ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madhugiri News: ಕಂದಾಯ ಅದಾಲತ್; ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಸಚಿವ ಕೆ.ಎನ್. ರಾಜಣ್ಣ

Madhugiri News: ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಅದಾಲತ್‌, ಇ- ಪೌತಿ ಖಾತೆ, ದರಕಾಸ್ತು ಪೋಡಿ ಉಚಿತ ಪಹಣಿ ವಿತರಣೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಇ-ಆಫೀಸ್ ಚಾಲನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಸಚಿವ ಕೆ.ಎನ್. ರಾಜಣ್ಣ

Profile Prabhakara R Jul 9, 2025 9:11 PM

ಮಧುಗಿರಿ: ತಾಲೂಕು ಆಡಳಿತ ವತಿಯಿಂದ ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಂದಾಯ ಅದಾಲತ್‌ (Madhugiri News), ಇ- ಪೌತಿ ಖಾತೆ, ದರಕಾಸ್ತು ಪೋಡಿ ಉಚಿತ ಪಹಣಿ ವಿತರಣೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಇ-ಆಫೀಸ್ ಚಾಲನೆ ಕಾರ್ಯಕ್ರಮವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಎಡಿಸಿ ತಿಪ್ಪೇಸ್ವಾಮಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಚಿವ ಕೆ.ಎನ್. ರಾಜಣ್ಣ, ಭೂಮಿ ಯಾರೂ ಮಾಡಿಕೊಳ್ಳಬೇಡಿ, ಪಹಣಿ ದಾಖಲೆಗಳನ್ನು ನಿಮ್ಮ ಹೆಸರುಗಳಿಗೆ ಸರಿಪಡಿಸಿಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದರು. ಅಲ್ಲದೆ ಮಹಿಳೆಯರಿಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್‌ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

Madhugiri  (3)

ಕಾರ್ಯಕ್ರಮದಲ್ಲಿ ಸಚಿವರು ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಿದರು. ಇದೇ ವೇಳೆ ಭೂಮಿ, ಆಸ್ತಿ ಮಾಲೀಕರಿಗೆ ಇ- ಪೌತಿ ಖಾತೆ ದಾಖಲೆ, ದರಕಾಸ್ತು ಪೋಡಿ ಉಚಿತ ಪಹಣಿಯನ್ನು ವಿತರಿಸಿ, ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು.

ತಹಶೀಲ್ದಾರ್ ಶಿರೀನ್ ತಾಜ್, ತಾಪಂ ಇಒ ಬಿ.ಎಸ್. ಲಕ್ಷ್ಮಣ, ಡಿವೈಎಸ್ಪಿ ಮಂಜುನಾಥ್, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಬಿಇಒ ಹನುಮಂತರಾಯಪ್ಪ, ಗ್ರಾಮ ಆಡಳಿತ ಅಧಿಕಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ರೈತರಿಗೆ ಪಂಪ್ ಮೋಟಾರ್ ವಿತರಣೆ

Madhugiri

ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 2024-25ನೇ ಸಾಲಿನ ವಿಶೇಷ ಘಟಕ/ಗಿರಿಜನ ಉಪಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆದಿರುವ 37 ರೈತ ಫಲಾನುಭವಿಗಳಿಗೆ ಪಂಪ್‌ ಮೋಟಾರ್‌ಗಳನ್ನು ಸಚಿವ ಕೆ.ಎನ್‌.ರಾಜಣ್ಣ ಅವರು ವಿತರಿಸಿದದರು.

Madhugiri  (1)

ಈ ಸುದ್ದಿಯನ್ನೂ ಓದಿ | Pravasi Prapancha: ಪ್ರವಾಸಿ ಪ್ರಪಂಚ ಬಿಡುಗಡೆಗೊಳಿಸಿದ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್