ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WCL 2025: ಭಾರತೀಯ ಹೆಲ್ಮೆಟ್ ಧರಿಸಿ ಆಡಲಿದ್ದಾರೆ ಗೇಲ್, ಪೊಲಾರ್ಡ್

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯಿಂದ ಅಧಿಕೃತವಾಗಿ ಗುರುತಿಸಲ್ಪಟ್ಟ WCL 2025, ಯುವರಾಜ್ ಸಿಂಗ್, ಶಾಹಿದ್ ಅಫ್ರಿದಿ ಮತ್ತು ಕ್ರಿಸ್ ಗೇಲ್ ಅವರಂತಹ ತಾರೆಯರನ್ನು ಒಳಗೊಂಡ ವಿಶ್ವದ ಏಕೈಕ ಲೆಜೆಂಡ್ಸ್ T20 ಲೀಗ್ ಆಗಿದೆ.

ಭಾರತೀಯ ಹೆಲ್ಮೆಟ್ ಧರಿಸಿ ಆಡಲಿದ್ದಾರೆ ಗೇಲ್, ಪೊಲಾರ್ಡ್

Profile Abhilash BC Jul 10, 2025 4:29 PM

ನವದೆಹಲಿ: ಮುಂಬರುವ 2025 ರ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2025) ನಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್(West Indies Champions) ಪರ ಆಡುವಾಗ ಕೆರಿಬಿಯನ್ ಕ್ರಿಕೆಟ್ ದಂತಕಥೆಗಳಾದ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಮತ್ತು ಡ್ವೇನ್ ಬ್ರಾವೋ ಅವರು ಭಾರತೀಯ ರೋಲ್ ಬಾಲ್ ಹೆಲ್ಮೆಟ್(Indian helmets) ಧರಿಸಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 18 ರಂದು ಈ ಟೂರ್ನಿ ಆರಂಭವಾಗಲಿದ್ದು, ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌, ನಾರ್ಥ್‌ಹ್ಯಾಮ್ಟನ್‌ನ ಕೌಂಟಿ ಗ್ರೌಂಡ್‌, ಲೀಸೆಸ್ಟರ್‌ನ ಗ್ರೇಸ್‌ ರೋಡ್‌ ಹಾಗೂ ಲೀಡ್ಸ್‌ ಹೆಡಿಂಗ್ಲೆನಲ್ಲಿ ಪಂದ್ಯಗಳು ನಡೆಯಲಿವೆ.

2003 ರಲ್ಲಿ ಪುಣೆಯಲ್ಲಿ ಹುಟ್ಟಿಕೊಂಡ ಸ್ಥಳೀಯ ಭಾರತೀಯ ಕ್ರೀಡೆಯಾದ ರೋಲ್ ಬಾಲ್ ಅನ್ನು ಜಾಗತಿಕ ವೇದಿಕೆಗೆ ತರುವತ್ತ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ. ಸದ್ಯ 60 ಕ್ಕೂ ಹೆಚ್ಚು ದೇಶಗಳಲ್ಲಿ ಆಡಲಾಗುವ ರೋಲ್ ಬಾಲ್ ಬಾಸ್ಕೆಟ್‌ಬಾಲ್, ಹ್ಯಾಂಡ್‌ಬಾಲ್ ಮತ್ತು ಸ್ಕೇಟಿಂಗ್ ಕ್ರೀಡೆಯನ್ನು ಸಂಯೋಜಿಸುತ್ತದೆ. ದುಬೈ ಮೂಲದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಮಾಲೀಕ ಅಜಯ್ ಸೇಥಿ ಈ ಸಹಯೋಗವನ್ನು ಏಕತೆ ಮತ್ತು ಕ್ರೀಡಾ ಮನೋಭಾವದ ಸಂಕೇತ ಎಂದು ಕರೆದಿದಾರೆ. ಐಆರ್‌ಬಿಎಲ್ ಸಂಸ್ಥಾಪಕ ಸಚಿನ್ ಜೋಶಿ ಇದನ್ನು ಭಾರತದ ಶ್ರೀಮಂತ ಕ್ರೀಡಾ ಪರಂಪರೆಯನ್ನು ಆಚರಿಸುವತ್ತ ಒಂದು ಹೆಜ್ಜೆ ಎಂದು ಬಣ್ಣಿಸಿದ್ದಾರೆ.

ಈ ಪಾಲುದಾರಿಕೆಯು ಅಭಿಮಾನಿಗಳ ಭಾಗವಹಿಸುವಿಕೆ, ಸಾಂಸ್ಕೃತಿಕ ವಿನಿಮಯ ಮತ್ತು ತಳಮಟ್ಟದ ಸಕ್ರಿಯಗೊಳಿಸುವಿಕೆಯನ್ನು ಒಳಗೊಂಡಿರುತ್ತದೆ. ಇದು ಭಾರತೀಯ ಮತ್ತು ಕೆರಿಬಿಯನ್ ಕ್ರೀಡಾ ಸಂಸ್ಕೃತಿಗಳನ್ನು ಸಂಪರ್ಕಿಸುವ ಮತ್ತು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ IND vs ENG 3rd Tes: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌; ಭಾರತ ಪರ ಒಂದು ಬದಲಾವಣೆ

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯಿಂದ ಅಧಿಕೃತವಾಗಿ ಗುರುತಿಸಲ್ಪಟ್ಟ WCL 2025, ಯುವರಾಜ್ ಸಿಂಗ್, ಶಾಹಿದ್ ಅಫ್ರಿದಿ ಮತ್ತು ಕ್ರಿಸ್ ಗೇಲ್ ಅವರಂತಹ ತಾರೆಯರನ್ನು ಒಳಗೊಂಡ ವಿಶ್ವದ ಏಕೈಕ ಲೆಜೆಂಡ್ಸ್ T20 ಲೀಗ್ ಆಗಿದೆ. ಜುಲೈ 20 ರಂದು ಭಾರತ ಚಾಂಪಿಯನ್ಸ್‌ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಚಾಂಪಿಯನ್ಸ್‌ ವಿರುದ್ಧ ಸೆಣಸುವ ಮೂಲಕ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.