ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

IND vs PAK: ಇಂದು ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ: ದೇಶಾದ್ಯಂತ ವಿಶೇಷ ಪೂಜೆ

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಪಿಚ್‌ ಸ್ಮರ್ಧಾತ್ಮಕವಾಗಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಈಗಾಗಲೇ ಸಾಬೀತಾಗಿದೆ. ಭಾರತ ಮತ್ತು ಬಾಂಗ್ಲಾ ನಡುವಣ ಪಂದ್ಯದಲ್ಲಿ ಸ್ಪಿನ್ನರ್‌ಗಳೇ ಹೆಚ್ಚಿನ ವಿಕೆಟ್‌ ಉರುಳಿಸಿದ್ದರು., ಆದ್ಯಾಗೂ ವೇಗಿಗಳಿಗೂ ನೆರವು ನೀಡಲಿದೆ.

ಇಂಡೋ-ಪಾಕ್‌ ಪಂದ್ಯಕ್ಕೆ ಕ್ಷಣಗಣನೆ; ದೇಶಾದ್ಯಂತ ವಿಶೇಷ ಪೂಜೆ

Profile Abhilash BC Feb 23, 2025 10:03 AM

ನವದೆಹಲಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ರೋಚಕ ಹಣಾಹಣಿ ಭಾನುವಾರ ನಡೆಯುತ್ತಿದ್ದು ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ತಟಸ್ಥ ತಾಣವಾದ ದುಬಾೖಯಲ್ಲಿ ಹಣಾಹಣಿ ನಡೆಯಲಿದ್ದು ಭಾರತದೆಲ್ಲೆಡೆ ಕ್ರೀಡಾಭಿಮಾನಿಗಳಿಂದ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ. ಕ್ರೀಡಾಭಿಮಾನಿಗಳು ಭಾನುವಾರ ಬೆಳ್ಳಂಬೆಳಗ್ಗೆ ದೇವಾಲಯಗಳಿಗೆ ತೆರಳಿ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಬೇಕು ಎಂದು ಸಂಕಲ್ಪಿಸಿ ಪೂಜೆಗಳನ್ನು ಸಲ್ಲಿಸಿದ್ದಾರೆ.

ಕೆಲವೆಡೆ ಹೋಮ ಹವನಗಳನ್ನು ನಡೆಸಲಾಗುತ್ತಿದೆ. ಅದರಲ್ಲೂ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ವಿಶೇಷ ಪ್ರಾರ್ಥನೆ ಮತ್ತು ವಾರಣಾಸಿಯಲ್ಲಿ ಗಂಗಾ ಆರತಿ ಬೆಳಗಲಾಯಿತು.



ಪಾಕಿಸ್ತಾನ ಕಳೆದ ಬಾರಿಯ ಟೂರ್ನಿಯಲ್ಲಿ ಭಾರತವನ್ನೇ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಇದೀಗ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶವೊಂದು ರೋಹಿತ್‌ ಪಡೆಗೆ ಒದಗಿ ಬಂದಿದೆ. ಯಾವ ಕಾರಣಕ್ಕೂ ಇದನ್ನು ಕಳೆದುಕೊಳ್ಳಬಾರದು. ಇನ್ನೊಂದೆಡೆ ಮೊದಲ ಪಂದ್ಯ ಸೋತಿರುವ ಪಾಕ್‌ ಪಾಳೆಯದಲ್ಲೀಗ ಎಲ್ಲಿಲ್ಲದ ಒತ್ತಡ ಸೃಷ್ಟಿಯಾಗಿದೆ. ಮತ್ತೆ ಸೋತರೆ ಅದು ಕೂಟದಿಂದಲೇ ಹೊರಬೀಳುವ ಅಪಾಯಕ್ಕೆ ಸಿಲುಕಿದೆ.

ದುಬೈನಲ್ಲಿ ಪಾಕಿಗಳನ್ನು ಅಷ್ಟು ಹಗುರವಾಗಿ ಕಾಣುವಂತಿಲ್ಲ. ದುಬೈ ಅಂಗಳ ಪಾಕ್‌ ಆಟಗಾರರಿಗೆ 2ನೇ ತವರು ಇದ್ದಂತೆ. ಇದಕ್ಕೆ ಉತ್ತಮ ನಿದರ್ಶನ 2021 ಟಿ20 ವಿಶ್ವಕಪ್‌ ಟೂರ್ನಿ. ಲೀಗ್‌ ಹಂತದ ಪಂದ್ಯದಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಮಗುಚಿ ಹಾಕಿತ್ತು. ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ಪಾಕ್‌ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿಲ್ಲ. 5 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಮಾತ್ರ ಗೆದ್ದಿದೆ. ಮೂರಲ್ಲಿ ಸೋಲು ಕಂಡಿದೆ. ಹೀಗಾಗಿ ಭಾರತ ಈ ಬಾರಿ ಎಚ್ಚರಿಕೆಯಿಂದ ಆಡಬೇಕು.

ಇದನ್ನೂ ಓದಿ IND vs PAK: ಪಾಕಿಸ್ತಾನ ವಿರುದ್ಧ ಭಾರತ ತಂಡ ಸೋಲಬೇಕೆಂದ ಅತುಲ್‌ ವಾಸನ್‌!

ಚಾಂಪಿಯನ್ಸ್​ ಟ್ರೋಫಿಯಲ್ಲಿ ಇತಿಹಾಸದಲ್ಲಿ ಭಾರತ ಮತ್ತು ಪಾಕ್(IND vs PAK)​ 5 ಪಂದ್ಯಗಳಲ್ಲಿ ಆಡಿದ್ದು, 3ರಲ್ಲಿ ಪಾಕಿಸ್ತಾನ ಗೆದ್ದರೆ, ಭಾರತ 2 ಪಂದ್ಯ ಮಾತ್ರ ಜಯಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2017ರ ಫೈನಲ್​ನಲ್ಲಿ ಎದುರಾಗಿತ್ತು. ಅಂದಿನ ಫೈನಲ್‌ ಬಳಿಕ ಉಭಯ ತಂಡಗಳೂ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ.