ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ದೊಡ್ಡ ಗ್ಯಾಂಗ್‌ಸ್ಟರ್‌ ಪರಿಚಯ ನನಗಿದೆ.. ಹುಷಾರ್‌! ಕುಡಿದ ಮತ್ತಿನಲ್ಲಿ ಶಾಲೆಗೆ ನುಗ್ಗಿ ಕಿಡಿಗೇಡಿಯ ಪುಂಡಾಟ- ವಿಡಿಯೋ ಫುಲ್‌ ವೈರಲ್‌

ಕುಡಿದ ಮತ್ತಿನಲ್ಲಿ ಶಿವಕುಮಾರ್ ಎಂಬಾತ ಪ್ರಾಥಮಿಕ ಶಾಲೆಗೆ ನುಗ್ಗಿ ಅಲ್ಲಿ ಶಿಕ್ಷಕರಿಗೆ ಬೆದರಿಕೆ ಹಾಕಿದ್ದಲ್ಲದೇ ಮಕ್ಕಳನ್ನು ಶಾಲೆಯಿಂದ ಹೊರಹಾಕಿ ಶಾಲೆಯನ್ನು ಮುಚ್ಚಲು ಪ್ರಯತ್ನಿಸಿದ ಘಟನೆ ಉತ್ತರ ಪ್ರದೇಶದ ಮೀರತ್‍ನ ರೋಹಟಾ ಅಭಿವೃದ್ಧಿ ಬ್ಲಾಕ್‌ನ ಜಿಟೋಲಾ ಗ್ರಾಮದಲ್ಲಿ ನಡೆದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕುಡಿದ ಮತ್ತಿನಲ್ಲಿ ಶಾಲೆಗೆ ನುಗ್ಗಿದ ಕಿಡಿಗೇಡಿ ಮಾಡಿದ್ದೇನು? ವಿಡಿಯೊ ನೋಡಿ

Profile pavithra Mar 17, 2025 11:05 AM

ಲಖನೌ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪ್ರಾಥಮಿಕ ಶಾಲೆಗೆ ನುಗ್ಗಿ ಅಲ್ಲಿ ಗೊಂದಲ ಸೃಷ್ಟಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‍ನ ರೋಹಟಾ ಅಭಿವೃದ್ಧಿ ಬ್ಲಾಕ್‌ನ ಜಿಟೋಲಾ ಗ್ರಾಮದಲ್ಲಿ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯರು ಈ ಬಗ್ಗೆ ಪ್ರತಿಭಟಿಸಿದಾಗ, ಆ ವ್ಯಕ್ತಿ ರಾಜಸ್ಥಾನದ ಕುಖ್ಯಾತ ಅಪರಾಧಿಯ ಸಂಪರ್ಕ ತನಗಿದೆ ಎಂದು ಹೇಳಿ ಗ್ರಾಮದ ಮುಖ್ಯಸ್ಥರು ಮತ್ತು ಶಿಕ್ಷಕರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ಜಿಟೋಲಾ ಗ್ರಾಮದ ನಿವಾಸಿ ರಮೇಶ್ ಎಂಬಾತನ ಪುತ್ರ ಶಿವಕುಮಾರ್ ಎಂಬಾತ ಮಧ್ಯಾಹ್ನ ಕುಡಿದ ಮತ್ತಿನಲ್ಲಿ ಪ್ರಾಥಮಿಕ ಶಾಲೆಗೆ ಪ್ರವೇಶಿಸಿದ್ದಾನೆ. ಆತ ಶಾಲೆಯ ಮುಖ್ಯೋಪಾಧ್ಯಾಯಿನಿ ರುಚಿ ಮಿತ್ತಲ್ ಮತ್ತು ಇತರ ಸಿಬ್ಬಂದಿ ಸದಸ್ಯರಿಗೆ ಕೂಡ ತೊಂದರೆ ನೀಡಿದ್ದಾನಂತೆ. ಸಿಬ್ಬಂದಿ ಅವನನ್ನು ತಡೆಯಲು ಪ್ರಯತ್ನಿಸಿದಾಗ, ಅವನು ತನ್ನ ಬಟ್ಟೆಗಳನ್ನು ತೆಗೆದು ಅರೆಬೆತ್ತಲೆಯಾಗಿ ನಿಂತಿದ್ದಾನಂತೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ವಿಡಿಯೊ ಇಲ್ಲಿದೆ ನೋಡಿ



ತರಗತಿಯೊಳಗೆ ಪ್ರವೇಶಿಸಿದ ಶಿವಕುಮಾರ್‌ ಮಕ್ಕಳನ್ನು ತರಗತಿಯಿಂದ ಬಲವಂತವಾಗಿ ಹೊರಹಾಕಿ ಮನೆಗೆ ಕಳುಹಿಸಿದ್ದಾನೆ. ಇತನ ಕೃತ್ಯಗಳನ್ನು ಸಿಬ್ಬಂದಿಯೊಬ್ಬರು ತಮ್ಮ ಮೊಬೈಲ್ ಫೋನ್‍ಗಳಲ್ಲಿ ರೆಕಾರ್ಡ್ ಮಾಡುತ್ತಿದ್ದಂತೆ, ಅವನು ರಾಜಸ್ಥಾನದ ಕುಖ್ಯಾತ ಅಪರಾಧಿ ಪಪ್ಪಲ್ ಗುರ್ಜರ್‌ನೊಂದಿಗೆ ತನಗೆ ಸಂಬಂಧವಿದೆ ಎಂದು ಶಿಕ್ಷಕರು ಮತ್ತು ಗ್ರಾಮದ ಮುಖ್ಯಸ್ಥರಿಗೆ ಬೆದರಿಕೆ ಹಾಕಿದ್ದಾನೆ.

ಘಟನೆಯ ಬಗ್ಗೆ ತಿಳಿದ ಗ್ರಾಮಸ್ಥರು ಶಾಲೆಗೆ ಧಾವಿಸಿ, ಶಿವಕುಮಾರ್ ಅವನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳಾ ಶಿಕ್ಷಕಿಯೊಬ್ಬಳು ಆತನ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ಟೀಕೆಗೆ ಕಾರಣವಾಗಿದೆ. ಕುಡಿದು ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ಶಾಲೆಯಲ್ಲಿ ಗಲಾಟೆ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಅನೇಕರು ಉತ್ತರ ಪ್ರದೇಶ ಪೊಲೀಸರು ಮತ್ತು ಸಿಎಂ ಯೋಗಿ ಅವರನ್ನು ಟ್ಯಾಗ್ ಮಾಡಿ, ಆ ವ್ಯಕ್ತಿಯನ್ನು ಪತ್ತೆಹಚ್ಚಿ ತಕ್ಷಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಅಯ್ಯಯ್ಯೋ.. ಗಾಂಧಿ ಬಿಟ್ಟು ಹೋದ್ರು..ಕುಡುಕರಿಬ್ಬರ ಗೋಳಾಟದ ವಿಡಿಯೊ ವೈರಲ್!

ನಶೆಯಲ್ಲಿ ತೂರಾಡುತ್ತಾ ಬಂದ ಪ್ರಾಂಶುಪಾಲ

ಇತ್ತೀಚೆಗೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಸರಕಾರಿ ಶಾಲೆಯೊಂದರ ಪ್ರಾಂಶುಪಾಲ ಮುನ್ನಾ ಲಾಲ್ ಕೊಲ್ ಮದ್ಯದ ನಶೆಯಲ್ಲಿ ತೂರಾಡುತ್ತಾ ಶಾಲೆಯ ಮೆಟ್ಟಿಲು ಹತ್ತಲು ಹರಸಾಹಸಪಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಈ ಪ್ರಾಂಶುಪಾಲರ ಮೇಲೆ ಕಠಿಣ ಕ್ರಮ ಜರುಗಿಸಲು ನಿರ್ಧರಿಸಿದೆಯಂತೆ.ಅದೂ ಅಲ್ಲದೇ ಈಗ ಶಾಲೆಯಲ್ಲಿ ವಿದ್ಯಾರ್ಥಿಗಳು ಬಿಯರ್‌ ಕುಡಿದು ಕೇಕ್‌ ಕತ್ತರಿಸುವ ಪ್ರಕರಣಗಳು ನಡೆದಿವೆ.