Viral Video: ಪ್ರಿಯಕರನನ್ನು ಕೊಂದ ಕೊಲೆಗಾರ್ತಿ ವಕೀಲರ ಮೇಲೆ ಹಲ್ಲೆ ನಡೆಸಿದ್ದೇಕೆ?
ಮಾದಕವಸ್ತು ಸೇವಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ತನ್ನ ಸಂಗಾತಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಶಿಕ್ಷೆಗೊಳಗಾದ ಕೊಲೆಗಾರ್ತಿ ನ್ಯಾಯಾಲಯದಲ್ಲಿ ತನ್ನ ವಕೀಲರ ಮೇಲೆ ಹಲ್ಲೆ ನಡೆಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ವಾಷಿಂಗ್ಟನ್: ಮಾದಕವಸ್ತು ಸೇವಿಸಿ ತನ್ನ 25 ವರ್ಷದ ಸಂಗಾತಿಯನ್ನು ಕೊಲೆ ಮಾಡಿ ಜೈಲು ಸೇರಿದ ಟೇಲರ್ ಶಾಬಿನೆಸ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಸಂಗಾತಿ ಶಾದ್ ಥೈರಿಯನ್ ಕೊಲೆಗೈದು, ಶವವನ್ನು ತುಂಡು ತುಂಡಾಗಿ ಕತ್ತರಿಸಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಟೇಲರ್ ಶಾಬಿನೆಸ್, ಜೈಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ಆ ವೇಳೆ ಅವಳು ನ್ಯಾಯಾಲಯದಲ್ಲಿ ತನ್ನ ವಕೀಲರ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.
ನೆಟ್ಟಿಗರೊಬ್ಬರು ಈ ಘಟನೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಆಕೆ ವಕೀಲರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಪೊಲೀಸ್ ಅಧಿಕಾರಿಗಳು ಆಕೆಯನ್ನು ಬಂಧಿಸುವುದು ಮತ್ತು ಆಕೆ ಕಿರುಚಾಡುವುದು ಸೆರೆಯಾಗಿದೆ.
JUST IN: Woman who was convicted of chopping up her boyfriend, 'finds out' after trying to attack her defense attorney in the courtroom.
— Collin Rugg (@CollinRugg) April 4, 2025
This is the second time that 27-year-old Taylor Schabusiness has attacked her defense attorney.
Back in 2023, she was caught on camera… pic.twitter.com/VphXhbaOkS
ವರದಿ ಪ್ರಕಾರ, 2023ರಲ್ಲಿ, ಶಾದ್ ಥೈರಿಯನ್ ಹತ್ಯೆಗಾಗಿ ಶಾಬಿನೆಸ್ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳಂತೆ. ಕೊಲೆ, ಅತ್ಯಾಚಾರ ಮತ್ತು ಶವವನ್ನು ವಿರೂಪಗೊಳಿಸಿದ ಆರೋಪದಲ್ಲಿ ಆಕೆಗೆ ಈ ಕಠೋರ ಶಿಕ್ಷೆಯನ್ನು ವಿಧಿಸಲಾಗಿದೆ. ಈ ಹಿಂದೆ 2023ರಲ್ಲಿ ಈಕೆ ವಿಚಾರಣೆಯ ಸಮಯದಲ್ಲಿ ತನ್ನ ಆಗಿನ ವಕೀಲ ಕ್ವಿನ್ ಜಾಲಿ ಮೇಲೆ ಹಲ್ಲೆ ನಡೆಸಿದ್ದಳಂತೆ. ಇದೀಗ ಅವಳು ವಿಸ್ಕಾನ್ಸಿನ್‍ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಂದರ್ಭದಲ್ಲಿ ವಕೀಲ ಪಾಲ್ ಜುಲ್ಕಾ ಅವರು ಸಾಕ್ಷಿಯ ಬಗ್ಗೆ ನ್ಯಾಯಾಧೀಶರ ಬಳಿ ಮಾತನಾಡುವಾಗ ಅವರ ಮೇಲೂ ಹಲ್ಲೆ ನಡೆಸಿದ್ದಾಳೆ..
ನಡೆದಿದ್ದೇನು?
2023ರಲ್ಲಿ ಮಾದಕ ದ್ರವ್ಯ ಸೇವಿಸಿದ ಶಾಬಿನೆಸ್, ಡೋಸ್ ಹೆಚ್ಚಾದ ಕಾರಣ ತನ್ನ ಸಂಗಾತಿ ಶಾದ್ ಥೈರಿಯನ್‌ನ ಉಸಿರುಗಟ್ಟಿಸಿ ಕೊಂದಿದ್ದಾಳೆ. ನಂತರ ಅವನ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಅವನ ತಲೆಯನ್ನು ಅವನ ಮನೆಯ ನೆಲಮಾಳಿಗೆಯಲ್ಲಿ ಬಚ್ಚಿಟ್ಟಿದ್ದಳು. ಹೀಗಾಗಿ ತನಿಖೆಯ ವೇಳೆ ಥೈರಿಯನ್‍ನ ತಲೆ ಅವನ ತಾಯಿಯ ಮನೆಯ ನೆಲಮಾಳಿಗೆಯಲ್ಲಿದ್ದ ಬಕೆಟ್‍ನಲ್ಲಿ ಪತ್ತೆಯಾಗಿತ್ತು. ನಂತರ ಈ ಕೊಲೆಯ ಬಗ್ಗೆ ಅವಳ ಬಳಿ ವಿಚಾರಿಸಿದಾಗ ಪೊಲೀಸರನ್ನು ಯಾಮಾರಿಸುತ್ತಿದ್ದ ಅವಳು ಅಂತಿಮವಾಗಿ, ತನ್ನ ಸಂಗಾತಿಯನ್ನು ಕೊಂದ ಭಯಾನಕ ವಿವರಗಳನ್ನು ತನಿಖಾಧಿಕಾರಿಗಳ ಮುಂದೆ ಬಹಿರಂಗಪಡಿಸಿದ್ದಳು.
ಈ ಸುದ್ದಿಯನ್ನೂ ಓದಿ: Viral News: 2 ಕೋಟಿಗಾಗಿ ಇನ್ಶೂರೆನ್ಸ್‌ಗಾಗಿ ಬದುಕಿದ್ದ ಮಗನನ್ನೇ.... ಈ ಪಾಪಿ ಮಾಡಿದ ನಾಟಕ ಎಂತಹದ್ದು ಗೊತ್ತಾ?
ಪತಿಯನ್ನು ಕೊಂಡ ಪತ್ನಿ
ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ಕೊಲೆ ಮಾಡಿಸಿದ್ದಳು. ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಐದು ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಮೀರತ್‌ಗೆ ಬಂದಿದ್ದ ನೌಕಾಧಿಕಾರಿ ಸೌರಭ್ ಕುಮಾರ್ ಎಂಬಾತನನ್ನು ಆತನ ಪತ್ನಿಯೇ ಪ್ರಿಯಕರನ ನೆರವಿನಿಂದ ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದ ದಾರುಣವಾದ ಘಟನೆ ನಡೆದಿತ್ತು.