Mid night Marathon: ಮಿಡ್‌ನೈಟ್ ಮ್ಯಾರಥಾನ್ ನಲ್ಲಿ ಡೋಝೀ ತಂಡ
Mid night Marathon: ಮಿಡ್‌ನೈಟ್ ಮ್ಯಾರಥಾನ್ ನಲ್ಲಿ ಡೋಝೀ ತಂಡ

ಬೆಂಗಳೂರು: ಮಿಡ್‌ನೈಟ್ ಮ್ಯಾರಥಾನ್ ನಲ್ಲಿ ಡೋಝೀ ತಂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅದರಲ್ಲೂ ಡೋಝಿ ಸಂಸ್ಥೆಯ ಸಿಇಓ ಮತ್ತು ಸಹ-ಸಂಸ್ಥಾಪಕರಾದ ಮುದಿತ್ ದಂಡವತೆ ಅವರು ಡೋಝೀ ವಿಎಸ್ ನ ಧರಿಸಬಲ್ಲ ವೈರ್ ಲೆಸ್ ಸೆನ್ಸರ್ ಗಳನ್ನು ಧರಿಸಿ ಓಟದಲ್ಲಿ ಭಾಗವಹಿಸಿದರು. ಈ ಮೂಲಕ ಓಟದ ಸಂದರ್ಭದಲ್ಲಿ ಅವರ ದೈಹಿಕ ಚಟುವಟಿಕೆಯ ಮಾಹಿತಿಗಳನ್ನು ಆಯಾ ಕ್ಷಣದಲ್ಲಿ ತಿಳಿದುಕೊಳ್ಳಲಾಯಿತು.
ಈ ಮೂಲಕ ಡೋಝೀ ತಂಡವು ವಿಶೇಷ ಸಂದೇಶವೊಂದನ್ನು ಸಾರ್ವಜನಿಕರಿಗೆ ಸಾರಿದೆ. ರೋಗಿಗಳನ್ನು ರಕ್ಷಿಸಲು ವೈದ್ಯರು ಮತ್ತು ದಾದಿಯರು ಅಪಾರವಾಗಿ ಶ್ರಮಿಸುವಂತೆ ಡೋಝೀ ಕೂಡ ಕಾರ್ಯನಿರ್ವಹಿಸುತ್ತದೆ ಮತ್ತು ಡೋಝೀಯ ಕಂಟಿನ್ಯೂಯಸ್ ಮಾನಿಟರ್ ಆಂಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ ವೈದ್ಯಕೀಯ ತುರ್ತು ಪರಿಸ್ಥಿತಿ ಗಳನ್ನು ಸೂಕ್ತವಾಗಿ ಎದುರಿಸಲು ಮತ್ತು ಜೀವ ಉಳಿಸಲು ಬಹಳ ಉಪಕಾರಿ ಎಂಬ ಮಾಹಿತಿಯನ್ನು ತಿಳಿಸಲಾಯಿತು.