ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ಬೆಂಗಳೂರಿನ ಬೀದಿಯಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ ಕೇರಳದಲ್ಲಿ ಆರೆಸ್ಟ್

ಪೊಲೀಸರು ಸುಮಾರು 700 ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ಕೊನೆಗೂ ಆರೋಪಿಯನ್ನು ಕೇರಳದ ದೂರದ ಹಳ್ಳಿಯಲ್ಲಿ ಬಂಧಿಸಿದ್ದಾರೆ. ಸಂತೋಷ ಎಂಬ ಹೆಸರಿನ ಈತ ನಗರದ ಜಾಗ್ವಾರ್ ಶೋ ರೂಂನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪೊಲೀಸರು ಮೂರು ರಾಜ್ಯಗಳಲ್ಲಿ ಸುಮಾರು ಒಂದು ವಾರದವರೆಗೆ ಈತನಿಗಾಗಿ ಹುಡುಕಾಟ ನಡೆಸಿದ್ದರು.

ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ ಕೇರಳದಲ್ಲಿ ಆರೆಸ್ಟ್

‌ಬೆಂಗಳೂರಿನ ಲೈಂಗಿಕ ಕಿರುಕುಳ ಆರೋಪಿ ಆರೋಪಿ ಸಂತೋಷ್

ಹರೀಶ್‌ ಕೇರ ಹರೀಶ್‌ ಕೇರ Apr 14, 2025 10:23 AM

ಬೆಂಗಳೂರು: ಬೆಂಗಳೂರು (Bengaluru Crime news) ನಗರದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ಎಸಗಿ‌ ಪರಾರಿಯಾದ ಕಾಮುಕ ಆರೋಪಿಯನ್ನು ಪೊಲೀಸರು ಕೇರಳದಲ್ಲಿ (Arrest) ಬಂಧಿಸಿದ್ದಾರೆ. ಆರೋಪಿಯನ್ನು 26 ವರ್ಷದ ಸಂತೋಷ್ ಎಂದು ಗುರುತಿಸಲಾಗಿದೆ. ಈ ಘಟನೆ ಆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸಂಚಲನ ಮೂಡಿಸಿದ್ದಲ್ಲದೆ, ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು.

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ಬಳಿಯ ಓಣಿಯಲ್ಲಿ ಇಬ್ಬರು ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದಾಗ ಈತ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ. ಇಬ್ಬರು ಮಹಿಳೆಯರಲ್ಲಿ ಒಬ್ಬಾಕೆಯನ್ನು ಬಲವಂತವಾಗಿ ತಬ್ಬಿಕೊಂಡು ಆಕೆಗೆ ಕಿರುಕುಳ ನೀಡಿದ್ದ. ನಂತರ ಅಲ್ಲಿಂದ ಪರಾರಿಯಾಗಿದ್ದ. ಇದೆಲ್ಲವೂ ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ದಾಖಲಾಗಿತ್ತು.

ಇದೀಗ ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸುಮಾರು 700 ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ಕೊನೆಗೂ ಆರೋಪಿಯನ್ನು ಕೇರಳದ ದೂರದ ಹಳ್ಳಿಯಲ್ಲಿ ಬಂಧಿಸಿದ್ದಾರೆ. ಸಂತೋಷ ಎಂಬ ಹೆಸರಿನ ಈತ ನಗರದ ಜಾಗ್ವಾರ್ ಶೋ ರೂಂನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಘಟನೆಯ ನಂತರ ಅವನು ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ಪರಾರಿಯಾಗಿದ್ದ. ನಂತರ ಸೇಲಂ ಮತ್ತು ಕೋಝಿಕ್ಕೋಡ್‌ಗೆ ಹೋಗಿದ್ದ. ಪೊಲೀಸರು ಮೂರು ರಾಜ್ಯಗಳಲ್ಲಿ ಸುಮಾರು ಒಂದು ವಾರದವರೆಗೆ ಈತನಿಗಾಗಿ ಹುಡುಕಾಟ ನಡೆಸಿದ್ದರು.

ಇದನ್ನೂ ಓದಿ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದ ಸಚಿವ ಪರಮೇಶ್ವರ್‌