ಸರ್ವಜ್ಞನ ವಚನಗಳು ಬದುಕಿನ ನೂರಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ: ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್
ಸರ್ವಜ್ಞರು ವಚನಗಳನ್ನು ಆಡು ಮಾತಿನ ರೂಪದಲ್ಲಿ ಸರಳವಾಗಿ ಜನರ ಆಡುಭಾಷೆ ಯಲ್ಲೇ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊAಕುಗಳನ್ನು ತಿದ್ದಿದ ಸಮಾಜ ಸುಧಾರಕರು. ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಗರಿಮೆಯ ಕೊಡುಗೆ ನೀಡಿರುವ ಶ್ರೇಷ್ಠ ವಚನಕಾರರು ನಮ್ಮ ಸರ್ವಜ್ಞ. ಅವರು ರಚಿಸಿರುವ ತ್ರಿಪದಿಗಳು ಸರಳತೆ ಮತ್ತು ಪ್ರಾಸಬದ್ಧತೆ ಯಲ್ಲಿ ಜನಪ್ರಿಯವಾಗಿವೆ, ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಸರಿಯಾದ ದಿಕ್ಕಿನಲ್ಲಿ ತಿಳಿಸಿದರು

ಸರ್ವಜ್ಞನ ವಚನಗಳು ಬದುಕಿನ ನೂರಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ತಿಳಿಸಿದರು.

ಚಿಕ್ಕಬಳ್ಳಾಪುರ: ಸಂತ ಕವಿ ಸರ್ವಜ್ಞ ರಾಷ್ಟ್ರ ಕಂಡ ಶ್ರೇಷ್ಠ ತತ್ವಜ್ಞಾನಿ, ತಮ್ಮ ತ್ರಿಪದಿಗಳ ಮೂಲಕ ವಚನ ಸಾಹಿತ್ಯಕ್ಕೆ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. “ಅನ್ನಕ್ಕೆ ಮಿಗಿ ಲಾದುದು ಯಾವುದು ಇಲ್ಲ, ಅನ್ನವೇ ಲೋಕಕ್ಕೆ ಪ್ರಾಣ ಸರ್ವಜ್ಞ” ಎಂದು ಅನ್ನದ ಮಹತ್ವ ಸಾರಿದ ಮೊದಲಿಗರು ಸರ್ವಜ್ಞ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಅವರು ಬಣ್ಣಿಸಿದರು. ಸುಲ್ತಾನಪೇಟೆಯ ಶ್ರೀ ಕುಂಭೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ "ಶ್ರೀ ಸಂತಕವಿ ಸರ್ವಜ್ಞ ಜಯಂತಿ" ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ ದರು.
ಸರ್ವಜ್ಞರು ವಚನಗಳನ್ನು ಆಡು ಮಾತಿನ ರೂಪದಲ್ಲಿ ಸರಳವಾಗಿ ಜನರ ಆಡುಭಾಷೆ ಯಲ್ಲೇ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊAಕುಗಳನ್ನು ತಿದ್ದಿದ ಸಮಾಜ ಸುಧಾರಕರು. ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಗರಿಮೆಯ ಕೊಡುಗೆ ನೀಡಿರುವ ಶ್ರೇಷ್ಠ ವಚನಕಾರರು ನಮ್ಮ ಸರ್ವಜ್ಞ. ಅವರು ರಚಿಸಿರುವ ತ್ರಿಪದಿಗಳು ಸರಳತೆ ಮತ್ತು ಪ್ರಾಸಬದ್ಧತೆಯಲ್ಲಿ ಜನಪ್ರಿಯವಾಗಿವೆ, ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಸರಿಯಾದ ದಿಕ್ಕಿನಲ್ಲಿ ತಿಳಿಸಿದರು.
ಸರ್ವಜ್ಞನ ಒಂದೊಂದು ವಚನವೂ ಬದುಕಿನ ವಿವಿಧ ವಿಚಾರಗಳಿಗೆ ಕನ್ನಡಿ ಹಿಡಿಯಲಿವೆ, ಅಷ್ಟು ವಾಸ್ತವ ಮತ್ತು ನೈಜತೆಯಿಂದ ಕೂಡಿವೆ.ಬದುಕಿನಲ್ಲಿ ಎದುರಾಗುವ ನೂರಾರು ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಉತ್ತರಗಳನ್ನು ಹಾಗೂ ಪರಿಹಾರಗಳನ್ನು ನೀಡುತ್ತವೆ. ಆ ಮೂಲಕ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾವು ದಿನಕ್ಕೆ ಒಂದು ತ್ರಿಪದಿ ಯನ್ನಾದರೂ ಓದಲೇಬೇಕು. ಪ್ರತಿಯೊಬ್ಬರು ಸರ್ವಜ್ಞರ ವಚನಗಳನ್ನು ಹಾಗೂ ತತ್ತ್ವಗಳು, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಲುಪಿ ಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ ಸತ್ಯಪ್ರಕಾಶ್ ಬೈರಾಪುರ ಮಾತನಾಡಿ, ಸರ್ವಜ್ಞ ನನ್ನು ತ್ರಿಪದಿಯ ಬ್ರಹ್ಮ ಎಂದೇ ಕರೆಯುತ್ತೆವೆ. ಇಂತಹ ಮಹಾನ್ ವ್ಯಕ್ತಿಯನ್ನು ನಾವು ಒಂದೇ ಸಮುದಾಯಕ್ಕೆ ಸೀಮಿತ ಮಾಡಬಾರದು. ತಮಿಳಿನ ತಿರುವಾಳ್ವಾರ್, ತೆಲುಗಿನ ವೇಮನರಂತೆ ಕನ್ನಡದಲ್ಲಿ ಸರ್ವಜ್ಞನನ್ನು ಕಾಣಲಾಗುತ್ತದೆ. ಸತ್ಯನಿಷ್ಠುರವಾದ ಸಾಮಾ ಜಿಕ ಕಳಕಳಿಯಿಂದ ಸರಳಸುಂದರವಾದ ಅಚ್ಚಗನ್ನಡದಲ್ಲಿ ರಚಿತವಾದ ಸರ್ವಜ್ಞ ರವರ ವಚನಗಳು ಸರ್ವ ಕಾಲಕ್ಕೂ ಉಪದೇಶಾತ್ಮಕವಾಗಿವೆ. ಒಂದೊಂದು ತ್ರಿಪದಿಯೂ ನೂರಾ ರು ಪುಟಗಳ ವ್ಯಾಖ್ಯಾನಗಳನ್ನು ವಿಶ್ಲೇಷಣೆ ಮಾಡುತ್ತದೆ. ಅವುಗಳಲ್ಲಿ ಇಲ್ಲದ ವಿಷಯ ಗಳಿಲ್ಲ. ಮಾನವ ಬದುಕಿನ ಹುಟ್ಟಿನಿಂದ ಸಾವಿನವರೆಗಿನ ಏಳುಬೀಳುಗಳಿಗೆ ಕಾರಣ ವಾಗುವ ವಿಚಾರಗಳೊಂದಿಗೆ, ಜ್ಞಾನ, ವಿಜ್ಞಾನ. ವೈದ್ಯ, ಜ್ಯೋತಿಷ್ಯ ಮುಂತಾದ ಸಾವಿ ರಾರು ವಿಷಯಗಳು ಇಲ್ಲಿ ರೂಪುತಾಳಿವೆ ಎಂದರು.
ಸಮುದಾಯದ ಮುಖಂಡ ಮಹೇಶ್ ತಮ್ಮ ಕುಂಬಾರಿಕೆ ಕಸುಬಿನ ಪ್ರದರ್ಶನ ಮಾಡಿ ದರು. ಮಣ್ಣಿನಿಂದ ಮಾಡುವ ಅಕೃತಿಗಳನ್ನು ಸ್ಥಳದಲ್ಲೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಮಣ್ಣಿನಲ್ಲಿ ತಯಾರಿಸಿದ ಪದಾರ್ಥಗಳನ್ನು ನಮ್ಮ ಜೀವನದಲ್ಲಿ ಬಳಸುವುದರಿಂದ ನಮ್ಮೆಲರ ಆರೋಗ್ಯಕ್ಕೆ ಅತ್ಯುತ್ತಮ ಎಂದು ತಿಳಿಸಿದರು.
ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದುಕೊಂಡಿರುವ ಸಮುದಾಯದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಣೆ ಮಾಡಿ ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು.
ಸಮುದಾಯದ ಮುಖಂಡರಾದ ಪ್ರೇಮ್ ಲೀಲಾ ವೆಂಕಟೇಶ್ ಮಾತನಾಡಿ, ಸರ್ಕಾರಿ ಜಮೀನಿನಲ್ಲಿ ಐದು ಗುಂಟೆ ಜಮೀನನ್ನು ಸಮುದಾಯದ ಅಭಿವೃದ್ಧಿಗೆ ಜಿಲ್ಲಾ ಕೇಂದ್ರ ದಲ್ಲಿ ಮಂಜೂರು ಮಾಡಿ ಮುಂದಿನ ದಿನಗಳಲ್ಲಿ ಉಚಿತ ತರಬೇತಿ ಕೇಂದ್ರ ಮಾಡಿಕೊಡ ಬೇಕು ಎಂದು ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ರವರಿಗೆ ಈ ವೇಳೆ ನೀಡಿ ವಿನಂತಿಸಿ ದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ರವಿಕುಮಾರ್, ಸಮುದಯದ ಮುಖಂಡರಾದ ನಾರಾಯಣಸ್ವಾಮಿ, ಸುಧಾ ವೆಂಕಟೇಶ್, ಮುನಿಕೃಷ್ಣಪ್ಪ, ಎಂಸಿ ಮಂಜು ನಾಥ, ವೆಂಕಟೇಶ್, ಸುಶೀಲಮ್ಮ, ವೆಂಕಟಪ್ಪ, ಲಕ್ಮೀಪತಿ, ಮುನಿಕೃಷ್ಣಪ್ಪ, ಕಲಾವಿದೆ ಗಾಯತ್ರಿ ,ಸಮುದಾಯದ ವಿವಿಧ ಸಂಘಗಳ ಸದಸ್ಯರು, ಪದಾಧಿಕಾರಿಗಳು, ಜನ ಪ್ರತಿನಿಧಿ ಗಳು, ಸಾರ್ವಜನಿಕರು ಉಪಸ್ಥಿತರಿದ್ದರು.