Chikkaballapur News: ಮಿಟ್ಟೆಮರಿಯಲ್ಲಿ ಅದ್ದೂರಿಯಾಗಿ ನಡೆದ ಗರುಡಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ
ದೇವಾಲಯದಲ್ಲಿ ಬೆಳಗ್ಗೆ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಹೋಮ ಹವನಗಳು ಹಾಗೂ ದೇವರಿಗೆ ವಿಶೇಷ ಪೂಜಾ ಕಾರ್ಯಗಳು ನಡೆದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ದೇವರ ಮೂರ್ತಿಗಳನ್ನು ಕರೆ ತಂದು ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ತಹಸೀಲ್ದಾರ್ ಮನಿ ಷಾ ಮಹೇಶ್ ಎಸ್.ಪತ್ರಿಯವರು ರಥೋತ್ಸವಕ್ಕೆ ಚಾಲನೆ ನೀಡಿದರು

ತಾಲೂಕಿನ ಮಿಟ್ಟೇಮರಿ ಗ್ರಾಮದ ಐತಿಹಾಸಿಕವಾಗಿ ಪ್ರಸಿದ್ಧಿ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನೆರವೇರಿತು.

ಬಾಗೇಪಲ್ಲಿ: ತಾಲೂಕಿನ ಮಿಟ್ಟೇಮರಿ ಗ್ರಾಮದ ಐತಿಹಾಸಿಕವಾಗಿ ಪ್ರಸಿದ್ಧಿ ಲಕ್ಷ್ಮೀ ನರಸಿಂ ಹಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು.
ದೇವಾಲಯದಲ್ಲಿ ಬೆಳಗ್ಗೆ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಹೋಮ ಹವನಗಳು ಹಾಗೂ ದೇವರಿಗೆ ವಿಶೇಷ ಪೂಜಾ ಕಾರ್ಯಗಳು ನಡೆದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ದೇವರ ಮೂರ್ತಿಗಳನ್ನು ಕರೆತಂದು ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ತಹಸೀಲ್ದಾರ್ ಮನಿಷಾ ಮಹೇಶ್ ಎಸ್.ಪತ್ರಿಯವರು ರಥೋತ್ಸವಕ್ಕೆ ಚಾಲನೆ ನೀಡಿದರು.
ನಮ್ಮ ನಾಡು ಸುಭೀಕ್ಷವಾಗಿರಲಿ: ಇದೆ ವೇಳೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಸಕು ಟುಂಬಸ್ಥರ ಸಮೇತ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು,ನಂತರ ಮಾಧ್ಯಮದವ ರೊಂದಿಗೆ ಮಾತನಾಡಿ ಅವರು, ಶ್ರೀ ಗರುಡಾದ್ರಿ ಲಕ್ಷ್ಮಿನರಸಿಂಹಸ್ವಾಮಿಯವರ ಅನುಗ್ರಹ ದಿಂದ ನಮ್ಮ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ, ರೈತಾಪಿ ವರ್ಗವು ಸಂತೋಷದಿಂದಿರ ಬೇಕು ಹಾಗೂ ಸುಭಿಕ್ಷವಾಗಿ ಇರಬೇಕೆಂದು ಪ್ರಾರ್ಥಿಸುತ್ತೇನೆ ಎಂದರು.
ಇದನ್ನೂ ಓದಿ: Chikkaballapur News: ಚಿಂತಾಮಣಿ ಡಿಸಿಸಿ ಬ್ಯಾಂಕ್‌ನಲ್ಲಿ ಮಹಾ ವಂಚನೆ: ಆರ್‌ಟಿಐ ಕಾರ್ಯಕರ್ತನ ಗಂಭೀರ ಆರೋಪ
ಬಾರದ ಗರುಡ,ಭಕ್ತರಲ್ಲಿ ನಿರಾಸೆ
ಈ ರಥೋತ್ಸವದ ಸಮಯಕ್ಕೆ ನೆರೆಯ ಆಂದ್ರಪ್ರದೇಶದ ಕದಿರಿಯಿಂದ ಗರುಡ ಪಕ್ಷಿ ಬಂದು ರಥ ಚಾಲನೆ ಮಾಡೋಕೆ ಸೂಚನೆ ಕೊಟ್ಟ ನಂತರವಷ್ಟೇ ಇಲ್ಲಿ ರಥಕ್ಕೆ ಚಾಲನೆ ನೀಡಲಾ ಗುತ್ತಿತ್ತು. ಅದರಂತೆ ಗರುಡ ಪಕ್ಷಿ ಬಂದು ರಥದ ಪ್ರದಕ್ಷಿಣೆ ಹಾಕಿದ ನಂತರ ರಥವನ್ನು ಎಳೆದು, ಬೀದಿಗಳಲ್ಲಿ ಸಂಚರಿಸಲಾಗುತ್ತಿತ್ತು. ಆದರೆ ಈ ವರ್ಷ ಗರುಡನ ಪ್ರದೀಕ್ಷಣೆಯಾಗದ ಹಿನ್ನಲೆಯಲ್ಲಿ ಭಕ್ತರಲ್ಲಿ ನಿರಾಸೆ ಮೂಡಿಸಿತು. ಹಾಗಾಗಿ ಆಕಾಶದತ್ತ ನೋಡಿ, ದೇವರನ್ನು ಸ್ಮರಿಸಿ ರಥವನ್ನು ಎಳೆಯಲಾಯಿತು.
ರಥೋತ್ಸವದಲ್ಲಿ ವ್ಯಾಪಾರ ವಹಿವಾಟು ಜೋರು
ರಥೋತ್ಸವದ ಸ್ಥಳದಲ್ಲಿ ವಿವಿಧ ಬಗೆಯ ಮಕ್ಕಳ ಆಟಿಕೆಗಳು, ತುತ್ತೂರಿ, ಬಗೆಬಗೆಯ ಬೆಲೂನ್ ಮತ್ತಿತರ ಆಟದ ಸಾಮಗ್ರಿಗಳ ಅಂಗಡಿ ಮಳಿಗೆಗಳು ತೆರಯಲಾಗಿತ್ತು. ಈ ವೇಳೆ, ವ್ಯಾಪಾರ ವಹಿವಾಟು ಜೋರಾಗಿತ್ತು. ಇದರ ಜೊತೆಗೆ ಬುರುಗು,ಬೂಂದಿ,ಬತ್ತಾಸು,ಕಾಶಿ ದಾರಗಳು,ಸರಗಳು ಸೇರಿದಂತೆ ಹಲವಾರು ಸಾಮಗ್ರಿಗಳ ಮಳಿಗೆಗಳನ್ನು ತೆರೆಯಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬೂರಗಮಡುಗು ಲಕ್ಷ್ಮೀ ನರಸಿಂಹ ಪ್ಪ, ಪಿ.ಮಂಜುನಾಥ್ ರೆಡ್ಡಿ, ಕಂದಾಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.