IND vs ENG: ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ ಕ್ರಿಕೆಟ್ ದೇವರು!
ಗುರುವಾರ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಐದು ನಿಮಿಷಗಳ ಕಾಲ ಐತಿಹಾಸಿಕ ಗಂಟೆ ಬಾರಿಸಿದರು. ನಂತರ ಎಂಸಿಸಿ ಮ್ಯೂಸಿಯಂನಲ್ಲಿ ಕ್ರಿಕೆಟ್ ದೇವರಿಗೆ ವಿಶೇಷ ಗೌರವವನ್ನು ನೀಡಲಾಯಿತು.

ಎಂಸಿಸಿಯಲ್ಲಿ ಸಚಿನ್ ತೆಂಡೂಲ್ಕರ್‌ಗೆ ವಿಶೇಷ ಗೌರವ ನೀಡಲಾಗಿದೆ.

ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಗುರುವಾರ ಭಾರತ ಹಾಗೂ ಇಂಗ್ಲೆಂಡ್ ತಂಡಗಳ(IND vs ENG) ನಡುವಣ ಮೂರನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ದಿಗ್ಗಜ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ಗೆ (Sachin Tendulkar) ಎಂಸಿಸಿ (Marylebone Cricket Club) ವತಿಯಿಂದ ವಿಶೇಷ ಗೌರವವನ್ನು ನೀಡಲಾಯಿತು. ಪಂದ್ಯದ ಆರಂಭಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಅಂಗಣದ ಐತಿಹಾಸಿಕ ಗಂಟೆಯನ್ನು ಐದು ನಿಮಿಷಗಳ ಕಾಲ ಬಾರಿಸಿದರು, ಆ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು. ಸಾಮಾನ್ಯವಾಗಿ ಲಾರ್ಡ್ಸ್‌ನಲ್ಲಿ ನಡೆಯುವ ಐದು ದಿನಗಳ ಟೆಸ್ಟ್ ಪಂದ್ಯದ ಅರಂಭಕ್ಕೂ ಮುನ್ನ ಗಂಟೆಯನ್ನು ಬಾರಿಸಲು ಯಾರಾದರೂ ಕ್ರಿಕೆಟ್ ದಿಗ್ಗಜನನ್ನು ಎಂಸಿಸಿ ಆಹ್ವಾನ ನೀಡುತ್ತದೆ.
ಇದೇ ವೇಳೆ ಕ್ರಿಕೆಟ್ ದೇವರು ಟೆಸ್ಟ್ ಪಂದ್ಯದಲ್ಲಿನ ತಮ್ಮ ಹಳೆಯ ಫೋಟೋವನ್ನು ಎಂಸಿಸಿ ಮ್ಯೂಸಿಯಂನಲ್ಲಿ ಅನಾವರಣಗೊಳಿಸಿದರು. ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಂದ ಹಾಗೆ ಟೆಸ್ಟ್ ಪಂದ್ಯಕ್ಕೂ ಮುನ್ನ ಗಂಟೆ ಬಾರಿಸುವ ಪ್ರಕ್ರಿಯೆಯನ್ನು ಮುಂದುವರಿಸಲಾಗುತ್ತಿದೆ. ಇತ್ತೀಚೆಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿಯೂ ಗಂಟೆ ಬಾರಿಸುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಲಾಗಿತ್ತು.
IND vs ENG: ʻಬೆಳಿಗ್ಗೆವರೆಗೂ ಗೊಂದಲದಲ್ಲಿದ್ದೆʼ-ಟಾಸ್ ವೇಳೆ ಶುಭಮನ್ ಗಿಲ್ ಹೀಗೇಳಿದ್ದೇಕೆ?
ಎಂಸಿಸಿ ವತಿಯಿಂದ ತಮಗೆ ಲಭಿಸಿದ ವಿಶೇಷ ಗೌರವದ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್ ತೆಂಡೂಲ್ಕರ್, 1988ರಲ್ಲಿ ತಾವು 15ನೇ ವಯಸ್ಸಿನಲ್ಲಿ ಮೊಟ್ಟ ಮೊದಲ ಬಾರಿ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಒಂದು ಸುತ್ತು ನಡೆದಿದ್ದ ಘಟನೆಯನ್ನು ಇದೀಗ ಸ್ಮರಿಸಿಕೊಂಡಿದ್ದಾರೆ.
I first visited Lord’s as a teenager in 1988, and returned in 1989 with the Star Cricket Club team.
— Sachin Tendulkar (@sachin_rt) July 10, 2025
I remember standing near the pavilion, soaking in the history and dreaming quietly.
Today, to have my portrait unveiled at this very place is a feeling that’s hard to put into… pic.twitter.com/ZC987eH8oZ
1988ರ ಘಟನೆಯನ್ನು ನೆನೆದ ಕ್ರಿಕೆಟ್ ದೇವರು
"ನಾನು ಮೊದಲು ಹದಿಹರೆಯದವನಾಗಿದ್ದಾಗ 1988ರಲ್ಲಿ ಲಾರ್ಡ್ಸ್‌ಗೆ ಭೇಟಿ ನೀಡಿದ್ದೆ ಮತ್ತು 1989 ರಲ್ಲಿ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡದೊಂದಿಗೆ ಹಿಂತಿರುಗಿದೆ. ಪೆವಿಲಿಯನ್ ಬಳಿ ನಿಂತು ಇತಿಹಾಸದಲ್ಲಿ ಮುಳುಗಿ ಸದ್ದಿಲ್ಲದೆ ಕನಸು ಕಂಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇಂದು(ಜುಲೈ 10) ಈ ಸ್ಥಳದಲ್ಲಿ ನನ್ನ ಭಾವಚಿತ್ರವನ್ನು ಅನಾವರಣಗೊಳಿಸುವುದನ್ನು ಪದಗಳಲ್ಲಿ ಹೇಳುವುದು ಕಷ್ಟಕರವಾದ ಭಾವನೆಯಾಗಿದೆ. ಜೀವನವು ನಿಜವಾಗಿಯೂ ಪೂರ್ಣ ವೃತ್ತಕ್ಕೆ ಬಂದಿದೆ. ನಾನು ಕೃತಜ್ಞನಾಗಿದ್ದೇನೆ ಮತ್ತು ಅದ್ಭುತ ನೆನಪುಗಳಿಂದ ತುಂಬಿದ್ದೇನೆ," ಎಂದು ಸಚಿನ್ ತೆಂಡೂಲ್ಕರ್ ತಮ್ಮ ಫೋಟೋಗಳಿಗೆ ಈ ರೀತಿಯ ಶೀರ್ಷಿಕೆಯನ್ನು ನೀಡಿದ್ದಾರೆ.
A very special morning unveiling the new Sachin Tendulkar portrait in the Lord’s museum. 🖼️🇮🇳 pic.twitter.com/OW3jLsqaFq
— Lord's Cricket Ground (@HomeOfCricket) July 10, 2025
"ಭಾರತ ಮತ್ತು ಇಂಗ್ಲೆಂಡ್ ತಂಡಗಳು ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿವೆ. ಇದನ್ನು ಸಚಿನ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಜೇಮ್ಸ್ ಆಂಡರ್ಸನ್ ಅವರ ಹೆಸರಿನಲ್ಲಿ ಇಡಲಾಗಿದೆ. ಈ ಇಬ್ಬರೂ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ ಏಕೆಂದರೆ ಸಚಿನ್ ಭಾರತಕ್ಕಾಗಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ, ಆಂಡರ್ಸನ್ ಇಂಗ್ಲೆಂಡ್ ಪರ 188 ರೆಡ್-ಬಾಲ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ," ಎಂದು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
IND vs ENG 3rd Tes: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್; ಭಾರತ ಪರ ಒಂದು ಬದಲಾವಣೆ
ತೆಂಡೂಲ್ಕರ್‌ರ ಅಂಕಿಅಂಶಗಳು
ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. 1989 ರಿಂದ 2013 ರವರೆಗಿನ 24 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ತೆಂಡೂಲ್ಕರ್ ಭಾರತ ತಂಡದ ಪರ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಒಟ್ಟು 34,357 ರನ್ ಗಳಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಶ್ರೀಲಂಕಾ ದಿಗ್ಗಜ ಕುಮಾರ್ ಸಂಗಕ್ಕಾರ (28,016) ಎರಡನೇ ಸ್ಥಾನದಲ್ಲಿದ್ದಾರೆ.