ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Donald Trump: ಮಸ್ಕ್‌ ಮಗ ಸಿಂಬಳ ಒರೆಸಿದ್ದಕ್ಕೆ ಟ್ರಂಪ್‌ ಕಚೇರಿಯಿಂದ 145 ವರ್ಷ ಹಳೆಯ ರೆಸಲ್ಯೂಟ್ ಡೆಸ್ಕ್ ಬದಲಾವಣೆ?

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ಮಗ ಶ್ವೇತಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೂಗಿನಿಂದ ಸಿಂಬಳ ತೆಗೆದು ರೆಸಲ್ಯೂಟ್ ಡೆಸ್ಕ್‌ಗೆ ಒರೆಸಿದ್ದ. ಅದಾದ ಬಳಿಕ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಓವೆಲ್‌ ಕಚೇರಿಯಿಂದ 145 ವರ್ಷಗಳಷ್ಟು ಹಳೆಯದಾದ ಐಕಾನಿಕ್ ರೆಸಲ್ಯೂಟ್ ಡೆಸ್ಕ್ ಅನ್ನು ತೆಗೆದು ಹಾಕಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟ್ರಂಪ್‌ ಕಚೇರಿಯಿಂದ 145 ವರ್ಷದ ಹಳೆಯ ರೆಸಲ್ಯೂಟ್ ಡೆಸ್ಕ್ ಬದಲಾವಣೆ!

Profile Vishakha Bhat Feb 22, 2025 4:22 PM

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ತಮ್ಮ ಓವೆಲ್‌ ಕಚೇರಿಯಿಂದ 145 ವರ್ಷಗಳಷ್ಟು ಹಳೆಯದಾದ ಐಕಾನಿಕ್ ರೆಸಲ್ಯೂಟ್ ಡೆಸ್ಕ್ ಅನ್ನು ತೆಗೆದು ಹಾಕಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್ (Elon Musk) ಅವರ ಮಗ ಶ್ವೇತಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೂಗಿನಿಂದ ಸಿಂಬಳ ತೆಗೆದು ರೆಸಲ್ಯೂಟ್ ಡೆಸ್ಕ್‌ಗೆ ಒರೆಸಿದ್ದ. ಆ ಘಟನೆಯಾಗಿ ಕೆಲವೇ ದಿನಗಳ ನಂತರ ಟ್ರಂಪ್‌ ಈ ಆದೇಶವನ್ನು ಹೊರಡಿಸಿದ್ದಾರೆ ಹಾಗೂ ಚುನಾವಣೆಯ ನಂತರ ಅಧ್ಯಕ್ಷರಿಗೆ 7 ಡೆಸ್ಕ್‌ಗಳಲ್ಲಿ 1 ಆಯ್ಕೆ ಸಿಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯು. ಬುಷ್ ಮತ್ತು ಇತರರು ಬಳಸುತ್ತಿದ್ದ ಮತ್ತು ಬಹಳ ಪ್ರಸಿದ್ಧವಾಗಿರುವ ಈ 'ಸಿ & ಒ' ಡೆಸ್ಕ್ ಅನ್ನು ತಾತ್ಕಾಲಿಕವಾಗಿ ಶ್ವೇತಭವನದಲ್ಲಿ ಸ್ಥಾಪಿಸಲಾಗಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಈ ಬೆಳವಣಿಗೆ ಮಸ್ಕ್‌ ಕುಟುಂಬ ಶ್ವೇತ ಭವನಕ್ಕೆ ಭೇಟಿ ನೀಡಿದ ಬಳಿಕ ನಡೆದಿದ್ದರಿಂದ ಅದೇ ಕಾರಣವಿರಬಹುದು ಎಂದು ಊಹಿಸಲಾಗುತ್ತಿದೆ. ಪಾಪ್ ತಾರೆ ಗ್ರಿಮ್ಸ್ ಹಾಗೂ ಎಲಾನ್‌ ಮಸ್ಕ್‌ ಪುತ್ರನಾದ 4 ವರ್ಷದ ಎಕ್ಸ್ ಎ-ಕ್ಸಿ ಶ್ವೇತ ಭವನಕ್ಕೆ ಭೇಟಿ ನೀಡಿದ್ದ. ಆಗ ಈದೇ ಮೇಜಿಗೆ ತನ್ನ ಸಿಂಬಳ ಒರೆಸಿದ್ದ. ಇದರಿಂದ ಟ್ರಂಪ್‌ ಅವರು ಡೆಸ್ಕ್‌ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.



ಈ ಸುದ್ದಿಯನ್ನೂ ಓದಿ: Elon Musk: ನನ್ನ ಮಗುವಿಗೆ ಎಲಾನ್‌ ಮಸ್ಕ್‌ ತಂದೆ ಎಂದ ಮಹಿಳೆ! 13 ಮಕ್ಕಳ ಅಪ್ಪನಾದರೆ ಮಸ್ಕ್‌?

ಅಧ್ಯಕ್ಷ ಜಾನ್ ಎಫ್. ಕೆನಡಿ 1961ರಲ್ಲಿ ಈ ಮೇಜನ್ನು ಬಳಸಿದ್ದರು. ನಂತರ ಅಧ್ಯಕ್ಷರಾದ ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್, ಬರಾಕ್ ಒಬಾಮಾ ಮತ್ತು ಜೋ ಬೈಡನ್ ಅಧಿಕಾರದಲ್ಲಿದ್ದಾಗ ಇದೇ ಮೇಜನ್ನು ಬಳಸಲಾಗುತ್ತಿತ್ತು. 145 ವರ್ಷಗಳಷ್ಟು ಹಳೆಯದಾದ ರೆಸಲ್ಯೂಟ್ ಡೆಸ್ಕ್ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಸ್ನೇಹದ ಸಂಕೇತವಾಗಿ 1880ರಲ್ಲಿ ರಾಣಿ ವಿಕ್ಟೋರಿಯಾ ಅಧ್ಯಕ್ಷ ರುದರ್ಫೋರ್ಡ್ ಬಿ. ಹೇಯ್ಸ್ ಅವರಿಗೆ ರೆಸಲ್ಯೂಟ್ ಡೆಸ್ಕ್ ಉಡುಗೊರೆಯಾಗಿ ನೀಡಿದ್ದರು. ಇದನ್ನು ಬ್ರಿಟಿಷ್ ಹಡಗಿನ HMS ರೆಸಲ್ಯೂಟ್‌ನ ಓಕ್ ಮರಗಳನ್ನು ಬಳಸಿ ತಯಾರಿಸಲಾಗಿದೆ.

ಈ ಹಿಂದೆ 2017ರ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಕೈಕುಲುಕುವಿಕೆಯ ಬಗ್ಗೆ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದರು. ಅದನ್ನು "ಅನಾಗರಿಕ" ಅಭ್ಯಾಸ ಎಂದು ಕರೆದಿದ್ದರು.