ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attack: 10 ವರ್ಷದ ಯುವಕ ಸೇರಿ ನಿನ್ನೆ ಒಂದೇ ದಿನ 8 ಜನ ಹೃದಯಾಘಾತಕ್ಕೆ ಬಲಿ

Heart Attack: ಚಾಮರಾಜನಗರದಲ್ಲಿ 10 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿಯಾಗಿದ್ದು, ಕ್ಲಾಸಿನಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಕಲಬುರಗಿಯಲ್ಲಿ ಒಂದು ವಾರದ ಹಿಂದಷ್ಟೇ ಮದುವೆಯಾಗಿದ್ದ 22 ವರ್ಷದ ಯುವಕ ಕೂಡ ಹೃದಯಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ.

10 ವರ್ಷದ ಯುವಕ ಸೇರಿ ನಿನ್ನೆ ಒಂದೇ ದಿನ 8 ಜನ ಹೃದಯಾಘಾತಕ್ಕೆ ಬಲಿ

ಹರೀಶ್‌ ಕೇರ ಹರೀಶ್‌ ಕೇರ Jul 10, 2025 7:22 AM

ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ (Heart Attack) ಹಾಗೂ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ ಒಬ್ಬ ಬಾಲಕ ಸೇರಿದಂತೆ 8 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪಾಠ ಕೇಳುತ್ತಿರುವಾಗಲೇ ಹೃದಯಸ್ತಂಭನದಿಂದ ಮೃತಪಟ್ಟ 4ನೇ ತರಗತಿಯ ವಿದ್ಯಾರ್ಥಿಯ ಸಾವು ಎಲ್ಲರನ್ನೂ ಸ್ತಂಭೀಭೂತಗೊಳಿಸಿದೆ. ಈ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಕುರುಬಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ನಾಲ್ಕನೇ ತರಗತಿ ವಿದ್ಯಾರ್ಥಿ 10 ವರ್ಷದ ಮನೋಜ್ ಕುಮಾರ್ ಸಾವನಪ್ಪಿದ್ದಾನೆ. ಪಾಠ ಕೇಳುತ್ತಿದ್ದಾಗ ಕುಸಿದು ಬಿದ್ದು ಮನೋಜ್ ಸಾವನಪ್ಪಿದ್ದಾನೆ. ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಅಲ್ಲದೇ ಹೃದಯದಲ್ಲಿ ರಂಧ್ರ ಕೂಡ ಇತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಬೆಂಗಳೂರಿನ ಜಯದೇವ ಮತ್ತು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸೌದತ್ತಿ ಪಟ್ಟಣದ ಎಪಿಎಂಸಿಯ ಆವರಣದಲ್ಲಿ ಹೃದಯಾಘಾತದಿಂದ ಅಶೋಕ್ ಜೀರಿಗವಾಡ (40) ಎನ್ನುವ ವ್ಯಕ್ತಿ ಸಾವನಪ್ಪಿದ್ದಾರೆ. ಮೃತ ಅಶೋಕ್ ಸೌದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಸೌದತಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಅಶೋಕ್ ಹೆಸರು ಕಾಳು ತಂದಿದ್ದರು. ಈ ವೇಳೆ ಎದೆನೋವಿನಿಂದ ಕುಸಿದು ಬಿದ್ದು ಚಾಲಕ ಅಶೋಕ್ ಸಾವನಪ್ಪಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ ಹೃದಯಾಘಾತದಿಂದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ ಅಕ್ಷಯ್ ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅಕ್ಷಯ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಕನಕಪುರ ತಾಲೂಕಿನ ಕೊಗ್ಗೆ ದೊಡ್ಡಿ ಗ್ರಾಮದ 38 ವರ್ಷದ ಮಾದೇಶ್ ನಾಯ್ಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಾದೇಶ್ ನಾಯ್ಕ್ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಮಾದೇಶ್ ನಾಯಕ್ ಸಾವನಪ್ಪಿದ್ದಾರೆ.

ಧಾರವಾಡದಲ್ಲಿ 25 ವರ್ಷದ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುರೋಹಿತ ನಗರದ ಜೀವಿತಾ ಕುಸಗೂರು ಸಾವನ್ನಪ್ಪಿದ್ದಾರೆ. ಈಕೆ ಯುಪಿಎಸ್‌ಸಿ ಪರೀಕ್ಷೆ ಕನಸು ಕಂಡಿದ್ದು, ಐಎಎಸ್ ಅಧಿಕಾರಿ ಆಗುವ ಕನಸು ಹೊತ್ತಿದ್ದಳು. ಆದರೆ ದುರದೃಷ್ಟವಶಾತ್ ಹೃದಯಾಘಾತಕ್ಕೆ ಇಂದು ಬಲಿಯಾಗಿದ್ದಾಳೆ.

ಕಲಬುರಗಿಯಲ್ಲಿ ಹೃದಯಾಘಾತಕ್ಕೆ ಯುವಕ 22 ವರ್ಷದ ಮೊಹಸೀನ್ ಪಟೇಲ್ ಬಲಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಮನೆಯಲ್ಲಿ ಕುಸಿದು ಬಿದ್ದ ಮೊಹಸೀನ್ ಪಟೇಲ್ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದ ಹಿಂದೆ ಅಷ್ಟೇ ವಾಸಿನ್ ಪಟೇಲ್ ವಿವಾಹವಾಗಿದ್ದರು. ಆದರೆ ಒಂದೇ ವಾರದಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದು ಕುಟುಂಬಸ್ಥರಿಗೆ ಆಘಾತ ಉಂಟು ಮಾಡಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ಯುವಕ ಬಲಿಯಾಗಿದ್ದು, ಹೃದಯಾಘಾತದಿಂದ ಗೊಲ್ಲರದೊಡ್ಡಿ ನಿವಾಸಿ ಗಿರೀಶ್ (25) ಇದೀಗ ಸಾವನಪ್ಪಿದ್ದಾನೆ. ದನ ಮೇಯಿಸಲು ತಳ್ಳಿದ್ದಾಗ ಗಿರೀಶ್ ಹೃದಯಘಾರದಿಂದ ಸವನ್ನಪಿದ್ದಾನೆ. ಕಳೆದ ಮೂರು ದಿನಗಳಿಂದ ಗಿರೀಶ್ ಗೆ ಎದೆ ನೋವು ಕಾಣಿಸಿಕೊಂಡಿತ್ತು. ಇದೀಗ ಇಂದು ಹಾರ್ಟ್ ಅಟ್ಯಾಕ್ ಗೆ ಗಿರೀಶ್ ಬಲಿಯಾಗಿದ್ದಾನೆ.

ಇದನ್ನೂ ಓದಿ: Health Tips: ಹೃದಯ ಆರೋಗ್ಯಕ್ಕೂ ಬೇಕು ಕಾಳಜಿ