ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಇತ್ತೀಚಿಗೆ ತಾಲ್ಲೂಕು,ನಗರ, ಗ್ರಾಮಂತರ, ಪ್ರದೇಶಗಳ ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಫಲಿತಾಂಶ ಘೋಷಣೆ ಹಿನ್ನೆಲೆ ಕಾರ್ಯಕ್ರಮ

ಸೋಮವಾರ ಕೈವಾರ ಗ್ರಾಮದ ಸಮಾಜ ಸೇವಕ ಹಾಗೂ ಮುಖಂಡರಾದ ಅಬ್ದುಲ್ ಸಮದ್ ಮತ್ತು ಮೊಹಮ್ಮದ್ ಜಾಫರ್ ಸಾಧಿಕ್ ವತಿಯಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಗಳಿಗೆ ಹಾಗೂ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಾಲು ಹೊದಿಸಿ ಪೇಟ ತೊಡಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಮುಖಂಡ ಅಬ್ದುಲ್ ಸಮದ್ ರಿಂದ ಸನ್ಮಾನ

ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಾಯಿನಾಥ್, ನಗರಾಧ್ಯಕ್ಷರಾಗಿ ಭರತ್ ಕುಮಾರ್, ನಗರ ಉಪಾಧ್ಯಕ್ಷರಾಗಿ ಸಾದಿಕ್ ಪಾಷಾ,ಗ್ರಾಮಾಂತರ ಅಧ್ಯಕ್ಷರಾಗಿ ಕಲ್ಯಾಣ್ ಕುಮಾರ್ ಆಯ್ಕೆಯಾಗಿದ್ದು ಸಮಾಜ ಸೇವಕ ಅಬ್ದುಲ್ ಸಮದ್ ಸನ್ಮಾನಿಸಿದರು.

Profile Ashok Nayak Feb 24, 2025 10:01 PM

ಚಿಂತಾಮಣಿ : ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಾಯಿನಾಥ್, ನಗರಾಧ್ಯಕ್ಷ ರಾಗಿ ಭರತ್ ಕುಮಾರ್, ನಗರ ಉಪಾಧ್ಯಕ್ಷರಾಗಿ ಸಾದಿಕ್ ಪಾಷಾ,ಗ್ರಾಮಾಂತರ ಅಧ್ಯಕ್ಷರಾಗಿ ಕಲ್ಯಾಣ್ ಕುಮಾರ್ ಆಯ್ಕೆಯಾಗಿದ್ದು ಸಮಾಜ ಸೇವಕ ಅಬ್ದುಲ್ ಸಮದ್ ಸನ್ಮಾನಿಸಿದರು. ಸೋಮವಾರ ಕೈವಾರ ಗ್ರಾಮದ ಸಮಾಜ ಸೇವಕ ಹಾಗೂ ಮುಖಂಡರಾದ ಅಬ್ದುಲ್ ಸಮದ್ ಮತ್ತು ಮೊಹಮ್ಮದ್ ಜಾಫರ್ ಸಾಧಿಕ್ ವತಿಯಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರುಗಳಿಗೆ ಹಾಗೂ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ದಲ್ಲಿ ಶಾಲು ಹೊದಿಸಿ ಪೇಟ ತೊಡಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ: Chikkaballapur News: ಸಮರ್ಪಕ ಶಿಕ್ಷಣದಿಂದ ಮಾತ್ರ ಸರ್ವತೋಮುಖ ಸುಧಾರಣೆ ಸಾಧ್ಯ: ಸದ್ಗುರು ಶ್ರೀ ಮಧುಸೂಧನ ಸಾಯಿ

ಈ ವೇಳೆ ಸಮಾಜ ಸೇವಕರು ಹಾಗೂ ಮುಖಂಡರಾದ ಅಬ್ದುಲ್ ಸಮ್ಮದ್ ರವರು ಮಾತ ನಾಡಿ ನಮ್ಮ ದೇಶದ ಇತಿಹಾಸ ಮತ್ತು ಕಾಂಗ್ರೆಸ್ ಇತಿಹಾಸ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ,ಅAತಹ ಪಕ್ಷದ ಪದಾಧಿಕಾರಿಗಳಾಗಿರುವುದು ನಮ್ಮೆಲ್ಲರ ಪುಣ್ಯ ಆದ್ದ ರಿಂದ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪಕ್ಷದ ಬಲವರ್ಧನೆಗೆ ಸಂಪೂರ್ಣ ತೊಡಗಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳು,ಗ್ರಾಮದ ಮುಖಂಡರುಗಳು ಸ್ನೇಹಿತರು ಸೇರಿದಂತೆ ಮತ್ತಿತರರು ಇದ್ದರು.