ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru: ಬೆಂಗಳೂರು ಹೊಲಸು ನಗರ: ಎಕ್ಸ್‌ ಪೋಸ್ಟ್‌ನಲ್ಲಿ ಕೊಳಕು ಮನಸ್ಥಿತಿ ತೋರಿದ ವ್ಯಕ್ತಿ

ಜುಲೈ 6ರಂದು @rishabhvansal97@ ಹೆಸರಿನ ಎಕ್ಸ್ ಖಾತೆಯಲ್ಲಿ ಈತ ಪೋಸ್ಟ್ ಮಾಡಿದ್ದು, ಬೆಂಗಳೂರು ಚೆನ್ನಾಗಿಲ್ಲ, ಇದು ಕೊಳಕು ನಗರ ಎಂದು ಇಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಗ್ಗೆ ಟೀಕಿಸಿದ್ದಾನೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರು ಕೆರಳುವಂತೆ ಮಾಡಿದೆ.

ಬೆಂಗಳೂರು ಹೊಲಸು ನಗರ: ಎಕ್ಸ್‌ನಲ್ಲಿ ಕೊಳಕು ಮನಸ್ಥಿತಿ ತೋರಿದ ವ್ಯಕ್ತಿ

ರಿಷಬ್

ಹರೀಶ್‌ ಕೇರ ಹರೀಶ್‌ ಕೇರ Jul 10, 2025 7:02 AM

ಬೆಂಗಳೂರು: ಬೆಂಗಳೂರಿಗೆ (Bengaluru) ಬಂದು ದುಡಿಯುತ್ತಾ ಒಂಚೂರು ಆಹಾರ- ಆನಂದ- ನೆಮ್ಮದಿ ಪಡೆಯುತ್ತಿದ್ದಂತೆ ತನಗೆ ಅನ್ನ ಕೊಟ್ಟ ನಗರವನ್ನೇ ಬೈಯ್ಯುವ ಮನಸ್ಥಿತಿ ಕೆಲವು ಉತ್ತರ ಭಾರತೀಯರಲ್ಲಿ ಇತ್ತೀಚೆಗೆ ಕಂಡುಬರುತ್ತಿದೆ. ಅದೇ ರೀತಿಯ ಕೊಳಕು ಮನಸ್ಥಿತಿಯನ್ನು ವ್ಯಕ್ತಿಯೊಬ್ಬ ಹೊರಹಾಕಿದ್ದಾನೆ. ತನ್ನ ಎಕ್ಸ್ ಖಾತೆಯಲ್ಲಿ ಬೆಂಗಳೂರು ನಗರ ಸಂಪೂರ್ಣ ಕೊಳಕು ಪ್ರದೇಶ (dirty city) ಎಂದು ರಿಷಬ್ ಎಂಬಾತ ಬರೆದುಕೊಂಡಿದ್ದಾನೆ.

ಜುಲೈ 6ರಂದು @rishabhvansal97@ ಹೆಸರಿನ ಎಕ್ಸ್ ಖಾತೆಯಲ್ಲಿ ಈತ ಪೋಸ್ಟ್ ಮಾಡಿದ್ದು, ಬೆಂಗಳೂರು ಚೆನ್ನಾಗಿಲ್ಲ, ಇದು ಕೊಳಕು ನಗರ ಎಂದು ಇಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಗ್ಗೆ ಟೀಕಿಸಿದ್ದಾನೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರು ಕೆರಳುವಂತೆ ಮಾಡಿದೆ.



ನಾನು 30 ನಿಮಿಷಗಳಿಂದ ಕ್ಯಾಬ್ ಅಥವಾ ಆಟೋ ಬುಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ. ಇಲ್ಲಿನ ರಾಜ್ಯ ಸರ್ಕಾರ ಮೊದಲು ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿದ್ದು ಇದೀಗ ಉಬರ್ ಮತ್ತು ಓಲಾವನ್ನು ಸಹ ನಿಷೇಧಿಸಲು ಮುಂದಾಗಿದೆ. ಇದು ಯಾವ ರೀತಿಯ ಮಾಫಿಯಾ ಅಸಂಬದ್ಧ ವರ್ತನೆ. ಮೂಲಸೌಕರ್ಯವಿಲ್ಲ. ಸರಿಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಭಾಷೆ ಕುರಿತ ಗಲಾಟೆ. ರಾಜ್ಯ ಸರ್ಕಾರ ಮೊದಲು ಇಲ್ಲಿನ ಕಚೇರಿಗಳನ್ನು ಮುಚ್ಚುವಂತೆ ಹೇಳಬೇಕು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಕೆಲವರು ಈತನಿಗೆ ʼಹಾಗಾದ್ರೆ ಬೆಂಗಳೂರು ಬಿಟ್ಟುಬಿಡು, ಇಲ್ಯಾಕೆ ಇನ್ನೂ ಇದೀಯ, ನಿನ್ನ ರಾಜ್ಯಕ್ಕೆ ಹೋಗಿಬಿಡುʼ ಎಂದು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಇದಾದ ಬಳಿಕ ಎಚ್ಚೆತ್ತುಕೊಂಡ ಆತ, ʼನಾನು ಹೇಳಿದ್ದು ಬೆಂಗಳೂರಿನ ಬಗ್ಗೆ ಅಲ್ಲ, ಇಲ್ಲಿ ಭ್ರಷ್ಟ ಅಧಿಕಾರಿಗಳ ಬಗ್ಗೆʼ ಎಂದು ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾನೆ.