ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tamilisai Soundararajan: TASMAC ಹಗರಣದ ವಿರುದ್ಧ ಪ್ರತಿಭಟನೆ ; ಬಿಜೆಪಿ ನಾಯಕಿ ತಮಿಳಿಸೈ ಸುಂದರರಾಜನ್ ಬಂಧನ

ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ ಹಗರಣದ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ತಮಿಳಿಸೈ ಸುಂದರರಾಜನ್ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ತಮಿಳಿಸೈ ಸೌಂದರರಾಜನ್ ತಮ್ಮ ಮನೆಯಿಂದ ಹೊರ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

TASMAC  ಹಗರಣದ ವಿರುದ್ಧ ಪ್ರತಿಭಟನೆ; ತಮಿಳಿಸೈ ಸುಂದರರಾಜನ್ ಬಂಧನ

ಸಾಂದರ್ಭಿಕ ಚಿತ್ರ

Profile Vishakha Bhat Mar 17, 2025 11:50 AM

ಚೆನ್ನೈ: ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (TASMAC) ಹಗರಣದ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ತಮಿಳಿಸೈ ಸುಂದರರಾಜನ್ ಅವರನ್ನು ತಮಿಳುನಾಡು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಎಗ್ಮೋರ್‌ನ ಟಾಸ್ಮ್ಯಾಕ್ ಕಚೇರಿಯಲ್ಲಿ ನಡೆಯಲಿರುವ ಘೇರಾವ್‌ನಲ್ಲಿ ಭಾಗವಹಿಸಲು ತಮಿಳಿಸೈ ಸುಂದರರಾಜನ್ ತಮ್ಮ ಮನೆಯಿಂದ ಹೊರ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದಲೇ ಅವರ ಮನೆಯ ಹೊರಗೆ ಕಾಯುತ್ತಿದ್ದ ಉಪ ಪೊಲೀಸ್ ಆಯುಕ್ತ ಸ್ನೇಹಪ್ರಿಯಾ ಮತ್ತು ಅಧಿಕಾರಿಗಳ ನೇತೃತ್ವದ ಪೊಲೀಸ್ ತಂಡ, ಅವರನ್ನು ಮನೆಯಿಂದ ಹೊರ ಹೋಗದಂತೆ ತಡೆದಿದ್ದಾರೆ.

ನನ್ನ ನಿವಾಸದಿಂದಲೇ ನನ್ನನ್ನು ಪೊಲೀಸರು ಬಂಧಿಸಿದ್ದಾರೆ. ನಾನು ಪ್ರತ್ಯೇಕವಾಗಿ ಹೋಗುವುದಿಲ್ಲ. ಎಲ್ಲರೂ ನನ್ನೊಂದಿಗೆ ಬರಬೇಕೆಂದು ನಾನು ಬಯಸುತ್ತೇನೆ" ಎಂದು ಪೊಲೀಸರು ವಶಕ್ಕೆ ಪಡೆದಾಗ ಸುಂದರರಾಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಸೌಂದರರಾಜನ್, ಯಾವುದೇ ವಿಷಯದ ಬಗ್ಗೆ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದರು. TASMAC ಹಗರಣದ ಬಗ್ಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ (ED) TASMAC ನಲ್ಲಿ 1,000 ರೂ. ಕೋಟಿ ಮೌಲ್ಯದ ಅಕ್ರಮಗಳನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ, ನಾವು ಶಾಂತಿಯುತ ಆಂದೋಲನವನ್ನು ಘೋಷಿಸಿದ್ದೇವೆ. ಆದರೆ ಅವರು ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Cable sparks row Tamil Nadu: ತಮಿಳುನಾಡಿನ ಸರ್ಕಾರಿ ಕೇಬಲ್‌ ಟಿವಿಯಲ್ಲಿ ಅಶ್ಲೀಲ ಸಿನಿಮಾ ಪ್ರಸಾರ; ಪ್ರಕರಣ ದಾಖಲು

ಇದಕ್ಕೂ ಮುನ್ನ, ಬಿಜೆಪಿ ನಾಯಕ ಸಿ.ಆರ್. ಕೇಶವನ್ ಶನಿವಾರ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರದ ಬಜೆಟ್ ಅನ್ನು ಟೀಕಿಸಿದ್ದರು. ಈ ಬಜೆಟ್‌ ಜನರ ಅಗತ್ಯಗಳಿಗೆ ತಕ್ಕಂತೆ ಇಲ್ಲ ನೀರಸವಾಗಿದೆ ಎಂದು ಅವರು ಹೇಳಿದರು. ಬಜೆಟ್ ಜನರ ನಿರ್ಣಾಯಕ ಅಗತ್ಯಗಳನ್ನು ನಿರ್ಲಕ್ಷಿಸುತ್ತದೆ ಮತ್ತು ರಾಜ್ಯದ ಮೇಲೆ 9.3 ಲಕ್ಷ ಕೋಟಿ ರೂ ಸಾಲದ ಹೊರೆಯನ್ನು ಹೇರುತ್ತದೆ ಎಂದು ಅವರು ಆರೋಪಿಸಿದ್ದರು. ಶುಕ್ರವಾರ, ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ರಾಜ್ಯ ಸಚಿವ ವಿ. ಸೆಂಥಿಲ್ ಬಾಲಾಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, "ಪ್ರತಿಯೊಂದು ಹಗರಣದಲ್ಲೂ" ಭಾಗಿಯಾಗಿರುವ "ಕಿಂಗ್‌ಪಿನ್" ಎಂದು ಕರೆದಿದ್ದಾರೆ.