ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಆಸೀಸ್‌-ಇಂಗ್ಲೆಂಡ್‌ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಪ್ರಸಾರ; ಐಸಿಸಿಗೆ ಸ್ಪಷ್ಟನೆ ಕೇಳಿದ ಪಿಸಿಬಿ

ICC Champions Trophy: ಆಸೀಸ್‌ ಮತ್ತು ಇಂಗ್ಲೆಂಡ್‌ ಆಟಗಾರರು ಟಾಸ್‌ ಬಳಿಕ ತಮ್ಮ ರಾಷ್ಟ್ರಗೀತೆಗಾಗಿ ಸಾಲುಗಟ್ಟಿ ನಿಂತಿದ್ದರು. ಇಂಗ್ಲೆಂಡ್‌ ಆಟಗಾರರು ತಮ್ಮ ರಾಷ್ಟ್ರಗೀತೆ ಪ್ರಸಾರಕ್ಕೆ ಕಾಯುತ್ತಿದ್ದ ವೇಳೆ ದಿಢೀರ್‌ ಆಗಿ ಒಂದು ಸೆಕೆಂಡ್‌ ಭಾರತದ ರಾಷ್ಟ್ರಗೀತೆ ಪ್ರಸಾರವಾಯಿತು. ಈ ವೇಳೆ ಇಂಗ್ಲೆಂಡ್‌ ಆಟಗಾರರು ಮಾತ್ರವಲ್ಲದೆ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಕೂಡ ಒಂದು ಕ್ಷಣ ಆಶ್ಚರ್ಯಚಕಿತರಾದರು. ಘಟನೆಯ ಬಳಿಕ ಪಾಕ್‌ ಕ್ರಿಕೆಟ್‌ ಮಂಡಳಿ ಐಸಿಸಿಗೆ ವಿವರಣೆ ನೀಡುವಂತೆ ಪತ್ರ ಬರೆದಿದೆ ಎನ್ನಲಾಗಿದೆ.

ಆಸೀಸ್‌-ಇಂಗ್ಲೆಂಡ್‌ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಪ್ರಸಾರ

Profile Abhilash BC Feb 23, 2025 3:26 PM

ಕರಾಚಿ: ಶನಿವಾರ ನಡೆದಿದ್ದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್‌ ಟ್ರೋಫಿಯ ಪಂದ್ಯದ ವೇಳೆ ಎಡವಟ್ಟೊಂದು ಸಂಭವಿಸಿದೆ. ಇಂಗ್ಲೆಂಡ್‌ ರಾಷ್ಟ್ರಗೀತೆ ಬದಲು ಭಾರತದ ರಾಷ್ಟ್ರಗೀತೆ ಪ್ರಸಾರ ಮಾಡಿರುವುದು ನಗೆಪಾಟಿಲಿಗೆ ಈಡಾಗಿದೆ. ಈ ಬಗ್ಗೆ ಪಿಸಿಬಿ ಐಸಿಸಿ ವಿರುದ್ಧ ಆಪ್ರೋಶ ಹೊರಹಾಕಿದೆ. ಆಸೀಸ್‌ ಮತ್ತು ಇಂಗ್ಲೆಂಡ್‌ ಆಟಗಾರರು ಟಾಸ್‌ ಬಳಿಕ ತಮ್ಮ ರಾಷ್ಟ್ರಗೀತೆಗಾಗಿ ಸಾಲುಗಟ್ಟಿ ನಿಂತಿದ್ದರು. ಇಂಗ್ಲೆಂಡ್‌ ಆಟಗಾರರು ತಮ್ಮ ರಾಷ್ಟ್ರಗೀತೆ ಪ್ರಸಾರಕ್ಕೆ ಕಾಯುತ್ತಿದ್ದ ವೇಳೆ ದಿಢೀರ್‌ ಆಗಿ ಒಂದು ಸೆಕೆಂಡ್‌ ಭಾರತದ ರಾಷ್ಟ್ರಗೀತೆ ಪ್ರಸಾರವಾಯಿತು. ಈ ವೇಳೆ ಇಂಗ್ಲೆಂಡ್‌ ಆಟಗಾರರು ಮಾತ್ರವಲ್ಲದೆ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಕೂಡ ಒಂದು ಕ್ಷಣ ಆಶ್ಚರ್ಯಚಕಿತರಾದರು. ಘಟನೆಯ ಬಳಿಕ ಪಾಕ್‌ ಕ್ರಿಕೆಟ್‌ ಮಂಡಳಿ ಐಸಿಸಿಗೆ ವಿವರಣೆ ನೀಡುವಂತೆ ಪತ್ರ ಬರೆದಿದೆ ಎನ್ನಲಾಗಿದೆ.

'ಯಾವುದೇ ಐಸಿಸಿ ಟೂರ್ನಿಯಲ್ಲಿಯೂ ಆಯಾ ದೇಶದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದು ಐಸಿಸಿಯ ಅಧಿಕಾರಿಗಳು, ಹೀಗಾಗಿ ಈ ತಪ್ಪಿಗೆ ಅವರೇ ಜವಾಬ್ದಾರರಾಗಿರುವುದರಿಂದ ಐಸಿಸಿ ಕೆಲವು ವಿವರಣೆಯನ್ನು ನೀಡುವ ಅಗತ್ಯವಿದೆ ಎಂದು ಪಿಸಿಬಿ ಮನವಿ ಮಾಡಿದೆ.



'ಭಾರತವು ಪಾಕಿಸ್ತಾನದಲ್ಲಿ ಆಡುತ್ತಿಲ್ಲವಾದ್ದರಿಂದ, ಪ್ಲೇಪಟ್ಟಿಯಿಂದ ತಪ್ಪಾಗಿ ಅವರ ಗೀತೆಯನ್ನು ಹೇಗೆ ನುಡಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ' ಎಂದು ಐಸಿಸಿ ಮೂಲಗಳು ತಿಳಿಸಿವೆ.

ಲೋಗೋ ವಿಚಾರವಾಗಿ ಪಾಕ್‌ ಕ್ರಿಕೆಟ್‌ ಮಂಡಳಿ ಕ್ಯಾತೆ ತೆಗೆದಿದೆ. ಭಾರತ-ಬಾಂಗ್ಲಾದೇಶ ನಡುವಣ ಪಂದ್ಯದ ನೇರ ಪ್ರಸಾರದ ಸಮಯದಲ್ಲಿ ಪಾಕಿಸ್ತಾನದ ಹೆಸರನ್ನು ಟೂರ್ನಮೆಂಟ್ ಲೋಗೋದಿಂದ ತೆಗೆದು ಹಾಕಲಾಗಿದೆ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ದೂರು ನೀಡಿದೆ.

ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಕಾರಣ ಟಿವಿ ಲೋಗೋದಲ್ಲಿ ಪಾಕಿಸ್ತಾನದ ಹೆಸರು ಕಾಣಬೇಕು. ಆದರೆ ಭಾರತ ಮತ್ತು ಬಾಂಗ್ಲಾ ನಡುವಣ ಪಂದ್ಯದ ವೇಳೆ ಪಾಕ್‌ ಹೆಸರು ಕಾಣಿಸಿಲ್ಲ. ಇದು ಬಿಸಿಸಿಐ ಬೇಕಂತಲೇ ಮಾಡಿದ್ದು ಎಂದು ಪಾಕ್‌ ಐಸಿಸಿಗೆ ದೂರು ನೀಡಿದೆ. ಜತೆಗೆ ಐಸಿಸಿಯ ಮಲತಾಯಿ ಧೋರಣೆ ಸರಿಯಲ್ಲ ಎಂದು ಹೇಳಿದೆ.

ಪಿಸಿಬಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಇದೊಂದು ತಾಂತ್ರಿಕ ದೋಷ. ಗ್ರಾಫಿಕ್ಸ್ ಸಂಬಂಧಿತ ತಾಂತ್ರಿಕ ಸಮಸ್ಯೆಯಿಂದಾಗಿ ಈ ಲೋಪ ಉಂಟಾಗಿದ್ದು, ಇದು ಮುಂದಿನ ಪಂದ್ಯ ವೇಳೆಗೆ ಸರಿಪಡಿಸಲಾಗುವುದು. ಪಂದ್ಯದ ಸಮಯದಲ್ಲಿ ಲೋಗೋವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ ಎಂದು ಐಸಿಸಿ ವಕ್ತಾರರು ತಿಳಿಸಿದ್ದಾರೆ. ಆದರೆ ಭಾರತ ವಿರುದ್ಧದ ಪಂದ್ಯದ ವೇಳೆಗೆ ಮಾತ್ರ ಏಕೆ ಈ ಸಮಸ್ಯೆ ಕಂಡು ಬರುತ್ತದೆ ಎಂದು ಪಿಸಿಬಿ, ಐಸಿಸಿಗೆ ಮರು ಪ್ರಶ್ನೆ ಮಾಡಿದೆ.