Chikkaballapur News: ನಾಯಿ ಮತ್ತು ಹಾವು ಕಡಿತ ಸಾವನ್ನು ಕಡಿಮೆ ಮಾಡಲು ಕ್ರಮ ವಹಿಸಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ
ಜಿಲ್ಲೆಯಲ್ಲಿ 2025ನೇ ವರ್ಷದಲ್ಲಿ 5890 ಜನರಿಗೆ ನಾಯಿ ಕಚ್ಚಿರುವುದು ದಾಖಲಾಗಿದೆ ಮತ್ತು 46 ವರ್ಷದ ಮಹಿಳೆ ರಬಿಸ್ ಸೋಂಕಿನಿಂದ ನಿಧನರಾಗಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ 2025ನೇ ವರ್ಷದಲ್ಲಿ 404 ಹಾವು ಕಡಿತದ ಪ್ರಕರಣಗಳು ದಾಖಲಾಗಿದ್ದು ಅದರ ಪೈಕಿ ಇಬ್ಬರು ನಿಧನ ರಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾಯಿ ಮತ್ತು ಹಾವಿನ ಕಡಿತದಿಂದ ಸಾವು ಉಂಟಾಗದಂತೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು

ಮಾರಣಾಂತಿಕ ಕಾಯಿಲೆಯಾಗಿದ್ದು.ಯಾವುದೇ ವ್ಯಕ್ತಿ ನಾಯಿ ಕಡಿತಕ್ಕೆ ಒಳಗಾದ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಅತ್ಯಗತ್ಯ, ವಿಶೇಷವಾಗಿ ಸಾಕು ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಚಿಕ್ಕಬಳ್ಳಾಪುರ: ನಾಯಿ ಕಚ್ಚುವಿಕೆಯು ರೇಬೀಸ್ ಸೋಂಕನ್ನು ಹರಡಬಹುದು, ಇದು ಮಾರಣಾಂತಿಕ ಕಾಯಿಲೆಯಾಗಿದ್ದು.ಯಾವುದೇ ವ್ಯಕ್ತಿ ನಾಯಿ ಕಡಿತಕ್ಕೆ ಒಳಗಾದ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಅತ್ಯಗತ್ಯ, ವಿಶೇಷವಾಗಿ ಸಾಕು ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ವಿಶ್ವ ಝೋನೋಸಿಸ್ ಮತ್ತು ವಿಶ್ವ ಜನಸಂಖ್ಯಾ ದಿನಾಚರಣೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ 2025ನೇ ವರ್ಷದಲ್ಲಿ 5890 ಜನರಿಗೆ ನಾಯಿ ಕಚ್ಚಿರುವುದು ದಾಖಲಾಗಿದೆ ಮತ್ತು 46 ವರ್ಷದ ಮಹಿಳೆ ರಬಿಸ್ ಸೋಂಕಿನಿಂದ ನಿಧನರಾಗಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ 2025ನೇ ವರ್ಷದಲ್ಲಿ 404 ಹಾವು ಕಡಿತದ ಪ್ರಕರಣಗಳು ದಾಖಲಾಗಿದ್ದು ಅದರ ಪೈಕಿ ಇಬ್ಬರು ನಿಧನ ರಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾಯಿ ಮತ್ತು ಹಾವಿನ ಕಡಿತದಿಂದ ಸಾವು ಉಂಟಾಗದಂತೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಗಳನ್ನು ನೀಡಿದರು.
ಇದನ್ನೂ ಓದಿ: Child Marriage: 6 ವರ್ಷದ ಬಾಲಕಿ ಜೊತೆ 45 ವರ್ಷದ ವ್ಯಕ್ತಿಯ ವಿವಾಹ-ಇದು ತಾಲಿಬಾನ್ ವಿಕೃತಿ!
ಝೋನೋಸಿಸ್ ಕಾಯಿಲೆಯ ವಿರುದ್ಧ ಮೊದಲ ಬಾರಿಗೆ ಲಸಿಕೆ ಹಾಕಿದ ಸ್ಮರಣಾರ್ಥ ಪ್ರತಿ ವರ್ಷ ಜುಲೈ ೬ ಅನ್ನು ಪ್ರಪಂಚದಾದ್ಯಂತ ವಿಶ್ವ ಝೋನೋಸಿಸ್ ದಿನವೆಂದು ಆಚರಿಸಲಾಗುತ್ತದೆ. ಫ್ರೆಂಚ್ ಸೂಕ್ಷ್ಮ ಜೀವಶಾಸ್ತ್ರಜ್ಞ “ಲೂಯಿಸ್ ಪಾಶ್ಚರ್” ಅವರು ಮೊದಲ ರೇಬೀಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದರು.
1885ರಲ್ಲಿ ರೇಬೀಸ್ ಅಧ್ಯಯನ ಮಾಡುವಾಗ, ಪಾಶ್ಚರ್ ತನ್ನ ಮೊದಲ ಮಾನವ ಲಸಿಕೆಯನ್ನು ಪರೀಕ್ಷಿಸಿದರು. ರೇಬೀಸ್ ಒಂದು ವೈರಾಣುವಿನಿಂದ ಹರಡುವ ಸೋಂಕು. ಸೋಂಕಿರುವ ಪ್ರಾಣಿಗಳ (ನಾಯಿ ೯೭%, ಬೆಕ್ಕು ೨%, ನರಿ, ಮಂಗೂಸ್, ಕುದುರೆ, ಹಸು, ಕುರಿ, ಟಗರು ೧%) ಜೊಲ್ಲಿನ ಸಂಪರ್ಕದಿಂದ ಮತ್ತು ತೆರೆದ ಚರ್ಮ ಮೇಲೆ ನಾಕ್ಕುವಿಕೆಯಿಂದ ಹಾಗೂ ಪರಚುವಿಕೆಯಿಂದ ಕಡಿತದಿಂದ ಹರಡುತ್ತದೆ. ಇ ಸೋಂಕನ್ನು ತಡೆಯಲು ತಕ್ಷಣವೇ ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ನಿಗದಿತ ರೇಬೀಸ್ ವಿರುದ್ಧದ ಲಸಿಕೆ ಚುಚ್ಚು ಮದ್ದನ್ನು ತೆಗೆದುಕೊಳ್ಳಬೇಕು. ಗಾಯಗಳ ಒಳಗೆ ಮತ್ತು ಸುತ್ತಲೂ ರೇಬೀಸ್ ಇಮ್ಯುನೋಗ್ಲೋಬುಲಿನ್ ಅಥವಾ ???ಂಟಿ ರೇಬೀಸ್ ಸೀರಂ ಚುಚ್ಚು ಮದ್ದುನ್ನು ತೆಗೆದುಕೊಳ್ಳಬೇಕು. ಸಾಕು ನಾಯಿಗಳಿಗೆ ತಪ್ಪದೇ ಲಸಿಕಾ ಚುಚ್ಚುಮದ್ದು ಹಾಕಿಸಿಬೇಕು ಎಂದು ತಿಳಿಸಿದರು.
ಹಾವುಗಳು ವಿಷಕಾರಿ ಮತ್ತು ವಿಷರಹಿತ ಎರಡೂ ಆಗಿರುತ್ತವೆ. ಹಾವು ಕಚ್ಚಿದ ಸಂದರ್ಭಗಳಲ್ಲಿ ಹೆದರದೆ., ಹಾವು ಕಚ್ಚಿದ ಸಂದರ್ಭಗಳಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಡ್ ಆಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಿ ಅಂಬ್ಯುಲೆನ್ಸ್ ಅಥವಾ ಇನ್ನಿತರ ವಾಹನದಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಈ ಸೋಂಕಿನ ಬಗ್ಗೆ ಶಾಲಾ, ಕಾಲೇಜು, ಗ್ರಾಮ ಪಂಚಾಯತಿ, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ನಾಯಿ ಮತ್ತು ಹಾವು ಕಡಿತ ಕಡಿಮೆ ಮಾಡಲು ಕ್ರಮ ವಹಿಸಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
೧೧-೦೭-೧೯೮೭ ರಂದು ಅಂದಿನ ಯುಗೋಗ್ಲೋವಿಯ ದೇಶದ ಜಾಗ್ರೆಟ್ನಲಿ ಮಟೇಜ್ ಗ್ಯಾಸ್ಟರ್ ಎಂಬ ಗಂಡು ಮಗುವು ಪ್ರಪಂಚದ ೫೦೦ ಕೋಟಿಯ ಪ್ರಜೆಯಾಗಿ ಹುಟ್ಟಿದನು. ಅಂದಿನಿAದ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆ ಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿವಿಧ ಪೋಷಕಗಳೊಂದಿಗೆ ಜುಲೈ ೧೧ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ೨೦೨೪ ಏಪ್ರಿಲ್ ೧೯ ರ ವಿಶ್ವ ಜನಸಂಖ್ಯೆ ನಿಧಿ ಮಾಹಿತಿ ಅನ್ವಯ ಭಾರತದ ಜನಸಂಖ್ಯೆ ೧೪೨.೫೬ ಕೋಟಿ ಆಗಿದೆ. ವಿಶ್ವ ಜನಸಂಖ್ಯೆಯಲ್ಲಿ “ಭಾರತ ದೇಶವು ಚೀನಾವನ್ನು ಮೀರಿ ಮೊದಲನೇ ಸ್ಥಾನವನ್ನು ಪಡೆದಿದೆ” ಜಾಗತಿಕ ಜನಸಂಖ್ಯೆ ಅಂಕಿಅAಶಗಳ ಪ್ರಕಾರ ಹೆಚ್ಚು ಜನಸಂಖ್ಯೆ ಹೊಂದಿದ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ೧೯೫೦ಕ್ಕೆ ಹೋಲಿಸಿ ದಾಗ ಭಾರತದ ಜನಸಂಖ್ಯೆ ೭೫ ವರ್ಷ ಗಳಲ್ಲಿ ೧೦೦ ಕೋಟಿ ಗಳಷ್ಟು ಹೆಚ್ಚಾಗಿದೆ. ಜಗತ್ತಿನ ಜನಸಂಖ್ಯೆ ೮೦೦ ಕೋಟಿಗೆ ತಲುಪುತ್ತಿದೆ. ಜಗತ್ತಿನಲ್ಲಿ ಪ್ರತಿ ಐವರಲ್ಲಿ ಒಬ್ಬರು ಭಾರತೀಯರಾಗಿ ದ್ದಾರೆ. ಮನುಷ್ಯನ ಸರಾಸರಿ ಜೀವಿತಾವಧಿ ಹೆಚ್ಚುತ್ತಿರುವುದು ಕಾರಣವಾಗಿದೆ ಎಂದರು.
ಜನಸಂಖ್ಯೆ ನಿಯಂತ್ರಿಸಲು ಸಮಾಜದಲ್ಲಿನ ಮೂಢನಂಬಿಕೆ ಗಳನ್ನು ಹೋಗಲಾಡಿಸಬೇಕು. ಮದುವೆಯಾಗಲು ಗಂಡಿಗೆ ೨೧ ವರ್ಷ ಹಾಗೂ ಹೆಣ್ಣಿಗೆ ೧೮ ವರ್ಷ ನಿಗಧಿ ಆಗಿರುವುದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಮದುವೆಯಾದ ನಂತರ ಕನಿಷ್ಠ ೨ ವರ್ಷಗಳವರೆಗೆ ಮೊದಲನೇ ಮಗುವನ್ನು ಪಡೆಯಬಾರದು. ಜನನಗಳ ನಡುವೆ ಕನಿಷ್ಠ ೩ ವರ್ಷಗಳ ಅಂತರವಿರಲು ದಂಪತಿಗಳು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅನುಸರಿಸಿಕೊಂಡು ಚಿಕ್ಕಕುಟುಂಬವನ್ನು ರೂಪಿಸಿಕೊಳ್ಳಬೇಕು. “ನಾವಿಬ್ಬರೂ ನಮಗಿಬ್ಬರು” ಎಂಬದು “ನಾವಿಬ್ಬರು ನಮಗೊಬ್ಬರು” ( ಚಿಕ್ಕ ಸಂಸಾರ ಚೋಕ್ಕ ಸಂಸಾರ) ಎಂದು ಬದಲಾಗಬೇಕು ಎಂದು ಕರೆ ನೀಡಿದರು.
“ಮೊದಲ ಗರ್ಭಧಾರಣೆಗೆ ಹಾಗೂ ನಂತರದ ಯೋಜಿತ ಗರ್ಭಧಾರಣೆಗೆ, ಆರೋಗ್ಯಕರ ದೇಹ, ಮನಸ್ಸು ಮತ್ತು ವಯಸ್ಸು ಅತ್ಯವಶ್ಯಕ” ಎಂಬುದು ಈ ವರ್ಷ ಘೋಷ ವಾಕ್ಯವಾಗಿದ್ದು ಅದರಂತೆ ಈ ವರ್ಷ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಎನ್.ಎನ್ ಮಹೇಶ್ ಕುಮಾರ್, ಡಿ ಎಫ್ ಡಬ್ಲ್ಯೂ ಓ ಅಧಿಕಾರಿ ಡಾ.ಚಂದ್ರಶೇಖರ್ ರೆಡ್ಡಿ, ಆರ್ ಸಿ ಎಚ್ ಓ ಅಧಿಕಾರಿ ಡಾ.ಜಿ.ವಿ ಸಂತೋಷ್ ಬಾಬು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ ಎಚ್. ಎನ್ ರಂಗಪ್ಪ ಹಾಗೂ ವಿವಿಧ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.