Prabhas: ನಟ ಪ್ರಭಾಸ್ ಹ್ಯಾಂಡ್ ಸಮ್ ಲುಕ್‌ಗೆ ಫ್ಯಾನ್ಸ್ ಫುಲ್ ಫಿದಾ! ಸಿನಿಮಾ ಸೆಟ್‌ನಿಂದ ಫೋಟೋ ಲೀಕ್
ಸಲಾರ್ ಸಿನಿಮಾ ಸಾಧರಣ ಹಿಟ್ ಕಂಡು ರಾಧೆ ಶ್ಯಾಮ ಸಿನಿಮಾ ಫ್ಲಾಪ್ ಆದರೂ ಪ್ರಭಾಸ್ ಗೆ ಸಿನಿಮಾ ಆಫರ್ ಮಾತ್ರ ಬರುತ್ತಲೇ ಇದೆ. ಇತ್ತೀಚೆಗಷ್ಟೆ ಇವರ ನಟನೆಯ ಕಲ್ಕಿ ಸಿನಿಮಾ ಸೂಪರ್ ಹಿಟ್ಆಗಿದ್ದು ಬಳಿಕ ತೆರೆಕಂಡ ಕಣ್ಣಪ್ಪ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಅವರು ದಿ ರಾಜಾ ಸಾಬ್ ಸಿನಿಮಾದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಚಿತ್ರದ ಶೂಟಿಂಗ್ ಸೆಟ್ ನ ಪ್ರಭಾಸ್ ಅವರ ಫೋಟೋ ಒಂದು ವೈರಲ್ ಆಗಿದೆ.


ನವದೆಹಲಿ: ಮಿರ್ಚಿ, ಬುಜ್ಜಿಗಾಡು, ಪೌರ್ಣಮಿ, ಬಾಹುಬಲಿ, ಕಲ್ಕಿ ಸಿನಿಮಾ ಖ್ಯಾತಿಯ ನಟ ಪ್ರಭಾಸ್ (Prabhas) ಅವರು ಇತ್ತೀಚೆಗೆ ಸಾಲು ಸಾಲು ಸಿನಿಮಾಗಳ ಕೆಲಸ ಕಾರ್ಯದಲ್ಲಿ ಬ್ಯುಸಿ ಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಪಾರ್ಟ್ 1 ಮತ್ತು 2 ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಇವರಿಗೆ ಸಿನಿಮಾ ಆಫರ್ ಬರುವ ಪ್ರಮಾಣ ಕೂಡ ಹೆಚ್ಚಾಗಿದೆ. ಸಲಾರ್ ಸಿನಿಮಾ ಸಾಧರಣ ಹಿಟ್ ಕಂಡು ರಾಧೆ ಶ್ಯಾಮ ಸಿನಿಮಾ ಫ್ಲಾಪ್ ಆದರೂ ಪ್ರಭಾಸ್ ಗೆ ಸಿನಿಮಾ ಆಫರ್ ಮಾತ್ರ ಬರುತ್ತಲೇ ಇದೆ. ಇತ್ತೀಚೆಗಷ್ಟೆ ಇವರ ನಟನೆಯ ಕಲ್ಕಿ ಸಿನಿಮಾ ಸೂಪರ್ ಹಿಟ್ಆಗಿದ್ದು ಬಳಿಕ ತೆರೆಕಂಡ ಕಣ್ಣಪ್ಪ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಅವರು ದಿ ರಾಜಾ ಸಾಬ್ (Raja Saab) ಸಿನಿಮಾದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದು ಚಿತ್ರದ ಶೂಟಿಂಗ್ ಸೆಟ್ ನ ಪ್ರಭಾಸ್ ಅವರ ಫೋಟೋ ಒಂದು ವೈರಲ್ ಆಗಿದೆ.
ಟ್ಯಾಕ್ಸಿವಾಲಾ, ಬೇಬಿ ಸಿನಿಮಾದ ನಿರ್ಮಾಪಕ ಎಸ್‌ಕೆಎನ್ (ಶ್ರೀನಿವಾಸ್ ಕುಮಾರ್ ನಾಯ್ಡು) ಅವರು ಪ್ರಭಾಸ್ ಜೊತೆಗೆ ದಿ ರಾಜಾ ಸಾಬ್ ಸಿನಿಮಾ ಸೆಟ್‌ನಲ್ಲಿ ತೆಗೆದ ಫೋಟೋ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ನನ್ನ ಜೀವನದ ಅತ್ಯಮೂಲ್ಯ ಕ್ಷಣ ವಾಗಿದೆ. ನನ್ನ ಹುಟ್ಟುಹಬ್ಬವನ್ನು ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು ಪ್ರಭಾಸ್ ಗಾರು. ಅಭಿಮಾನಿಗಳು ಸಿದ್ಧರಾಗಿ, ನಿಮ್ಮನ್ನು ರಂಜಿಸಲು ದಿ ರಾಜಸಾಬ್ ರೆಡಿಯಾಗ್ತಿದ್ದಾರೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಕಂಡ ಅಭಿಮಾನಿಗಳು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ದಿ ರಾಜಾ ಸಾಬ್ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಪ್ರೇಕ್ಷಕರಿಗೆ ಕುತೂಹಲ ಮೂಡುವಂತೆ ಮಾಡಿದೆ. ಪ್ರಭಾಸ್ ಅವರ ಇತ್ತೀಚಿನ ಬಹುತೇಕ ಸಿನಿಮಾ ಮಾಸ್ ಲುಕ್ ನದ್ದಾ ಗಿದ್ದು ಅವುಗಳಿಗೆ ಹೋಲಿಸಿದರೆ ದಿ ರಾಜಾ ಸಾಬ್ ಕಥೆ ಭಿನ್ನವಾಗಿದ್ದ ಕಾರಣ ಇದರಲ್ಲಿ ಪ್ರಭಾಸ್ ಕೂಡ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಮಾರುತಿ ನಿರ್ದೇಶನದ ರೊಮ್ಯಾಂಟಿಕ್ ಹಾರರ್ ದಿ ರಾಜಾ ಸಾಬ್ ಚಿತ್ರವು ಇದೇ ವರ್ಷ ಡಿಸೆಂಬರ್ 5ರಂದು ರಿಲೀಸ್ ಆಗಲಿದೆ.
ಇದನ್ನು ಓದಿ:Nidradevi Next Door Movie: ʼನಿದ್ರಾದೇವಿ Next Doorʼ ಚಿತ್ರದ ʼನೀ ನನ್ನʼ ಎಂಬ ರೊಮ್ಯಾಂಟಿಕ್ ಸಾಂಗ್ ಔಟ್
ಈ ಸಿನಿಮಾದ ಬಳಿಕ ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ ಫೌಜಿ ಸಿನಿಮಾದಲ್ಲಿ ಕೂಡ ನಟ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ದೇಶಭಕ್ತಿ ವಿಷಯಗಳ ಸುತ್ತ ಸುತ್ತುವ ಕಥಾ ಹಂದರ ಈ ಸಿನಿಮಾ ದಲ್ಲಿ ಇರಲಿದೆ. ಇದರ ಜೊತೆಗೆ, ನಟ ಪ್ರಭಾಸ್ ನಿರ್ಮಾಪಕ ಸಂದೀಪ್ ರೆಡ್ಡಿ ವಂಗಾ ಅವರ ಮುಂಬ ರುವ ಚಿತ್ರ ಸ್ಪಿರಿಟ್ ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ. ಸ್ಪಿರಿಟ್ ಸಿನಿಮಾದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ.
ಸ್ಪಿರಿಟ್ ಸಿನಿಮಾ ಜಾಗತಿಕ ಮಟ್ಟದಲ್ಲಿ ತೆರೆ ಕಾಣುವ ಸಾಧ್ಯತೆ ಇದ್ದು ಈ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ವಿಭಿನ್ನವಾದ ಪಾತ್ರ ಇರಲಿದೆಯಂತೆ. ಪ್ರಭಾಸ್ ಇತರ ಸಿನೆಮಾ ಬಹುತೇಕ ಪೂರ್ಣವಾದ ಬಳಿಕ ಅವರ ಸ್ಪಿರಿಟ್ ಸಿನಿಮಾ ಚಿತ್ರೀಕರಣ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಆರಂಭ ಆಗಲಿದೆ ಎಂದು ಚಿತ್ರತಂಡ ಇತ್ತೀಚೆಗೆ ತಿಳಿಸಿದೆ.