Rajkummar Rao: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ಖ್ಯಾತ ನಟ; ಸ್ಪೆಷಲ್ ಪೋಸ್ಟ್ ಶೇರ್
ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಹಾಗೂ ನಟಿ ಪತ್ರಲೇಖ ಅವರು ತಮ್ಮ ಮೊದಲ ಮಗುವಿನ ಆಗಮನದ ಸಂಭ್ರಮದ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೂವಿನ ಅಲಂಕಾರದ ಮಧ್ಯೆ ಮಗುವಿನ ತೊಟ್ಟಿಲಿನ ಚಿತ್ರ ಬಳಸಿ ಬೇಬಿ ಆನ್ ದಿ ವೇ ಎಂದು ಬರೆದುಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ನಟನಿಗೆ ಶುಭಾಶಯಗಳನ್ನು ಹಾರೈಸುತ್ತಿದ್ದಾರೆ.


ನವದೆಹಲಿ: ಕ್ವೀನ್, ಲಡೋ, ಭೀಡ್, ಸ್ತ್ರೀ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ರಾಜ್ ಕುಮಾರ್ ರಾವ್ (Rajkummar Rao) ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಸಾಕಷ್ಟು ಖ್ಯಾತಿ ಪಡೆ ದಿದ್ದಾರೆ. 2010ರಿಂದ ಸಿನಿಮಾರಂಗಕ್ಕೆ ಕಾಲಿಟ್ಟ ಇವರು ತಮ್ಮ ವಿಶೇಷ ನಟನೆಯಿಂದ ಏಷ್ಯ ಫೆಸಿಫಿಕ್ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಇತರ ಪುರಸ್ಕಾರಗಳನ್ನು ಕೂಡ ಪಡೆದಿದ್ದಾರೆ. ಈ ಮೂಲಕ ನಟ ರಾಜ್ ಕುಮಾರ್ ರಾವ್ ಇಂದಿಗೂ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೆಗಷ್ಟೆ ಇವರು ತಮ್ಮ ಮೊದಲ ಮಗುವಿನ ನಿರೀಕ್ಷೆ ಯಲ್ಲಿ ಇರುವ ಖುಷಿಯ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು ಫ್ಯಾನ್ಸ್ ಶುಭಾಶಯಗಳ ಸುರಿ ಮಳೆ ಗೈದಿದ್ದಾರೆ.
ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಹಾಗೂ ನಟಿ ಪತ್ರಲೇಖ ಅವರು ತಮ್ಮ ಮೊದಲ ಮಗು ವಿನ ಆಗಮನದ ಸಂಭ್ರಮದ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೂವಿನ ಅಲಂಕಾರದ ಮಧ್ಯೆ ಮಗುವಿನ ತೊಟ್ಟಿಲಿನ ಚಿತ್ರ ಬಳಸಿ ಬೇಬಿ ಆನ್ ದಿ ವೇ ಎಂದು ಬರೆದು ಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ನಟನಿಗೆ ಶುಭಾಶಯ ಗಳನ್ನು ಹಾರೈ ಸುತ್ತಿದ್ದಾರೆ.
ಬಾಲಿವುಡ್ ನಟಿ ಪತ್ರಲೇಖ ಮತ್ತು ರಾಜ್ ಕುಮಾರ್ ರಾವ್ ಅವರು ಅನೇಕ ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದರು. ನಟಿ ಪತ್ರಲೇಖ ಅವರು ಜಾಹೀರಾತು ಕ್ಷೇತ್ರದಲ್ಲಿ ಕೂಡ ಹೆಚ್ಚು ಖ್ಯಾತಿ ಪಡೆದಿದ್ದು ಆ ಬಳಿಕ ಸಿಟಿಲೈಟ್ಸ್ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸಿ ಪ್ರಸಿದ್ಧಿ ಪಡೆದಿದ್ದರು. ಬರೋಬ್ಬರಿ 10 ವರ್ಷಕ್ಕೂ ಅಧಿಕ ಕಾಲ ಪ್ರೀತಿಸಿ ಬಳಿಕ 2021ರಲ್ಲಿ ನಿಶ್ಚಿತಾರ್ಥವಾಗಿ ಬಳಿಕ ಅದೇ ವರ್ಷದ ನವೆಂಬರ್ ನಂದು ಆಪ್ತರ ಸಮ್ಮುಖದಲ್ಲಿ ಇಬ್ಬರು ವಿವಾಹವಾದರು.
ಇದನ್ನು ಓದಿ:Ghaati Movie: ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ನಿರಾಸೆ; ʼಘಾಟಿʼ ಚಿತ್ರದ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ
ರಾಜ್ ಕುಮಾರ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಪತ್ನಿ ಬಗ್ಗೆ ಮೆಚ್ಚುಗೆ ಮಾತ ನಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ನಾನು ನಟನಾಗಿ ಬಂದಾಗ ನನಗೆ ಯಾವುದೇ ರೀತಿಯ ಒಂಟಿತನ ಫೀಲ್ ಬಂದಿರಲಿಲ್ಲ..ಅದಕ್ಕೆ ನನ್ನ ಪತ್ನಿಯೇ ಕಾರಣ.. 2010 ರಲ್ಲಿ ನನ್ನ ವೃತ್ತಿ ಜೀವನದ ಆರಂಭ ಆದಾಗಿನಿಂದಲೂ ಪತ್ರಲೇಖಾ ನನ್ನ ಜೊತೆಗೆ ಇದ್ದಾರೆ. ಈಗ 15 ವರ್ಷಗಳು ಕಳೆದಿವೆ. 11 ವರ್ಷಗಳ ಡೇಟಿಂಗ್ ಮತ್ತು 3 ವರ್ಷಗಳ ದಾಂಪತ್ಯ ಜೀವ ನದಲ್ಲಿ ನಾನು ತುಂಬ ಖುಷಿಯಾಗಿದ್ದೇನೆ. ಅವರು ಯಾವಾಗಲೂ ನನ್ನ ಜೊತೆಗಿದ್ದು ಸ್ಫೂರ್ತಿ ತುಂಬಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ನಟಿ ಪತ್ರಲೇಖ ಅವರು ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಇನ್ನು ರಾಜ್ ಕುಮಾರ್ ರಾವ್ ನಟನೆಯ ಮಾಲಿಕ್ ಸಿನಿಮಾ ಇದೇ ಜುಲೈ 11ರಂದು ರಿಲೀಸ್ ಆಗಲಿದ್ದು ಅದರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಪುಲ್ಕಿತ್ ನಿರ್ದೇಶನದ ಈ ಚಿತ್ರ ದಲ್ಲಿ ರಾಜ್ ಕುಮಾರ್ ರಾವ್ ದರೋಡೆಕೋರನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ರಿಲೀಸ್ ಗೂ ಮುನ್ನವೇ ಈ ನಟ ರಾಜ್ ಕುಮಾರ್ ರಾವ್ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ ಎನ್ನಬಹುದು.