Viral Video: ಗತಿಸಿದ ಗಂಡನ ಜೊತೆ ಕೈ ಹಿಡಿದು ಹೆಜ್ಜೆ ಹಾಕಿದ ಅಜ್ಜಿ; ಹೃದಯಸ್ಪರ್ಶಿ ಎಐ ವಿಡಿಯೊ ವೈರಲ್!
ಅಜ್ಜಿಯೊಬ್ಬಳು ತನ್ನ ಗತಿಸಿದ ಪತಿಯೊಂದಿಗೆ ಕೈ ಹಿಡಿದು ನಡೆಯುವ ಎಐ ಆಧರಿತ ವಿಡಿಯೊವನ್ನು ನೋಡಿ ಭಾವುಕಳಾಗಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಅಜ್ಜಿಯ ನಗು ಮತ್ತು ಆಕೆಯ ಸಂತೋಷದ ಕಣ್ಣೀರು ನೆಟ್ಟಿಗರ ಮನಸ್ಸನ್ನು ತಟ್ಟಿದೆ.


ಇಂದಿನ ದಿನಗಳಲ್ಲಿ ಹೆಚ್ಚಿನ ಕೆಲಸಗಳು ಎಐ ಮೂಲಕವೇ ನಡೆಯುತ್ತಿವೆ.ಅದು ಅಲ್ಲದೇ, ಎಐಯಿಂದ ಸತ್ತ ನಮ್ಮವರನ್ನು ಮತ್ತೆ ಫ್ಯಾಮಿಲಿ ಫಂಕ್ಷನ್ ವಿಡಿಯೊಗಳಲ್ಲಿ ಕಾಣುವಂತೆ ಮಾಡಲಾಗುತ್ತಿದೆ. ಅಂದಹಾಗೇ ಇತ್ತೀಚೆಗೆ ಅಜ್ಜಿಯೊಬ್ಬಳು ಗತಿಸಿದ ತನ್ನ ಪತಿಯೊಂದಿಗೆ ಕೈ ಹಿಡಿದು ನಡೆಯುವ ಎಐ ಆಧರಿತ ವಿಡಿಯೊವನ್ನು ನೋಡಿ ಆಶ್ಚರ್ಯಚಕಿತಳಾಗಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Vidoe) ಆಗಿದ್ದು, ಇದನ್ನು ನೋಡಿದ ನೆಟ್ಟಿಗರ ಕಣ್ಣಂಚೂ ಕೂಡ ಒದ್ದೆಯಾಗಿದೆ.
ಈ ಹೃದಯಸ್ಪರ್ಶಿ ವಿಡಿಯೊವನ್ನು ಅಪೂರ್ವ ವಿಜಯ್ ಕುಮಾರ್ ಎಂಬ ನೆಟ್ಟಿಗರು ತಮ್ಮ ಅಜ್ಜಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ. ತೀರಿಹೋದ ತನ್ನ ಪತಿಯ ಕೈ ಹಿಡಿದುಕೊಂಡು ತಾನು ನಡೆಯುವುದನ್ನು ಕಂಡು ಅಜ್ಜಿಯ ಕಣ್ಣಾಲಿಗಳು ತುಂಬಿದೆ. ಈ ಹೃದಯಸ್ಪರ್ಶಿ ಕ್ಷಣವನ್ನು ಅವರು ವಿಡಿಯೊದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಹಲವಾರು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೊವನ್ನು ರಿಶೇರ್ ಮಾಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಈ ಹೃದಯಸ್ಪರ್ಶಿ ವಿಡಿಯೊ ಸುಮಾರು 2 ಮಿಲಿಯನ್ ವ್ಯೂವ್ಸ್ ಗಳಿಸಿದೆ. ಅಜ್ಜಿಯ ನಗು ಮತ್ತು ಆಕೆಯ ಸಂತೋಷದ ಕಣ್ಣೀರು ನೆಟ್ಟಿಗರ ಮನಸ್ಸನ್ನು ಮುಟ್ಟಿದೆ. ಅನೇಕರು ಕಾಮೆಂಟ್ ವಿಭಾಗದಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
"ಒಬ್ಬ ವ್ಯಕ್ತಿ ಸಾಯುತ್ತಾನೆ, ಆದರೆ ಅವನ ನೆನಪುಗಳಲ್ಲ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, " ದೇವರೇ, ದಯವಿಟ್ಟು ಇಷ್ಟೊಂದು ಪರಿಶುದ್ಧವಾದ ಪ್ರೀತಿ ಎಲ್ಲರಿಗೂ ಸಿಗುವಂತಾಗಲಿ" ಎಂದು ಬರೆದಿದ್ದಾರೆ."ಪ್ರೀತಿ ಎಂದಿಗೂ ಮರೆಯಾಗುವುದಿಲ್ಲ. ವ್ಯಕ್ತಿ ಸತ್ತಿರಬಹುದು, ಆದರೆ ಭಾವನೆ ಹಾಗೆಯೇ ಉಳಿದಿದೆ. ಈ ಜಗತ್ತಿನಲ್ಲಿ ಬಾಂಧವ್ಯಕ್ಕಿಂತ ಸುಂದರವಾದದ್ದು ಏನಾದರೂ ಇದೆಯೇ?" ಎಂದು ಒಬ್ಬರು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಗಂಡನನ್ನು ಕೊಂದು ಹೂತು ಹಾಕ್ತೀರಾ....? ಕುಡಿದ ಮತ್ತಿನಲ್ಲಿ ಮಹಿಳೆಯ ರಂಪಾಟ! ವಿಡಿಯೊ ನೋಡಿ
ಮತ್ತೊಂದು ಘಟನೆಯಲ್ಲಿ, ಭವಿಷ್ಯದ ಬಗ್ಗೆ ಚಿತ್ರಿಸುವ ಎಐ ರಚಿತವಾದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಕಳವಳ ಮತ್ತು ಚರ್ಚೆಯನ್ನು ಹುಟ್ಟುಹಾಕಿತು. 2100ನೇ ಇಸವಿಯಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಈ ವಿಡಿಯೊ ಚಿತ್ರಿಸಿದೆ. ಅದರಲ್ಲಿ ಜನರು ಆಹಾರವಿಲ್ಲದೆ ಬಳಲುತ್ತಿರುವುದು, ವಸ್ತು ಸಂಗ್ರಹಾಲಯಗಳಲ್ಲಿ ಮರಗಳನ್ನು ಬೆಳೆಸುವುದು, ಹಣ ನೀಡಿ ಗಾಳಿ ಪಡೆಯುವುದು ಸೇರಿದಂತೆ ಹಲವಾರು ಹೃದಯವಿದ್ರಾವಕ ಸನ್ನಿವೇಶಗಳನ್ನು ಈ ವಿಡಿಯೊದಲ್ಲಿ ಚಿತ್ರಿಸಲಾಗಿತ್ತು.