Haj Quota: ಈ ಬಾರಿ 1.75 ಲಕ್ಷ ಭಾರತೀಯರಿಗೆ ಹಜ್ ಯಾತ್ರೆಗೆ ಅವಕಾಶ
ಭಾರತದ ಹಜ್ ಕೋಟಾ ಈ ಬಾರಿ 1.75 ಲಕ್ಷಕ್ಕೆ ಏರಿಕೆಯಾಗಿದ್ದು, ಎಲ್ಲ ಅಗತ್ಯ ಸಿದ್ಧತೆಗಳನ್ನು ಸೌದಿ ಮಾರ್ಗಸೂಚಿಯ ಪ್ರಕಾರ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ. ಇದರಿಂದ ಒಂದು ದಶಕದಲ್ಲಿಯೇ ಅತಿ ಹೆಚ್ಚು ಮಂದಿಗೆ ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ.


ನವದೆಹಲಿ: ಭಾರತದ ಹಜ್ ಕೋಟಾ (Haj Quota) ಈ ಬಾರಿ 1.75 ಲಕ್ಷಕ್ಕೆ ಏರಿಕೆಯಾಗಿದ್ದು, ಎಲ್ಲ ಅಗತ್ಯ ಸಿದ್ಧತೆಗಳನ್ನು ಸೌದಿ ಮಾರ್ಗಸೂಚಿಯ (Saudi guidelines) ಪ್ರಕಾರ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ (Minority Affairs Ministry) ಮಂಗಳವಾರ ತಿಳಿಸಿದೆ. ಇದರಿಂದ ಒಂದು ದಶಕದಲ್ಲಿಯೇ ಅತಿ ಹೆಚ್ಚು ಮಂದಿಗೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಸಿಕ್ಕಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗ 1,36,020ರಷ್ಟು ಹಜ್ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿದ್ದು, 2025ರಲ್ಲಿ ಅಂದರೆ ಈ ಬಾರಿ ಅದನ್ನು 1,75,025ಕ್ಕೆ ಏರಿಸಲಾಗಿದೆ.
ಸೌದಿ ಮಾರ್ಗಸೂಚಿಗಳ ಪ್ರಕಾರ ವಿಮಾನ, ಸಾರಿಗೆ, ಮಿನಾ ಶಿಬಿರಗಳು, ವಸತಿ ಮತ್ತು ಸೇವೆಗಳು ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
The Government of India accords high priority to facilitating the Haj pilgrimage for Indian Muslims. Due to sustained efforts, India's Haj quota has risen from 136,020 in 2014 to 175,025 in 2025—finalized annually by Saudi authorities.@PMOIndia @RijijuOffice @RijijuOffice…
— Ministry of Minority Affairs (@MOMAIndia) April 15, 2025
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು, ಭಾರತೀಯ ಮುಸ್ಲಿಮ್ ಹಜ್ ಯಾತ್ರಿಕರಿಗೆ ತಮ್ಮ ಯಾತ್ರೆಯನ್ನು ಸುಗಮಗೊಳಿಸಲು ಭಾರತ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಿರಂತರ ಪ್ರಯತ್ನಗಳಿಂದಾಗಿ ಈ ಬಾರಿ ಭಾರತದ ಹಜ್ ಕೋಟಾ 1,75,025ಕ್ಕೆ ಏರಿದೆ ಎಂದು ತಿಳಿಸಿದೆ.
ಈ ವರ್ಷ ಭಾರತದ ಹಜ್ ಸಮಿತಿಯ ಮೂಲಕ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು 1,22,518 ಯಾತ್ರಿಕರಿಗೆ ಮುಖ್ಯ ಕೋಟಾದಡಿಯಲ್ಲಿ ವ್ಯವಸ್ಥೆಗಳನ್ನು ಒದಗಿಸಲಿದೆ. ಉಳಿದಿರುವ ಕೋಟಾವನ್ನು 26 ಸಂಯೋಜಿತ ಹಜ್ ಗುಂಪು ನಿರ್ವಾಹಕರು (CHGOs) ಮತ್ತು ಖಾಸಗಿ ಪ್ರವಾಸ ನಿರ್ವಾಹಕರಿಗೆ ಹಂಚಿಕೆ ಮಾಡಲಾಗಿದೆ. ಹಜ್ ಯಾತ್ರಿಕರ ಅನುಕೂಲಕ್ಕೆ ಈಗಾಗಲೇ ವಿಮಾನ, ಸಾರಿಗೆ, ಮಿನಾ ಶಿಬಿರ, ವಸತಿ ಮತ್ತು ಇತರ ಅಗತ್ಯ ಸೇವೆಗಳ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಆದರೂ ಸೌದಿಯ ನಿಗದಿತ ಗಡುವಿನೊಳಗೆ ಇದನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ವಸತಿ ವ್ಯವಸ್ಥೆಗಳನ್ನು ಒದಗಿಸಲು ಭಾರತವು ಸೌದಿ ಅರೇಬಿಯಾ ಸರ್ಕಾರದೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದೆ ಎಂದು ಸಚಿವಾಲಯ ತಿಳಿಸಿದೆ.
ಯಾತ್ರಿಕರ ಸುರಕ್ಷತೆ, ಮಿನಾದಲ್ಲಿ ಸೀಮಿತ ಅವಕಾಶ, ತೀವ್ರ ಬಿಸಿಲು ಈ ಬಗ್ಗೆ ಸೌದಿ ಹಜ್ ಸಚಿವಾಲಯವು ಕಳವಳ ವ್ಯಕ್ತಪಡಿಸಿದೆ. ಈ ವರ್ಷ ಯಾವುದೇ ದೇಶಕ್ಕೆ ಯಾವುದೇ ಗಡುವು ವಿಸ್ತರಣೆಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: Viral Video: ಮಹಿಳೆಗೆ ಶಾಪ ಹಾಕಿದ ಚಾಟ್‍ಜಿಪಿಟಿ; ಕಾರಣ ಗೊತ್ತಾದ್ರೆ ನೀವು ಕೂಡ ಬಿದ್ದು ಬಿದ್ದು ನಗ್ತೀರಿ!
ಸೌದಿ ಹಜ್ ಸಚಿವಾಲಯವು ಈಗ 10,000 ಯಾತ್ರಿಕರಿಗೆ ಹಜ್ ಪೋರ್ಟಲ್ ಅನ್ನು ಮತ್ತೆ ತೆರೆಯಲು ಒಪ್ಪಿಕೊಂಡಿದೆ. ಮಿನಾದಲ್ಲಿ ಪ್ರಸ್ತುತ ಲಭ್ಯತೆಯ ಆಧಾರದ ಮೇಲೆ 10,000 ಯಾತ್ರಿಕರಿಗೆ ಸ್ಥಳಾವಕಾಶ ಕಲ್ಪಿಸಲು CHGOಗಳಿಗಾಗಿ ಹಜ್ (ನುಸುಕ್) ಪೋರ್ಟಲ್ ಅನ್ನು ಪುನಃ ತೆರೆಯಲಿದೆ. ಈ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಲು ತುರ್ತು ನಿರ್ದೇಶನಗಳನ್ನು ನೀಡಿದೆ. ಇದಕ್ಕಾಗಿ ಭಾರತ ಕೃತಜ್ಞತೆ ಸಲ್ಲಿಸುವುದಾಗಿ ಸಚಿವಾಲಯದ ಹೇಳಿಕೆ ತಿಳಿಸಿದೆ. ಈ ವರ್ಷದ ಹಜ್ ಯಾತ್ರೆ ಜೂ. 4ರಿಂದ ಜೂ. 9ರ ಮಧ್ಯೆ ನಡೆಯುವ ನಿರೀಕ್ಷೆಯಿದೆ.