Viral News: ಬಾಹ್ಯಾಕಾಶ ಹಾರಾಟ ಮುಗಿಸಿ ಧರೆಗಿಳಿದ ಮಹಿಳಾಮಣಿಗಳು ಇವರೇ ನೋಡಿ
ಬ್ಲೂ ಒರಿಜಿನ್ ರಾಕೆಟ್‍ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ 6 ಮಹಿಳೆಯರು ಸೋಮವಾರ (ಏಪ್ರಿಲ್ 14) ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಇದು 60 ವರ್ಷಗಳಲ್ಲಿ ಮೊದಲ ಮಹಿಳಾ ಬಾಹ್ಯಾಕಾಶ ಹಾರಾಟ ಎನ್ನಲಾಗಿದೆ. ಈ ಹಾರಾಟದಲ್ಲಿ ಪಾಪ್ ತಾರೆ ಕೇಟಿ ಪೆರ್ರಿ ಜತೆ ಇತರ ಐದು ಮಹಿಳೆಯರು ಇದ್ದರು.


ಪಾಪ್ ತಾರೆ ಕೇಟಿ ಪೆರ್ರಿ ಮತ್ತು ಇತರ ಐದು ಮಹಿಳೆಯರು ಬ್ಲೂ ಒರಿಜಿನ್ ರಾಕೆಟ್‍ನಲ್ಲಿ ಬಾಹ್ಯಾಕಾಶಕ್ಕೆ ತೆರಳಿ ಸೋಮವಾರ (ಏಪ್ರಿಲ್ 14) ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಇದು 60 ವರ್ಷಗಳಲ್ಲಿ ಮೊದಲ ಮಹಿಳಾ ಬಾಹ್ಯಾಕಾಶ ಹಾರಾಟ ಎನ್ನಲಾಗಿದೆ. ಈ ಐತಿಹಾಸಿಕ ಪ್ರಯಾಣದಲ್ಲಿ ಪಾಪ್ ಸಿಂಗರ್ ಕೇಟಿ ಪೆರ್ರಿ, ಪತ್ರಕರ್ತೆ ಗೇಲ್ ಕಿಂಗ್, ಮಾಜಿ ನಾಸಾ ರಾಕೆಟ್ ಸೈಂಟಿಸ್ಟ್ ಆಯಿಷಾ ಬೋವ್, ಸಾಮಾಜಿಕ ಹಕ್ಕುಗಳ ಹೋರಾಟಗಾರ್ತಿ ಅಮಂಡಾ ನಗ್ಯುನ್, ಸಿನಿಮಾ ಪ್ರೊಡ್ಯುಸರ್ ಕೇರೈನ್ ಫ್ಲೈನ್ ಹಾಗೂ ಬ್ಯೂ ಆರಿಜಿನ್ ಸಂಸ್ಥಾಪಕ ಜೆಫ್ ಬೆಜೋಸ್‌ನ ಗೆಳತಿ ಲೌರೇನ್ ಸ್ಯಾಂಚೇಜ್ ಇದ್ದರು. ಇದೀಗ ಈ ವಿಚಾರ ಎಲ್ಲೆಡೆ ವೈರಲ್(Viral News) ಆಗಿದೆ.
ಬಾಹ್ಯಾಕಾಶ ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿಪಡಿಸಲಾದ ಬೆಜೋಸ್ ಅವರ ನ್ಯೂ ಶೆಪರ್ಡ್ ಉಡಾವಣಾ ವಾಹನ ಬಾಹ್ಯಾಕಾಶ ಹಾರಾಟದಲ್ಲಿ ಉನ್ನತ ಮಟ್ಟದ ಯಶಸ್ಸನ್ನು ಕಂಡಿದೆ. ಭೂಮಿಗೆ ಮರಳಿದ ನಂತರ ಕ್ಯಾಪ್ಸೂಲ್‍ನಿಂದ ಹೊರಬಂದ ಲಾರೆನ್ ಸ್ಯಾಂಚೆಜ್ ಅವರನ್ನು ಬೆಜೋಸ್ ತಬ್ಬಿಕೊಂಡರು. ಇನ್ನು ಕೇಟಿ ಪೆರ್ರಿ ಮತ್ತು ಗೇಲ್ ಕಿಂಗ್ ಕೃತಜ್ಞತೆಯ ಭಾವದಿಂದ ನೆಲಕ್ಕೆ ಮುತ್ತಿಟ್ಟಿದ್ದಾರೆ. ಬಾಹ್ಯಾಕಾಶ ಹಾರಾಟದಲ್ಲಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
1963ರಲ್ಲಿ ಸೋವಿಯತ್ ಗಗನಯಾತ್ರಿ ವ್ಯಾಲೆಂಟಿನಾ ಟೆರೆಶ್ಕೋವಾ ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳೆ. ಅವರು ಸುಮಾರು ಮೂರು ದಿನಗಳ ಹಾರಾಟದ ಸಮಯದಲ್ಲಿ ಏಕಾಂಗಿಯಾಗಿ ಭೂಮಿಯನ್ನು ಸುತ್ತಿದ ನಂತರ 6 ದಶಕಗಳಲ್ಲಿ ಇದು ಮೊದಲ ಮಹಿಳಾ ಬಾಹ್ಯಾಕಾಶ ಹಾರಾಟ.
ತಗಲುವ ವೆಚ್ಚವೆಷ್ಟು?
ಬ್ಲೂ ಒರಿಜಿನ್ ಕಂಪನಿ ಪ್ರಯಾಣದ ಸರಾಸರಿ ವೆಚ್ಚವನ್ನು ಬಹಿರಂಗಪಡಿಸುವುದಿಲ್ಲ. ಪ್ರಯಾಣಿಕರು ಮರುಪಾವತಿಸಬಹುದಾದ ಠೇವಣಿಯ ರೂಪದಲ್ಲಿ $ 150,000 ಪಾವತಿಸಬೇಕಾಗುತ್ತದೆ ಎಂದು ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಬ್ಲೂ ಒರಿಜಿನ್ ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ಬಾಹ್ಯಾಕಾಶಕ್ಕೆ ಪ್ರವೇಶದ ವೆಚ್ಚವನ್ನು ಆಮೂಲಾಗ್ರವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಮತ್ತು ಅದರ ರಾಕೆಟ್‍ಗಳನ್ನು ಮರುಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ವಕ್ಫ್ ತಿದ್ದುಪಡಿ ಕಾಯ್ದೆ: ವಲಸೆ ಹೋದ ಹಿಂದೂಗಳ ಬಗ್ಗೆ ಪಂಡಿತ ಧೀರೇಂದ್ರ ಶಾಸ್ತ್ರಿ ಕಳವಳ
ಬ್ರಿಟನ್‌ನ ವಾರ್ವಿಕ್ ಬಿಸಿನೆಸ್ ಸ್ಕೂಲ್‌ನ ಸ್ಟ್ರಾಟಜಿ ಮತ್ತು ಆರ್ಗನೈಸೇಶನ್ ಪ್ರೊಫೆಸರ್ ಲೊಯಿಜೋಸ್ ಹೆರಾಕ್ಲಿಯಸ್, ನ್ಯೂ ಶೆಪರ್ಡ್‍ನ ಪ್ರತಿ ಉಡಾವಣೆಗೆ $ 1ರಿಂದ $ 3 ಮಿಲಿಯನ್ ವೆಚ್ಚವಾಗುತ್ತದೆ ಎಂದು ಅಂದಾಜಿಸಿದ್ದಾರೆ.