Disha Patani: ಬಾಲಿವುಡ್ ಬ್ಯೂಟಿ ದಿಶಾ ಪಟಾಣಿ ಬೋಲ್ಡ್ ಅವತಾರ; ಸಖತ್ ಸೆಕ್ಸಿ ಅಂದ್ರು ಫ್ಯಾನ್ಸ್!
ಇತ್ತೀಚೆಗಷ್ಟೇ ಬಿಕಿನಿ ಧರಿಸಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಬಾಲಿವುಡ್ ಬೆಡಗಿ ದಿಶಾ ಪಟಾನಿ (Disha Patani) ಇದೀಗ ಸ್ಕಿನ್ ಫಿಟ್ ಮಾಡರ್ನ್ ಡ್ರೆಸ್ ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿ ದ್ದಾರೆ. ಇವರ ಸೆಕ್ಸಿ ಲುಕ್ ಗೆ ನೆಟ್ಟಿಗರು ಫಿಧಾ ಆಗಿದ್ದು ಈ ಪೋಟೋಗಳು ಸೋಷಿಯಲ್ ಮೀಡಿ ಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ.



ಬಾಲಿವುಡ್ ನಟಿ ದಿಶಾ ಪಟಾನಿ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಫೋಟೋಶೂಟ್ ಮೂಲಕವೇ ಖ್ಯಾತರಾಗಿದ್ದಾರೆ. ಆಗಾಗ, ಇನ್ಸ್ಟಾಗ್ರಾಮ್ನಲ್ಲಿ ವಿವಿಧ ರೀತಿಯ ಫೋಟೋಗಳನ್ನು ಶೇರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚುತ್ತಾರೆ.

ಬಾಲಿವುಡ್ನ ಹಾಟ್ ನಟಿಯರ ಪೈಕಿ ದಿಶಾ ಪಟಾಣಿ ಸಹ ಒಬ್ಬರು. ಇದೀಗ ದಿಶಾ ಪಟಾನಿ ಮತ್ತೊಮ್ಮೆ ತಮ್ಮ ಫ್ಯಾಷನ್ ಸೆನ್ಸ್ನಿಂದ ಮೋಡಿ ಮಾಡಿದ್ದಾರೆ. ಮುಂಬೈನ ಸ್ಟ್ರೀಟ್ ನಲ್ಲಿ ಫೋಟೋಶೂಟ್ ಮಾಡಿಸಿದ ದಿಶಾ ಸ್ಕಿನ್ಫಿಟ್ ಟಾಪ್ ಮತ್ತು ಬ್ಯಾಗಿ ಜೀನ್ಸ್ ಧರಿಸಿ ಸೆಕ್ಸಿ ಲುಕ್ ನೀಡಿದ್ದಾರೆ.

ದಿಶಾ ಪಟಾನಿ ನೆಕ್ಲೈನ್ ಫಿಟ್ಟೆಡ್ ಟಾಪ್ ಮತ್ತು ಅದಕ್ಕೆ ಹೊಂದಿಕೊಳ್ಳುವ ಬ್ಯಾಗಿ ಜೀನ್ಸ್ ಧರಿಸಿ ಸೆಕ್ಸಿ ಪೋಸ್ ನೀಡಿದ್ದಾರೆ. ನ್ಯೂಡ್ ಮೇಕಪ್ ಮತ್ತು ನ್ಯಾಚುರಲ್ ಗ್ಲೋಸಿ ಲಿಪ್ ಅವರ ಲುಕ್ ಗೆ ಮತ್ತಷ್ಟು ಹೊಳಪು ನೀಡಿದೆ.

ಡ್ರೆಸ್ ಮ್ಯಾಚಿಂಗ್ ಶೂ ಹಾಗೂ ಸನ್ಗ್ಲಾಸಸ್ ಅವರ ಲುಕ್ಗೆ ಫಿನಿಷಿಂಗ್ ಟಚ್ ನೀಡಿದವು. ಯಾವುದೇ ಆಭರಣವಿಲ್ಲದೆ ಸರಳತೆಯೊಂದಿಗೆ ತನ್ನ ಫಿಟ್ ಫಿಗರ್ ತೋರ್ಪಡಿಸಿದ್ದಾರೆ.

ದಿಶಾ ಪಟಾನಿಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ. ನೆಟ್ಟಿಗರೊಬ್ಬರು ಈ ಫೋಟೋ ನೋಡಿ 'ಬಾಲಿವುಡ್ ನ ಫ್ಯಾಷನ್ ಐಕಾನ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಸೆಕ್ಸಿ ಗರ್ಲ್' ಎಂಬ ಪ್ರತಿಕ್ರಿಯೆ ನೀಡಿದ್ದಾರೆ.

ದಿಶಾ ಪಟಾನಿ ಮುಂದಿನ ಬಹು ನಿರೀಕ್ಷಿತ ಸಿನಿಮಾ 'ವೆಲ್ಕಮ್ ಟು ದ ಜಂಗಲ್' 2026ರಲ್ಲಿ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಅಕ್ಷಯ ಕುಮಾರ್, ಅರ್ಷದ್ ವಾರ್ಸಿ , ರವೀನಾ ಟಂಡನ್, ಇತ್ಯಾದಿ ಖ್ಯಾತ ನಟ ನಟಿಯರು ನಟಿಸಲಿದ್ದಾರೆ..