ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral Video: ತ್ರಿವೇಣಿ ಸಂಗಮದಲ್ಲಿ ಮಹಿಳೆಯ ಕೈಯಿಂದ ತೆಂಗಿನಕಾಯಿ ಕಸಿದುಕೊಂಡ ಮಕ್ಕಳು; ಇದೆಂಥಾ ಸ್ಥಿತಿ ಬಂತು ನೋಡಿ!

ಮಹಿಳೆಯೊಬ್ಬಳು ತನ್ನ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ಕೋರಿ ಸಂಗಮಕ್ಕೆ ತೆಂಗಿನಕಾಯಿ, ಚುನ್ರಿ ಮತ್ತು ಇತರ ಧಾರ್ಮಿಕ ವಸ್ತುಗಳನ್ನು ತ್ರಿವೇಣಿ ಸಂಗಮಕ್ಕೆ ಅರ್ಪಿಸಿದ್ದಾಳೆ. ಆದರೆ, ಅವಳು ಅವುಗಳನ್ನು ನೀರಿನಲ್ಲಿ ಬಿಡುವ ಮೊದಲೇ ಅಲ್ಲಿದ್ದ ಮಕ್ಕಳ ಗುಂಪು ಅವಳ ಕೈಗಳಿಂದ ವಸ್ತುಗಳನ್ನು ಕಸಿದುಕೊಂಡ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕುಂಭಮೇಳದಲ್ಲಿ ಮಹಿಳೆಯ ಕೈಯಿಂದ ತೆಂಗಿನಕಾಯಿ ಎಗರಿಸಿದ ಮಕ್ಕಳು!

Profile pavithra Feb 22, 2025 4:48 PM

ಲಖನೌ: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯಲಿರುವ ಮಹಾ ಕುಂಭಮೇಳ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ದೇಶ ಮತ್ತು ವಿದೇಶದ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಹಿಂದೂಗಳ ನಂಬಿಕೆ ಪ್ರಕಾರ, ಕೆಲವರು ಪ್ರಾಯಶ್ಚಿತ್ತದ ವಿಧಾನವಾಗಿ ಸಂಗಮದಲ್ಲಿ ಮುಳುಗುತ್ತಾರೆ, ಇತರರು ಪವಿತ್ರ ನದಿಗೆ ಕೆಲವು ವಸ್ತುಗಳನ್ನು ಅರ್ಪಿಸುತ್ತಾರೆ. ಇತ್ತೀಚೆಗೆ ಇಂತಹ ವಸ್ತುಗಳನ್ನು ನೀರಿಗೆ ಬಿಡುವ ಮುನ್ನ ಮಕ್ಕಳು ಕಸಿದುಕೊಂಡ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಭಕ್ತರು ತೆಂಗಿನಕಾಯಿಗಳು, ಹೂವುಗಳು, ಧೂಪದ್ರವ್ಯದ ಕಡ್ಡಿಗಳು ಮತ್ತು ಇತರ ವಸ್ತುಗಳನ್ನು ಸಂಗಮದಲ್ಲಿ ತೇಲಿ ಬಿಡುವ ಮೂಲಕ ತಮ್ಮ ಪಾಪಗಳಿಗೆ ಕ್ಷಮೆಯನ್ನು ಕೋರುತ್ತಾರೆ. ಆದರೆ ಭಕ್ತರು ಹೀಗೆ ತೇಲಿಬಿಟ್ಟ ವಸ್ತುಗಳನ್ನು ಅಲ್ಲಿದ್ದ ಮಕ್ಕಳು ತಾ ಮುಂದು, ನಾ ಮುಂದು ಎನ್ನುವ ಹಾಗೇ ದೋಚುವ ವಿಡಿಯೊವೊಂದು ವೈರಲ್‌ ಆಗಿದೆ.

ಕೆಲವು ಅಂಗಡಿಯವರು ಭಕ್ತರು ಮಹಾ ಕುಂಭ ಮೇಳದಲ್ಲಿ ನದಿಗೆ ಎಸೆಯಲಾದ ಕಾಣಿಕೆಗಳನ್ನು, ವಸ್ತುಗಳನ್ನು ಸಂಗ್ರಹಿಸಿ ಅದನ್ನು ಮರುಮಾರಾಟ ಮಾಡಿ ಲಾಭ ಪಡೆಯುತ್ತಾರಂತೆ. ಅಂಗಡಿಯವರು ಹೆಚ್ಚಾಗಿ ಈ ವಸ್ತುಗಳನ್ನು ಸಂಗ್ರಹಿಸಲು ಮಕ್ಕಳು ಮತ್ತು ಮಹಿಳೆಯರನ್ನು ನೇಮಿಸಿಕೊಳ್ಳುತ್ತಾರಂತೆ. ಆರಂಭದಲ್ಲಿ, ಭಕ್ತರು ಅವುಗಳನ್ನು ನದಿಗೆ ಬಿಟ್ಟ ನಂತರ ಈ ವಸ್ತುಗಳನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ ಮಹಾಕುಂಭ ಮೇಳವು ಕೊನೆಗೊಳ್ಳುತ್ತಿರುವುದರಿಂದ ಈ ವಸ್ತುಗಳನ್ನು ಈಗ ನೇರವಾಗಿ ಜನರ ಕೈಯಿಂದ ಕಸಿದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಅಂತಹ ಒಂದು ಘಟನೆಯಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬಳು ತನ್ನ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ಕೋರಿ ಸಂಗಮಕ್ಕೆ ತೆಂಗಿನಕಾಯಿ, ಚುನ್ರಿ ಮತ್ತು ಇತರ ಧಾರ್ಮಿಕ ವಸ್ತುಗಳನ್ನು ಅರ್ಪಿಸಿದ್ದಾಳೆ. ಆದರೆ, ಅವಳು ಅವುಗಳನ್ನು ನೀರಿನಲ್ಲಿ ಇಡುತ್ತಿದ್ದಂತೆ, ಅವಳ ಸುತ್ತಲಿನ ಮಕ್ಕಳ ಗುಂಪು ಅವಳ ಕೈಗಳಿಂದ ವಸ್ತುಗಳನ್ನು ಕಸಿದುಕೊಂಡಿದೆಯಂತೆ. ಇದನ್ನು ನೋಡಿ ಮಹಿಳೆ ಶಾಕ್‌ ಆಗಿದ್ದಾಳಂತೆ.

ಈ ಸುದ್ದಿಯನ್ನೂ ಓದಿ:Maha Kumbh 2025: ಕುಂಭಮೇಳದಲ್ಲಿ ಪವಿತ್ರಸ್ನಾನಗೈದ ಮಹಿಳೆಯರ ಫೋಟೊ, ವಿಡಿಯೊಗಳನ್ನು ಮಾರಾಟಕ್ಕಿಟ್ಟ ದುಷ್ಕರ್ಮಿಗಳು

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh 2025) ವಿಶ್ವದ ಅತಿ ದೊಡ್ಡ ಧಾರ್ಮಿಕ ಯಾತ್ರೆ. ಲಕ್ಷಾಂತರ ಜನರು ಈಗಾಗಲೇ ಪವಿತ್ರ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನ ಜನರು ತ್ರಿವೇಣಿ ಸ್ನಾನ ಮಾಡಿದ್ದಾರೆ. ಆದರೆ ಇದೀಗ ಈ ಹಿಂದೂಗಳ ಈ ಪವಿತ್ರ ಧಾರ್ಮಿಕ ಆಚರಣೆಗೆ ಧಕ್ಕೆ ತರುವಂತಹ ಕೆಲಸವೊಂದನ್ನು ಕಿಡಿಗೇಡಿಗಳು ಮಾಡಿದ್ದು, ಕುಂಭಮೇಳದಲ್ಲಿ ಪವಿತ್ರ ಸ್ನಾನಗೈದ ಮಹಿಳೆಯರ ಸ್ನಾನದ ವಿಡಿಯೋಗಳನ್ನು ಮಾರಾಟಕ್ಕಿಟ್ಟಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಮಹಿಳಾ ಭಕ್ತರ ಫೋಟೊಗಳು ಹಾಗೂ ಆಕ್ಷೇಪಾರ್ಹ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಮಾರಾಟ ಮಾಡುತ್ತಿದ್ದ ಆರೋಪವೂ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದು, ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುವುದನ್ನು ಅಕ್ರಮವಾಗಿ ವಿಡಿಯೊ ರೆಕಾರ್ಡ್ ಮಾಡಿ ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದ ಕೂಡಲೇ ಎಚ್ಚೆತ್ತ ಪೊಲೀಸರು ಈ ದುಷ್ಕೃತ್ಯವೆಸಗಿದ ಪಾಪಿಗಳ ಎಡೆಮುಡಿ ಕಟ್ಟಿದ್ದಾರೆ.