ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ''ಬ್ಲೌಸ್ ಒಳಗೆ ಕೈ ಹಾಕಿದ’': ಮಲೇಷ್ಯಾದ ಅರ್ಚಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ನಟಿ

ಭಾರತೀಯ ಮೂಲದ ನಟಿ ಲಿಶಾಲಿನಿ ಕನಾರನ್ ಮಲೇಷ್ಯಾ ಮರಿಯಮ್ಮನ್ ದೇವಾಲಯದ ಅರ್ಚಕನೊಬ್ಬ ಆಶೀರ್ವಾದದ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ, ಸ್ಥಳೀಯ ಪೊಲೀಸರು ಆರೋಪಿ ಅರ್ಚಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ನಟಿಯೊಂದಿಗೆ ಅನುಚಿತವಾಗಿ ವರ್ತಿಸಿದ ಅರ್ಚಕ

ನಟಿ ಲಿಶಾಲಿನಿ ಕನಾರನ್

Profile Sushmitha Jain Jul 10, 2025 5:34 PM

ಕೌಲಾಲಂಪುರ: ಭಾರತೀಯ ಮೂಲದ ನಟಿ ಲಿಶಾಲಿನಿ ಕನಾರನ್ (Lishalliny Kanaran), ಮಲೇಷ್ಯಾದ (Malaysia) ಮರಿಯಮ್ಮನ್ ದೇವಾಲಯದ ಅರ್ಚಕನೊಬ್ಬ (Priest) ಆಶೀರ್ವಾದದ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ, ಸ್ಥಳೀಯ ಪೊಲೀಸರು ಆರೋಪಿ ಅರ್ಚಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಲಿಶಾಲಿನಿ ಅವರ ಪೋಸ್ಟ್ ಪ್ರಕಾರ, ಈ ಘಟನೆ ಕಳೆದ ಶನಿವಾರ (ಜು. 5) ಸೆಪಾಂಗ್‌ನ ಮರಿಯಮ್ಮನ್ ದೇವಾಲಯದಲ್ಲಿ ನಡೆದಿದೆ. ಆಧ್ಯಾತ್ಮಿಕ ಸಂಪರ್ಕವನ್ನು ಬಲಪಡಿಸಲು ಆಗಾಗ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ ನಟಿ, ತಾಯಿಯು ಭಾರತದಲ್ಲಿದ್ದ ಕಾರಣ ಆ ದಿನ ಒಂಟಿಯಾಗಿ ಹೋಗಿದ್ದರು. ಆನ್‌ಲೈನ್‌ನಲ್ಲಿ ಹಂಚಿಕೊಂಡ ವಿವರಣೆಯಲ್ಲಿ, ಪುರೋಹಿತನು ವಿಧಿ ವಿಧಾನಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದ. ಪ್ರಾರ್ಥನೆಯ ಸಂದರ್ಭದಲ್ಲಿ ಪವಿತ್ರ ಜಲ ಮತ್ತು ರಕ್ಷಣಾ ದಾರದಿಂದ ಆಶೀರ್ವಾದ ಮಾಡುವುದಾಗಿ ಹೇಳಿದ್ದ ಎಂದು ತಿಳಿಸಿದ್ದಾರೆ.

ಪ್ರಾರ್ಥನೆ ಮುಗಿದ ನಂತರ, ಪುರೋಹಿತ ಒಂದು ಗಂಟೆ ಕಾಯಲು ಸೂಚಿಸಿ, ವಿಶೇಷ ಆಶೀರ್ವಾದಕ್ಕಾಗಿ ತನ್ನ ಕಚೇರಿಗೆ ಕರೆದೊಯ್ದಿದ್ದಾನೆ. “ಹೋಗುವಾಗಲೇ ಏನೋ ತಪ್ಪಾಗುತ್ತಿದೆ ಎನಿಸಿತು. ನಾನು ಒಳಗೊಳಗೇ ಆತಂಕಗೊಂಡಿದ್ದೆ” ಎಂದು ಅವರು ಬರೆದುಕೊಂಡಿದ್ದಾರೆ. ಕೊಠಡಿಯೊಳಗೆ ಪುರೋಹಿತನು ತೀವ್ರ ವಾಸನೆಯ ದ್ರವವನ್ನು ನೀರಿಗೆ ಬೆರೆಸಿ, ಅದು “ಸಾಮಾನ್ಯವಾದುದಲ್ಲ, ಭಾರತದಿಂದ ಬಂದ ಪವಿತ್ರ ಜಲ” ಎಂದು ಹೇಳಿ, ಅವರ ಮುಖಕ್ಕೆ ಚಿಮುಕಿಸಿದ್ದಾನೆ. “ನನ್ನ ಮುಖದ ಮೇಲೆ ನೀರನ್ನು ಸಿಂಪಡಿಸುತ್ತಲೇ ಇದ್ದುದ್ದರಿಂದ ನನಗೆ ಕಣ್ಣು ತೆರೆಯಲು ಸಾಧ್ಯವಾಗಲಿಲ್ಲ” ಎಂದು ಆಕೆ ವಿವರಿಸಿದ್ದಾರೆ.

ಈ ಸುದ್ದಿ ಓದಿ: Viral Video: ಕೈಯಲ್ಲಿ ಬಂದೂಕು ಹಿಡಿದು ನಡುರಸ್ತೆಯಲ್ಲಿ ಕುಣಿದ ಮಹಿಳೆ; ಕೊನೆಗೆ ಆಗಿದ್ದೇನು?

ʼʼನಂತರ ಆತ ನನ್ನ ಬ್ಲೌಸ್ ಮತ್ತು ಬ್ರಾದೊಳಗೆ ಕೈಯಿಟ್ಟು ಅನುಚಿತವಾಗಿ ಮುಟ್ಟಿದರುʼʼ ಎಂದು ಆಕೆ ತಿಳಿಸಿದ್ದಾರೆ. “ಇದು ತಪ್ಪೆಂದು ನನ್ನ ಮನಸ್ಸಿಗೆ ಗೊತ್ತಿತ್ತು. ಆದರೆ ನಾನು ದಿಗ್ಭ್ರಮೆಗೊಂಡೆ, ಮಾತನಾಡಲಾಗಲಿಲ್ಲ” ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ಲಿಶಾಲಿನಿಗೆ ಆಘಾತ ಮತ್ತು ಗಾಯವನ್ನುಂಟು ಮಾಡಿದೆಯಂತೆ. ಭಾರತಕ್ಕೆ ಮರಳಿದ ನಂತರ ತಾಯಿಗೆ ಈ ವಿಷಯ ತಿಳಿಸಿದ್ದು, ಜುಲೈ 4ರಂದು ದೂರು ದಾಖಲಿಸಲಾಯಿತು. ಆದರೆ ದೇವಾಲಯಕ್ಕೆ ತೆರಳಿದಾಗ ಪುರೋಹಿತನು ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. “ಈ ಹಿಂದೆಯೂ ಇದೇ ಆರೋಪದಡಿ ಆತನ ವಿರುದ್ಧ ದೂರು ಬಂದಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ” ಎಂದು ಲಿಶಾಲಿನಿ ತಿಳಿಸಿದ್ದಾರೆ. ದೇವಾಲಯದ ಆಡಳಿತವು ಆಕೆಗೆ ಸಹಾಯ ಮಾಡುವ ಬದಲು, ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿತು ಎಂದು ಆರೋಪಿಸಿದ್ದಾರೆ.