ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ ಇವೆಂಟ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (KEMA) ಗೆ ಹೊಸ ಕಾರ್ಯಕಾರಿ ಸಮಿತಿ ಆಯ್ಕೆ

2019ರಲ್ಲಿ ಮಿಸ್ಟರ್ ಸಂಜೀವ್ ಕಪೂರ್ ಮತ್ತು ಅರ್ವಿಂದ್ ಜ್ಯೋತ್ ಸಾಭನೇ ಅವರ ನೇತೃತ್ವದಲ್ಲಿ ಸ್ಥಾಪಿತವಾದ KEMA, ಇಂದು 150ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಪ್ರಮುಖ ವೃತ್ತಿಪರ ಸಂಘ ಟನೆಯಾಗಿ ಬೆಳೆದಿದೆ. ತರಬೇತಿ, ನೆಟ್‌ವರ್ಕಿಂಗ್ ಮತ್ತು ಸರ್ಕಾರಿ ವಲಯದೊಂದಿಗೆ ಸಮಾ ಲೋಚನೆ ನಡೆಸುವಲ್ಲಿ KEMA ಪ್ರಮುಖ ಪಾತ್ರವಹಿಸುತ್ತಿದೆ

ಕೆ.ಇ.ಎಂ.ಎ 4ನೇ ಕಾರ್ಯಕಾರಿ ಸಮಿತಿ ಚುನಾವಣೆ ಯಶಸ್ವಿ

Profile Ashok Nayak Mar 31, 2025 1:32 PM

ಬೆಂಗಳೂರು: ಕರ್ನಾಟಕದ ಇವೆಂಟ್ ಮ್ಯಾನೇಜ್‌ಮೆಂಟ್ ವಲಯದಲ್ಲಿ ನಾಯಕತ್ವ, ಸಹಕಾರ ಮತ್ತು ನಾವಿನ್ಯ ಬೆಳವಣಿಗೆಗೆ ಮುನ್ನುಡಿ ಬರೆದಿರುವ, ಕರ್ನಾಟಕ ಇವೆಂಟ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (KEMA) ತನ್ನ 4ನೇ ಕಾರ್ಯಕಾರಿ ಸಮಿತಿ ಚುನಾವಣೆಯನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಮಹತ್ವದ ಪ್ರಕ್ರಿಯೆ ಮಾರ್ಚ್ 27ರಂದು ಬೆಂಗಳೂರಿನ ಪ್ರಸಿದ್ಧ ತಾಜ್ ಹೋಟೆಲ್‌ನಲ್ಲಿ ನಡೆದಿದ್ದು ಸ, 130ಕ್ಕೂ ಹೆಚ್ಚು ಸದಸ್ಯರು ಹಾಗೂ ಅತಿಥಿಗಳು ಉಪಸ್ಥಿತರಿದ್ದರು. ಈ ಚುನಾವಣೆಯಲ್ಲಿ ಅರ್ವಿಂದ್ ಜ್ಯೋತ್ ಸಾಭನೇ ಅವರನ್ನು ಪುನಃ ಅಧ್ಯಕ್ಷರಾಗಿ ಹಾಗೂ ಕಾರ್ತಿಕ್ ಎಸ್.ಎ. ಗೌಡ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: Bangalore News: ಪ್ಲಾಸ್ಟಿಕ್‌ ಮರುಬಳಕೆ ಕುರಿತು ಶಾಲಾ ಮಕ್ಕಳಿಗೆ ಜಾಗೃತಿ: ಸರ್ಕಾರಿ ಶಾಲೆಗೆ ಮರುಬಳಕೆ

ಇವರ ನಾಯಕತ್ವದಡಿಯಲ್ಲಿ KEMA ಕರ್ನಾಟಕದ ಇವೆಂಟ್ ಮ್ಯಾನೇಜ್‌ಮೆಂಟ್ ವಲಯದಲ್ಲಿ ಸಂಯೋಜಿತ ಸಮುದಾಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಶರತ್ ಕೆ. ಅಮಿನ್ (ಉಪಾ ಧ್ಯಕ್ಷ – ಕಾರ್ಪೊರೇಟ್ ಮತ್ತು ದೂರು ಪರಿಹಾರ) ಹಾಗೂ ವಿವೇಕ್ ಮೋರೇ (ಖಜಾಂಚಿ) ಸಹ ತಮ್ಮ ಹುದ್ದೆಗಳಲ್ಲಿ ಮುಂದುವರಿದರು. ಹೀಗಾಗಿ ಸಂಘಟನೆಯ ಮುಂದಿನ ಹಾದಿಗೆ ಸಂಘಟಿತ ತಂಡದ ನೇತೃತ್ವ ದೊರಕಿದಂತಾಗಿದೆ. ಈ ಚುನಾವಣಾ ಸಭೆ ಕೇವಲ ಹುದ್ದೆಗಳ ಆಯ್ಕೆಗೆ ಮಾತ್ರ ಸೀಮಿತ ವಾಗದೆ, ಇವೆಂಟ್ ಮ್ಯಾನೇಜ್‌ಮೆಂಟ್ ಸಮುದಾಯದ ಏಕತೆ ಮತ್ತು ಭವಿಷ್ಯದ ಗುರಿಗಳನ್ನು ಪ್ರತಿಬಿಂಬಿಸುವ ವೇದಿಕೆಯಾಗಿ ಪರಿಣಮಿಸಿತು. ಕಾರ್ಯಕ್ರಮಕ್ಕೆ ಐಪಿಎಸ್ ಅಧಿಕಾರಿ ಎಂ. ನಂಜುಂ ಡಸ್ವಾಮಿ, ಡೆನ್ಸು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಮಿ ಸಾಭನೇ, ಗಾಯಕ ಅವಿನಾಶ್ ಚೆಬ್ಬಿ, ಸಂಗೀತ ನಿರ್ದೇಶಕ ಗುರು ಕಿರಣ್, ಗಾಯಕಿ ಸುಪ್ರಿಯಾ ರಾಮ್ ಮತ್ತು ನಟಿ ಕಾವ್ಯಾ ಕೆ ಶಾಸ್ತ್ರಿ ಅವರ ಗೌರವ ಆತಿಥ್ಯ ವಹಿಸಿದ್ದರು.

2019ರಲ್ಲಿ ಮಿಸ್ಟರ್ ಸಂಜೀವ್ ಕಪೂರ್ ಮತ್ತು ಅರ್ವಿಂದ್ ಜ್ಯೋತ್ ಸಾಭನೇ ಅವರ ನೇತೃತ್ವದಲ್ಲಿ ಸ್ಥಾಪಿತವಾದ KEMA, ಇಂದು 150ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಪ್ರಮುಖ ವೃತ್ತಿಪರ ಸಂಘಟನೆಯಾಗಿ ಬೆಳೆದಿದೆ. ತರಬೇತಿ, ನೆಟ್‌ವರ್ಕಿಂಗ್ ಮತ್ತು ಸರ್ಕಾರಿ ವಲಯದೊಂದಿಗೆ ಸಮಾ ಲೋಚನೆ ನಡೆಸುವಲ್ಲಿ KEMA ಪ್ರಮುಖ ಪಾತ್ರವಹಿಸುತ್ತಿದೆ. ಹೊಸ ಕಾರ್ಯಕಾರಿ ಸಮಿತಿ ರಚನೆಯೊಂದಿಗೆ KEMA ತನ್ನ ಮುಂದಿನ ಹಾದಿಯಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಸಾಧಿಸಲು ಸಜ್ಜಾಗಿದೆ. ಸಂಸ್ಥೆಯು ಕರ್ನಾಟಕದ ಇವೆಂಟ್ ವಲಯವನ್ನು ಉನ್ನತ ಮಟ್ಟಕ್ಕೆ ಎತ್ತುವ ಗುರಿ ಯೊಂದಿಗೆ ಸದಸ್ಯರಿಗೆ ತರಬೇತಿ, ಸೌಕರ್ಯ, ಹಾಗೂ ಸರ್ಕಾರಿ ಬೆಂಬಲ ಒದಗಿಸಲು ತನ್ನ ಶ್ರಮವನ್ನು ಮುಂದುವರಿಸಲಿದೆ.

KEMAಯ ಮುಂದಿನ ಪ್ರಯಾಣ ಹೆಚ್ಚು ನಾವಿನ್ಯತೆಯಿಂದ ಕೂಡಿದ್ದು, ಭಾರತೀಯ ಇವೆಂಟ್ ಮ್ಯಾನೇಜ್‌ಮೆಂಟ್ ವಲಯದಲ್ಲಿ ರಾಜ್ಯದ ಪಾತ್ರವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ನಿರೀಕ್ಷೆಯಿದೆ. KEMA ಬಗ್ಗೆ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ: [www.kemaconnect.com](https://kemaconnect.com)