕೊಬ್ಬು ಮತ್ತು ನಾರು ಹೊಂದಿರುವ ಬೆಣ್ಣೆಹಣ್ಣು ಬೇಸಿಗೆಯಲ್ಲಿ ಸಮತೋಲಿತ ಪೌಷ್ಟಿಕಾಂಶವನ್ನು ನೀಡುತ್ತದೆ.
  • ಉತ್ತಮ ನಾರಿನಂಶ ಮತ್ತು ಕಬ್ಬಿಣವನ್ನು ಹೊಂದಿರುವ ಸೇಬು ಹಣ್ಣನ್ನು ಆಗಾಗ ಮೆಲ್ಲುತ್ತಿರುವುದು ಕಳ್ಳ ಹಸಿವೆಯ ನಿವಾರಣೆಗೆ ಸಹಕಾರಿ
  • ವಿಟಮಿನ್‌ ಎ ಮತ್ತು ಸಿ ಅಂಶದಿಂದ ಸಮೃದ್ಧವಾಗಿರುವ ಮಾವಿನ ಹಣ್ಣು ಈ ಋತುವಿನಲ್ಲಿ ಹೇರಳವಾಗಿ ದೊರೆಯುತ್ತದೆ. ಈ ಹಣ್ನನ್ನು ನಿಮಗಿಷ್ಟ ವಾದ ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಿ.

ಇದನ್ನು ಓದಿ: Health Tips: ಒಮ್ಮೆ ಬಿಸಿ ಮಾಡಿದ ಅಡುಗೆ ಎಣ್ಣೆಯನ್ನು ಎಷ್ಟು ಬಾರಿ ಮರುಬಳಕೆ ಮಾಡಬಹುದು?

  • ದೇಹಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಬೇಕು. ಅದಕ್ಕಾಗಿ ಎಳನೀರು, ಪಾನಕ, ಮಜ್ಜಿಗೆ, ಲಸ್ಸಿ ಮುಂತಾದ ಮನೆಯಲ್ಲೇ ಮಾಡಿದ ಪೇಯಗಳನ್ನು ಹೀರುತ್ತಿರಿ. ಹೀಗೆ ನೀರಿನಂಶವನ್ನು ದೇಹಕ್ಕೆ ನೀಡುತ್ತಿರುವುದರಿಂದ ಕಾಲಿ ನಲ್ಲಿ ಮಾಂಸಪೇಶಿಗಳು ತಿರುಚಿ ಕ್ರಾಂಪ್‌ ಬರುವುದನ್ನು ತಡೆಯಲು ನೆರವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಬಾಳೆಹಣ್ಣು ತಿನ್ನುವುದು ಸಹ ಉಪಯುಕ್ತ.

ಇವು ಬೇಡ: ಒಂದೊಮ್ಮೆ ಗರ್ಭಾವಸ್ಥೆಯ ಮಧುಮೇಹ ಈಗಾಗಲೇ ಕಾಡು ತ್ತಿದೆ ಎಂದಾದರೆ ಬಾಳೆಹಣ್ಣು, ಚಿಕ್ಕೂ, ಮಾವು, ಮೆಲನ್‌ಗಳೆಲ್ಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ಇನ್ನಷ್ಟು ಹೆಚ್ಚಿಸಬಹುದು. ಹಾಗಾಗಿ ಈ ಬಗ್ಗೆ ವೈದ್ಯರ ಸಲಹೆಯನ್ನು ಪಾಲಿಸಿ. ಅನಾನಸ್‌ ಮತ್ತು ಪಪ್ಪಾಯ ಹಣ್ಣುಗಳನ್ನು ಕೆಲ ವರು ಸಂಪೂರ್ಣ ದೂರವೇ ಇರಿಸುತ್ತಾರೆ. ಈ ಕುರಿತಾಗಿಯೂ ವೈದ್ಯ ರಲ್ಲಿ ಕೇಳಿ ತಿಳಿಯಿರಿ.

  • ಸಂಸ್ಕರಿತ ಆಹಾರದಿಂದ ದೂರವಿರಿ. ಇದರಲ್ಲಿರುವ ಕೆಟ್ಟ ಕೊಬ್ಬುಗಳು, ರಾಸಾಯನಿಕಗಳು, ಬಣ್ಣ, ಎಂಎಸ್‌ಜಿ ಇತ್ಯಾದಿಗಳು ಬೆಳೆಯುತ್ತಿರುವ ಶಿಶುವಿಗೆ ತೊಂದರೆ ತರಬಹುದು. ತಾಯಿಯ ಆರೋಗ್ಯಕ್ಕೂ ಕಂಟಕ ಉಂಟುಮಾಡಬಹುದು.
  • ನಿಮ್ಮಿಷ್ಟದ ಸಿಹಿಯನ್ನು ತಿನ್ನುವುದು ತಪ್ಪಲ್ಲ. ಆದರೆ ಅತಿಯಾದ ಸಿಹಿ ತಿನಿಸುಗಳಿಗೆ ಕಡಿವಾಣ ಹಾಕಿ. ಇದರಿಂದ ತೂಕವೂ ಅತಿಯಾಗಿ ಹೆಚ್ಚ ಬಹುದು. ಇದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
  • ಇಬ್ಬರಿಗೆ ಆಗುವಷ್ಟು ತಿನ್ನಬೇಕುʼಎಂದು ತಾಯಿಯಾಗುವವಳಿಗೆ ಸುತ್ತಲಿನವರು ಹೇಳುವುದು ಸಹಜ. ಆದರೆ ಸಾಮಾನ್ಯರ ಊಟಕ್ಕಿಂತ ೩೦೦-೫೦೦ ಕ್ಯಾಲರಿ ಅಧಿಕ ಮಾತ್ರವೇ ಆಕೆಗೆ ಹೆಚ್ಚುವರಿಯಾಗಿ ಬೇಕಾಗುವುದು. ತಿನ್ನುವ ಆಹಾರದ ಪ್ರಮಾಣಕ್ಕಿಂತ ಅದರ ಗುಣಮಟ್ಟದೆಡೆಗೆ ಗಮನ ನೀಡಿ.
  • ಕಾಫಿ, ಚಹಾ, ಸೋಡಾ, ಆಲ್ಕೋಹಾಲ್‌ನಂಥವು ಬೇಡವೇಬೇಡ. ನೀವು ಮಾಡದಿದ್ದರೂ, ಮನೆಯ ಇತರ ಸದಸ್ಯರು ಧೂಮಪಾನ ಮಾಡುತ್ತಾರೆ ಎಂದಾದರೆ, ಅದೂ ತಾಯಿ-ಮಗುವಿನ ಆರೋಗ್ಯ ಒಳ್ಳೆಯದಲ್ಲ.