ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಪಾಕ್‌ ತಂಡದಲ್ಲಿ ಒಂದು ಬದಲಾವಣೆ ನಿಶ್ಚಿತ; ಭಾರತ ಆಡುವ ಬಳಗ ಹೇಗಿರಬಹುದು?

ಪಾಕ್‌ ತಂಡದಲ್ಲಿ ಒಂದು ಬದಲಾವಣೆ ನಿಶ್ಚಿತ. ಎಡಗೈ ಬ್ಯಾಟರ್‌ ಫಖರ್‌ ಜಮಾನ್‌ ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಬದಲಿ ಆಟಗಾರನ ಅಗತ್ಯವಿದೆ. ಈ ಸ್ಥಾನವನ್ನು ಇಮಾಮ್‌ ಉಲ್‌ ಹಕ್‌ ಅಥವಾ ಉಸ್ಮಾನ್‌ ಖಾನ್‌ ಕಣಕ್ಕಿಳಿಯಬಹುದು.

IND vs PAK: ಪಾಕ್‌ ಎದುರು ಭಾರತ ಆಡುವ ಬಳಗ ಹೇಗಿರಬಹುದು?

Profile Abhilash BC Feb 23, 2025 11:20 AM

ದುಬೈ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ(ICC Champions Trophy) ಏಕದಿನ ಟೂರ್ನಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ(IND vs PAK) ತಂಡಗಳು ಕಾದಾಟ ನಡೆಸಲು ಸಜ್ಜಾಗಿದೆ. ಇತ್ತಂಡಗಳ ಈ ಪಂದ್ಯ ಇಂದು(ಭಾನುವಾರ) ಮಧ್ಯಾಹ್ನ 2.30 ಕ್ಕೆ ಆರಂಭವಾಗಲಿದೆ. ಪಾಕಿಸ್ತಾನ ಸೋತರೆ ಸೆಮಿ ರೇಸ್‌ನಿಂದ ಹೊರಬೀಳಲಿದೆ. ಭಾರತ ಗೆದ್ದರೆ ಸೆಮಿಫೈನಲ್‌ ಪ್ರವೇಶ ಬಹುತೇಕ ಖಚಿತವಾಗಲಿದೆ. ಹೀಗಾಗಿ ಉಭಯ ತಂಡಗಳ ಈ ಸೆಣಸಾಟ ಕ್ರಿಕೆಟ್‌ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿದೆ. ಈ ಪಂದ್ಯದ ಸಂಭಾವ್ಯ ತಂಡ ಹೇಗಿರಬಹುದೆಂಬ ಮಾಹಿತಿ ಇಲ್ಲಿದೆ.

ಭಾರತ ಈ ಪಂದ್ಯಕ್ಕೆ ಆಡುವ ಬಳಗದಲ್ಲಿ ಬದಲಾವಣೆ ಮಾಡುವುದು ಅನುಮಾನ. ಬಾಂಗ್ಲಾ ವಿರುದ್ಧದ ಗೆಲುವಿನ ಕಾಂಬಿನೇಷನ್‌ ತಂಡವನ್ನೇ ಆಡಿಸಬಹುದು. ಜತೆಗೆ ತಂಡದ ಸಂಯೋಜನೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಕೊಹ್ಲಿ ಅಭ್ಯಾಸದ ವೇಳೆ ಮೊಣಕಾಲಿಗೆ ಪೆಟ್ಟುಮಾಡಿಕೊಂಡರೂ ಅವರ ಗಾಯ ಗಂಭೀರ ಸ್ವರೂಪದಿಂದ ಕೂಡಿಲ್ಲ ಎನ್ನಲಾಗಿದೆ. ಒಂದೊಮ್ಮೆ ಅವರು ಪಂದ್ಯದಿಂದ ಹೊರಗುಳಿದರೆ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡುವುದು ಸವಾಲೆನಿಸಲಿದೆ. ಏಕೆಂದರೆ ರಿಷಭ್‌ ಪಂತ್‌ ಕೂಡ ವೈರಲ್‌ ಜ್ವರದಿಂದ ಬಳಲುತ್ತಿದ್ದು ಶನಿವಾರ ಅಭ್ಯಾಸ ಕೂಡ ನಡೆಸಿಲ್ಲ.

ಇದನ್ನೂ ಓದಿ IND vs PAK: ಇಂದು ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ: ದೇಶಾದ್ಯಂತ ವಿಶೇಷ ಪೂಜೆ

ಪಾಕ್‌ ತಂಡದಲ್ಲಿ ಒಂದು ಬದಲಾವಣೆ ನಿಶ್ಚಿತ. ಎಡಗೈ ಬ್ಯಾಟರ್‌ ಫಖರ್‌ ಜಮಾನ್‌ ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಬದಲಿ ಆಟಗಾರನ ಅಗತ್ಯವಿದೆ. ಈ ಸ್ಥಾನವನ್ನು ಇಮಾಮ್‌ ಉಲ್‌ ಹಕ್‌ ಅಥವಾ ಉಸ್ಮಾನ್‌ ಖಾನ್‌ ಕಣಕ್ಕಿಳಿಯಬಹುದು.

ಹವಾಮಾನ ವರದಿ ಪ್ರಕಾರ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಮಧ್ಯಾಹ್ನ ಸುಡು ಬಿಸಲು ಇದ್ದರೂ, ರಾತ್ರಿ ಮಂಜಿನ ಕಾಟ ಇರಲಿದೆ ಎಂದು ತಿಳಿಸಿದೆ. ಇದು ಬೌಲರ್‌ಗಳಿಗೆ ಸವಾಲಿನಿಂದ ಕೂಡಿರಲಿದೆ.

ಸಂಭಾವ್ಯ ತಂಡ

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್(ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ,ಕುಲ್‌ದೀಪ್‌ ಯಾದವ್‌.

ಪಾಕಿಸ್ತಾನ: ಬಾಬರ್ ಅಜಂ, ಇಮಾಮ್-ಉಲ್-ಹಕ್/,ಉಸ್ಮಾನ್‌ ಖಾನ್‌, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿ.ಕೀ), ಸಲ್ಮಾನ್ ಅಘಾ, ತಯ್ಯಬ್ ತಾಹಿರ್, ಖುಷ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.