IND vs ENG: ʻಬೆಳಿಗ್ಗೆವರೆಗೂ ಗೊಂದಲದಲ್ಲಿದ್ದೆʼ-ಟಾಸ್ ವೇಳೆ ಶುಭಮನ್ ಗಿಲ್ ಹೀಗೇಳಿದ್ದೇಕೆ?
Shubman Gill on 3rd test Toss: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಪಂದ್ಯದ ಮುನ್ನ ಟಾಸ್ ವೇಳೆ ಭಾರತ ತಂಡದ ನಾಯಕ ಶುಭಮನ್ ಗಿಲ್, ಗೊಂದಲಮಯ ಹೇಳಿಕೆ ನೀಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದ ಟಾಸ್ ವೇಳೆ ಶುಭಮನ ಗಿಲ್ ಹೇಳಿಕೆ.

ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು(IND vs ENG) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಕಳೆದ ಎರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡಸಿದ್ದ ಟೀಮ್ ಇಂಡಿಯಾ ಲಾರ್ಡ್ಸ್ ಟೆಸ್ಟ್‌ನಲ್ಲಿ ಬೌಲ್ ಮಾಡುತ್ತಿದೆ. ಟಾಸ್ ವೇಳೆ ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill), ಇಲ್ಲಿನ ಪಿಚ್ ಬಗ್ಗೆ ಗೊಂದಲಮಯ ಹೇಳಿಕೆಯನ್ನು ನೀಡಿದ್ದಾರೆ.
ಪಂದ್ಯದ ಟಾಸ್ ವೇಳೆ ಮಾತನಾಡಿದ ಶುಭಮನ್ ಗಿಲ್, "ಬೆಳಿಗ್ಗೆವರೆಗೂ ನಾನು ಕೂಡ ಗೊಂದಲದಲ್ಲಿದ್ದೆ. ನಾನು ಮೊದಲ ಬೌಲ್ ಮಾಡಬೇಕೆಂದು ಅಂದುಕೊಂಡಿದ್ದೆ. ಏಕೆಂದರೆ ಮೊದಲ ಸೆಷನ್‌ನಲ್ಲಿ ಪಿಚ್ ಬೌಲರ್‌ಗಳಿಗೆ ನೆರವು ನೀಡಲಿದೆ. ಪ್ರತಿಯೊಬ್ಬರೂ ಕೂಡ ಬೌಲ್ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಬೌಲರ್‌ಗಳು ಕೂಡ ವಿಶ್ವಾಸದಲ್ಲಿದ್ದಾರೆ, ಎಜ್‌ಬಾಸ್ಟನ್‌ನಲ್ಲಿ 20 ವಿಕೆಟ್‌ಗಳನ್ನುಯ ಕಬಳಿಸುವುದು ಸುಲಭವಲ್ಲ. ಅದ್ಭುತ ಭಾವನೆಗಳು ನನಗೆ ಉಂಟಾಗುತ್ತಿದೆ ಹಾಗೂ ಒಬ್ಬ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ನಲ್ಲಿ ನಿಂತು ಆಡುವಂತೆ ಭಾಸವಾಗುತ್ತಿದೆ. ಪ್ಲೇಯಿಂಗ್ XIನಲ್ಲಿ ನಾವು ಒಂದು ಬದಲಾವಣೆಯನ್ನು ತಂದಿದ್ದೇವೆ. ಪ್ರಸಿಧ್ ಕೃಷ್ಣ ಬದಲು ಜಸ್‌ಪ್ರೀತ್ ಬುಮ್ರಾ ಆಡುತ್ತಿದ್ದಾರೆ," ಎಂದು ಹೇಳಿದ್ದಾರೆ.
IND vs ENG 3rd Tes: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್; ಭಾರತ ಪರ ಒಂದು ಬದಲಾವಣೆ
ಬೆನ್ ಸ್ಟೋಕ್ಸ್ ಹೇಳಿದ್ದೇನು?
ಟಾಸ್ ವೇಳೆ ಶುಭಮನ್ ಗಿಲ್‌ಗೂ ಮುನ್ನ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೂಡ ಮಾತನಾಡಿದ್ದರು. " ನಾವು ಮೊದಲು ಬ್ಯಾಟ್ ಮಾಡುತ್ತೇವೆ. ಸಾಮಾನ್ಯವಾಗಿ ಈ ಪಿಚ್‌ನಲ್ಲಿ ಆರಂಭಿಕ ಒಂದು ಗಂಟೆ ಪಿಚ್ ಬೌಲರ್‌ಗಳಿಗೆ ನೆರವು ನೀಡಲಿದೆ. ಈ ಸರಣಿಯಲ್ಲಿ ಉತ್ತಮ ಪೈಪೋಟಿ ನಡೆಯುತ್ತಿದೆ ಹಾಗೂ ನಮ್ಮ ಮನಸ್ಥಿತಿ ಉತ್ತಮವಾಗಿದೆ. ಈ ಪಂದ್ಯಕ್ಕೆ ನಾವು ಸಿದ್ದರಾಗಿದ್ದೇವೆ. ದೇಹ ಕೂಡ ಉತ್ತಮವಾಗಿದೆ. ಬೇಗ ಬೇಗ ಸರಿಯಾಗುತ್ತೆ, ನಾವು ಫ್ರೆಶ್ ಆಗಿದ್ದೇವೆ ಮತ್ತು ಪಂದ್ಯಕ್ಕೆ ಸಿದ್ಧರಾಗಿದ್ದೇವೆ. ಲಾರ್ಡ್ಸ್‌ನಲ್ಲಿ ಆಡುವುದನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ ಹಾಗೂ ನೀವು ಅಂಗಣದಲ್ಲಿ ಆಡುವುದನ್ನು ಆನಂದಿಸಬಹುದು. ನಾವು ಒಂದು ಬದಲಾವಣೆಯನ್ನು ತಂದಿದ್ದೇವೆ- ಜಾಶ್ ಟಾಂಗ್ ಜಾಗದಲ್ಲಿ ಜೋಫ್ರಾ ಆರ್ಚರ್ ಆಡಲಿದ್ದಾರೆ," ಎಂದು ಆಂಗ್ಲರ ನಾಯಕ ತಿಳಿಸಿದ್ದಾರೆ.
🚨 Toss and Team Update 🚨
— BCCI (@BCCI) July 10, 2025
England win the toss and elect to bat in the 3rd Test.
Jasprit Bumrah is back in the eleven 🙌
Updates ▶️ https://t.co/X4xIDiSmBg#TeamIndia | #ENGvIND pic.twitter.com/uulWRWPOaU
ಭಾರತ ತಂಡದ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿ.ಕೀ), ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ ಪ್ಲೇಯಿಂಗ್ XI: ಝ್ಯಾಕ್ ಕ್ರಾವ್ಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ನಾಯಕ), ಕ್ರಿಸ್ ವೋಕ್ಸ್, ಬ್ರೈಡೆನ್ ಕಾರ್ಸ್, ಜೋಫ್ರಾ ಆರ್ಚರ್, ಶೋಯೆಬ್ ಬಷೀರ್
IND vs ENG: ತಮ್ಮ ಸ್ಟಂಪ್ ಮೈಕ್ ಸಂಭಾಷಣೆಯ ಹಿಂದಿನ ರಹಸ್ಯ ಬಯಲು ಮಾಡಿದ ರಿಷಭ್ ಪಂತ್!
ಸರಣಿಯಲ್ಲಿ ಸಮಬಲ ಕಾಯ್ದುಕೊಂಡಿರುವ ಉಭಯ ತಂಡಗಳು
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎರಡು ಪಂದ್ಯಗಳ ಅಂತ್ಯಕ್ಕೆ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ. ಲೀಡ್ಸ್‌ನ ಹೆಡಿಂಗ್ಲೆಯಲ್ಲಿ 5 ವಿಕೆಟ್‌ಗಳಿಂದ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ಗೆಲುವು ಪಡೆದಿದ್ದರೆ, ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ 336 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಇದೀಗ ಲಾರ್ಡ್ಸ್ ಟೆಸ್ಟ್‌ನಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಲು ಉಭಯ ತಂಡಗಳು ಎದುರು ನೋಡುತ್ತಿವೆ.