Karnataka Weather: ಉತ್ತರ ಕರ್ನಾಟಕದಲ್ಲಿ ಮೇ ಅಂತ್ಯದವರೆಗೆ ರಣ ಬಿಸಿಲು; ಬೆಂಗಳೂರಲ್ಲಿ ಹೆಚ್ಚುವರಿ ಬೇಸಿಗೆ ಮಳೆ
Karnataka Weather: ಈ ಬಾರಿ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳಲ್ಲಿ ಶೇ.50-60 ರಷ್ಟು ಹೆಚ್ಚುವರಿ ಬೇಸಿಗೆ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.30-40 ರಷ್ಟು ಹೆಚ್ಚಿನ ಪೂರ್ವ ಮುಂಗಾರು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.


ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಝಳ ಏರಿಕೆಯಾಗುತ್ತಿದ್ದು, ಇದರಿಂದ ಜನರು ಹೈರಾಣಾಗಿದ್ದಾರೆ. ಮೇ ಅಂತ್ಯದವರೆಗೂ ಉತ್ತರ ಕರ್ನಾಟಕದಲ್ಲಿ ಇದೇ ರೀತಿಯ ತೀವ್ರ ಬಿಸಿಲು ಕಾಡಲಿದೆ. ಆದರೆ, ವಾಡಿಕೆಗಿಂತ ಅಧಿಕ ಪೂರ್ವ ಮುಂಗಾರು ಮಳೆಯಿಂದಾಗಿ ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ (Karnataka Weather) ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗಿ ಬೀಳುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು, ವಿಶೇಷವಾಗಿ ಕಲ್ಯಾಣ-ಕರ್ನಾಟಕ, 2-4 ದಿನಗಳ ಕಾಲ ತೀವ್ರವಾದ ಬಿಸಿಗಾಳಿ ಅನುಭವಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಾರಿ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳಲ್ಲಿ ಶೇ.50-60 ರಷ್ಟು ಹೆಚ್ಚುವರಿ ಬೇಸಿಗೆ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.30-40 ರಷ್ಟು ಹೆಚ್ಚಿನ ಪೂರ್ವ ಮುಂಗಾರು ಮಳೆಯಾಗಬಹುದು. ಈ ಮಳೆಯಿಂದಾಗಿ, ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ತಾಪಮಾನವು ಸಾಮಾನ್ಯವಾಗಿರುತ್ತದೆ. ಆದರೆ ಹಗಲಿನಲ್ಲಿ ಬಿಸಿಲು ಇರುತ್ತದೆ. ಇನ್ನು ಈಶಾನ್ಯ ಕರ್ನಾಟಕದಲ್ಲಿ ಮಾರ್ಚ್ ತಿಂಗಳಿನಲ್ಲಿ 43 ಡಿ.ಸೆ. ನಿಂದ 45 ಡಿ.ಸೆ. ನಡುವೆ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಸಿಲಿನ ತೀವ್ರತೆ ಕಡಿಮೆಯಾಗಬಹುದು. ಆದರೆ ಉತ್ತರ ಕರ್ನಾಟಕದಾದ್ಯಂತ ಹೆಚ್ಚಾಗುವ ಸಾಧ್ಯತೆಯಿದೆ.
ಲಾ ನಿನೋ ಪರಿಸ್ಥಿತಿ ದುರ್ಬಲತೆಯು ತೀವ್ರ ಬಿಸಿಲಿಗೆ ಕಾರಣವಾಗುತ್ತಿದೆ. ಆದರೆ, 2024ರ ಬೇಸಿಗೆಗಿಂತ ಭಿನ್ನವಾಗಿ, ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಮಾನ್ಯ ತಾಪಮಾನ ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಾರ್ಚ್ 5ರಂದು ರಾಜ್ಯದಾದ್ಯಂತ ಒಣ ಹವೆ
ರಾಜ್ಯದಾದ್ಯಂತ ಮಂಗಳವಾರ ಒಣ ಹವೆ ಇತ್ತು. ಅದೇ ರೀತಿ ಮಾರ್ಚ್ 5ರಂದು ಕೂಡ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದ್ದು, ಕರ್ನಾಟಕದ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಇನ್ನು ಬೆಂಗಳೂರು ಮತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶವಿರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 34°C ಮತ್ತು 21°C ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಮಾರ್ಚ್ 6 ರಂದು ಕೂಡ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. ಇದೇ ಮಾದರಿಯ ಹವಾಮಾನ ಮಾರ್ಚ್ 10ರವರೆಗೆ ಮುಂದುವರಿಯಲಿದೆ. ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳಿರುವುದಿಲ್ಲ.
ತಾಪಮಾನದ ಸಾರಾಂಶ
ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಸೋಮವಾರ ಕಲಬುರಗಿಯಲ್ಲಿ ಅತೀ ಹೆಚ್ಚು ಉಷ್ಣಾಂಶ 39.0 ಡಿ.ಸೆ ದಾಖಲಾಗಿದೆ. ಬೀದರ್‌ನಲ್ಲಿ ಅತೀ ಕಡಿಮೆ ಉಷ್ಣಾಂಶ 16.6 ಡಿ.ಸೆ. ಬೀದರ್ ದಾಖಲಾಗಿದೆ.
ಕನಿಷ್ಠ ತಾಪಮಾನವು ಕರಾವಳಿ ಕರ್ನಾಟಕದ ಮೇಲೆ 25-26 ಡಿ.ಸೆ., ಬೆಳಗಾವಿ ವಿಮಾನ ನಿಲ್ದಾಣ, ಬೀದರ್, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಧಾರವಾಡದಲ್ಲಿ 17-19 ಡಿ.ಸೆ. ಮತ್ತು ಬೆಳಗಾವಿ ನಗರದಲ್ಲಿ 20-21 ಡಿ.ಸೆ. , ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಹಾವೇರಿ, ಉತ್ತರ, ಕಲಬುರ್ಗಿ, ಕೊಪ್ಪಳ, ರಾಯಚೂರು ಮತ್ತು ಹಾವೇರಿ 1ಡಿ.ಸೆ., ಚಿಂತಾಮಣಿ, ಹಾಸನ, ದಾವಣಗೆರೆ ಮತ್ತು ಶಿವಮೊಗ್ಗ ಮತ್ತು ದಕ್ಷಿಣ ಒಳ ಕರ್ನಾಟಕದ ಬೆಂಗಳೂರು, ಆಗುಂಬೆ, ಚಾಮರಾಜನಗರ, ಚಿತ್ರದುರ್ಗ, ಮಂಡ್ಯ, ಮಡಿಕೇರಿ ಮತ್ತು ಮೈಸೂರು ಮೇಲೆ 19-21 ಡಿ.ಸೆ. ದಾಖಲಾಗಿತ್ತು.
ಉತ್ತರ ಅಂತರಿಕ ಕರ್ನಾಟಕ ಕರಾವಳಿ ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನದಲ್ಲಿ (+2.8 °C) ಗಮನಾರ್ಹ ಏರಿಕೆಯಾಗಿದೆ. ದಕ್ಷಿಣ ಒಳನಾಡಿನ ಮಂಡ್ಯ (-3.1°C), ಮೈಸೂರು (-2.4°C) ಮತ್ತು ಶಿವಮೊಗ್ಗ (-2.2°C) ಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ.
ಗರಿಷ್ಠ ತಾಪಮಾನವು ಕರಾವಳಿ ಕರ್ನಾಟಕದ ಮೇಲೆ 33-35 ಡಿ.ಸೆ. ವ್ಯಾಪ್ತಿಯಲ್ಲಿತ್ತು. ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ ಮತ್ತು ಕೊಪ್ಪಳದಲ್ಲಿ 34-36 ಡಿ.ಸೆ. ಮತ್ತು ಕಲಬುರಗಿ ಮತ್ತು ರಾಯಚೂರಿನಲ್ಲಿ 37-39 ಡಿ.ಸೆ. , ಉತ್ತರ ಒಳಭಾಗದ ಕಲಬುರಗಿ ಮತ್ತು ರಾಯಚೂರು, ಚಾಮರಾಜನಗರ, ಹಾಸನ, ಚಿಂತಾಮಣಿ, ಮಡಿಕೇರಿ, ಮಂಡ್ಯ ಮತ್ತು ಮೈಸೂರು ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗದ 35-36° C ಇತ್ತು.
ಹೊನ್ನಾವರದ ಮೇಲೆ ಗರಿಷ್ಠ ತಾಪಮಾನ (-3.0°C) & (2.8°C) ಕರಾವಳಿ ಕರ್ನಾಟಕದ ಕಾರವಾರದ ಮೇಲೆ ಮತ್ತು (-2.6°C) ದಕ್ಷಿಣ ಒಳ ಕರ್ನಾಟಕದ ಆಗುಂಬೆಯಲ್ಲಿ ಗಮನಾರ್ಹ ಕುಸಿತ. ರಾಜ್ಯದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ.
ಈ ಸುದ್ದಿಯನ್ನೂ ಓದಿ | Bird flu: ಹಕ್ಕಿ ಜ್ವರ ಆತಂಕ; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
ಬಿಸಿಲಿನಿಂದ ರಕ್ಷಣೆಗೆ ಮಾರ್ಗಸೂಚಿ:
ದಿನೇ ದಿನೇ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಮನೆಯಿಂದ ಹೊರಗೆ ಹೋಗುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ. ಶಾಖಾಘಾತದಿಂದ ಶಿಶುಗಳು, ವೃದ್ಧರು, ದೀರ್ಘಕಾಲದ ಕಾಯಿಲೆ ಇರುವವರಿಗೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ಕೆಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
(ಎ) ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ, (ವಿಶೇಷವಾಗಿ ಮಧ್ಯಾಹ್ನ 12 ಗಂಟೆಯಿಂದ ರಿಂದ 3.00 ರವರೆಗೆ).
(ಬಿ) ಹಗುರವಾದ, ತಿಳಿ ಬಣ್ಣದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಿ.
(ಸಿ) ನಿಮ್ಮ ತಲೆಯನ್ನು ಮುಚ್ಚಿಕೊಳ್ಳಿ: ಬಟ್ಟೆ, ಟೋಪಿ ಅಥವಾ ಛತ್ರಿ ಬಳಸಿ.