ಪ್ರೇಮಲೋಕದ ಹಾಡು ಹಾಡಿ ಕನ್ನಡಿಗರ ಮನಗೆದ್ದ ಆರ್‌ಸಿಬಿ ಆಟಗಾರ್ತಿ
ಸದ್ಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 4 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ನಾಳೆ(ಸೋಮವಾರ) ನಡೆಯುವ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆಡಲಿದೆ. ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.


ಬೆಂಗಳೂರು: ಆರ್‌ಸಿಬಿ ಮಹಿಳಾ(RCB WPL) ತಂಡದ ಪ್ರಮುಖ ಮ್ಯಾಚ್ ವಿನ್ನಿಂಗ್ ಆಟಗಾರ್ತಿ ಎಲ್ಲಿಸ್ ಪೆರ್ರಿ(Ellyse Perry) ಅವರು ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಆಟದ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಅವರು ಇದೀಗ ಕನ್ನಡದಲ್ಲೇ ಹಾಡೊಂದನ್ನು ಹಾಡುವ ಮೂಲಕ ಮನಗೆದ್ದಿದ್ದಾರೆ. ಮಿಸ್ಟರ್ ನ್ಯಾಗ್ಸ್ ನಡೆಸಿಕೊಡುವ ಆರ್‌ಸಿಬಿ ಇನ್‌ಸೈಡರ್ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪ್ರೇಮಲೋಕ ಸಿನಿಮಾದ 'ಕನ್ನಡ ಬರೋದಿಲ್ವ, ಕಣ್ಣೆರಡು ಕಾಣಲ್ವ' ಎಂಬ ಹಾಡನ್ನು ಬಹಳ ಅಚ್ಚುಕಟ್ಟಾಗಿ ಹಾಡಿದರು. ಈ ವಿಡಿಯೊವನ್ನು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ಆಸ್ಟ್ರೇಲಿಯಾದ ಆಟಗಾರ್ತಿಯಾಗಿರುವ ಎಲ್ಲಿಸ್ ಪೆರ್ರಿ ಕನ್ನಡ ಬರೋದಿಲ್ವಾ, ಕನ್ನೆರೆಡು ಕಣ್ಣಲ್ವಾ? ಕನ್ನಡಕದೊಳಗಿಂದ ಕಾಣುತ್ತಿದೆ ಈ ಅಂದ ! ಹೌದೆನೋ ಮನ್ಮಥ, ಬಾಯಿಮುಚ್ಕೊಂಡ್ ಹೋಗತ್ತಾ...ಎಂದು ಹಾಡುವ ಮೂಲಕ ಪೆರ್ರಿ ಕನ್ನಡಿಗರ ದಿಲ್ ಕದ್ದಿದ್ದಾರೆ.
𝗪𝗵𝗲𝗻 𝗠𝗿. 𝗡𝗮𝗴𝘀 𝗺𝗲𝘁 𝘁𝗵𝗲 𝗚𝗢𝗔𝗧 🐐
— Royal Challengers Bengaluru (@RCBTweets) February 20, 2025
Start your day watching this Ellyse Perry special on @bigbasket_com presents RCB Insider.
PS: Pez makes her singing debut. 😉#PlayBold #ನಮ್ಮRCB #SheIsBold #WPL2025 pic.twitter.com/NeN27XK4Ri
ಸದ್ಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 4 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ನಾಳೆ(ಸೋಮವಾರ) ನಡೆಯುವ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆಡಲಿದೆ. ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಶನಿವಾರ ನಡೆದಿದ್ದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಡೆಲ್ಲಿ ವಿರುದ್ಧ 33 ರನ್ ಗೆಲುವು ಸಾಧಿಸಿ ಹಾಲಿ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಮೊದಲು ಬ್ಯಾಟಿಂಗ್ ನಡೆಸಿದ ಯುಪಿ ತಂಡ ಚಿನೆಲ್ಲೆ ಹೆನ್ರಿ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 9 ವಿಕೆಟ್‌ಗೆ 177 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ 144 ರನ್‌ಗೆ ಸರ್ಪಪತನ ಕಂಡಿತು.