DC vs SRH: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್
ಮೊದಲ ಮಗುವಿಗೆ ತಂದೆಯಾಗುವ ಸಂಭ್ರಮದಲ್ಲಿ ಹಿಂದಿನ ಪಂದ್ಯ ತಪ್ಪಿಸಿಕೊಂಡಿದ್ದ ಭಾರತ ತಂಡದ ವಿಕೆಟ್ ಕೀಪರ್ –ಬ್ಯಾಟರ್ ಕೆ.ಎಲ್.ರಾಹುಲ್ ಅವರು ತಂಡಕ್ಕೆ ಮರಳಿದ್ದು ಕ್ಯಾಪಿಟಲ್ಸ್ ತಂಡದ ಬಲ ಇನ್ನಷು ಹೆಚ್ಚಿಸಿದೆ. ಇದು ರಾಹುಲ್ ಅವರ ಈ ಆವೃತ್ತಿಯ ಮೊದಲ ಐಪಿಎಲ್ ಪಂದ್ಯ.


ವಿಶಾಖಪಟ್ಟಣ: ಭಾನುವಾರದ ಮೊದಲ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಡೆಲ್ಲಿ ತಂಡ ಮೊದಲು ಬೌಲಿಂಗ್ ನಡೆಸಲಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 200 ಪ್ಲಸ್ ಮೊತ್ತವನ್ನು ಬೆನ್ನಟ್ಟಿ ಗೆದ್ದು ಮನೋಬಲ ಹೆಚ್ಚಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಇದೇ ಜೋಶ್‌ನಲ್ಲಿ ಪ್ರಬಲ ಸನ್‌ರೈಸರ್ಸ್ ಹೈದರಾಬಾದ್(DC vs SRH) ವಿರುದ್ಧವೂ ಆಡುವ ಇರಾದೆಯಲ್ಲಿದೆ.
ಡೆಲ್ಲಿ ತಂಡ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿತು. ಸಮೀರ್ ರಿಜ್ವಿ ಕೈಬಿಟ್ಟು ಕೆಎಲ್ ರಾಹುಲ್‌ಗೆ ಅವಕಾಶ ನೀಡಿತು.
ಮೊದಲ ಮಗುವಿಗೆ ತಂದೆಯಾಗುವ ಸಂಭ್ರಮದಲ್ಲಿ ಹಿಂದಿನ ಪಂದ್ಯ ತಪ್ಪಿಸಿಕೊಂಡಿದ್ದ ಭಾರತ ತಂಡದ ವಿಕೆಟ್ ಕೀಪರ್ –ಬ್ಯಾಟರ್ ಕೆ.ಎಲ್.ರಾಹುಲ್ ಅವರು ತಂಡಕ್ಕೆ ಮರಳಿದ್ದು ಕ್ಯಾಪಿಟಲ್ಸ್ ತಂಡದ ಬಲ ಇನ್ನಷು ಹೆಚ್ಚಿಸಿದೆ. ಇದು ರಾಹುಲ್ ಅವರ ಈ ಆವೃತ್ತಿಯ ಮೊದಲ ಐಪಿಎಲ್ ಪಂದ್ಯ.
ಇದನ್ನೂ ಓದಿ IPL 2025: ಐಪಿಎಲ್ ಆಫರ್ ತಿರಸ್ಕರಿಸಿದ ಇಂಗ್ಲೆಂಡ್ ಬ್ಯಾಟರ್
ಸ್ವದೇಶದ ಟ್ರಾವಿಸ್ ಹೆಡ್ ಜತೆಗಿನ ಸ್ಟಾರ್ಕ್ ಮುಖಾಮುಖಿ ಕುತೂಹಲಕರ ಸನ್‌ರೈಸರ್ಸ್ ತಂಡ ಇಶಾನ್ ಕಿಶನ್, ಹೆಡ್, ಅಭಿಷೇಕ್ ಶರ್ಮಾ ಅವರನ್ನು ನೆಚ್ಚಿಕೊಂಡಿದೆ. ಬೌಲಿಂಗ್ ವಿಭಾಗದ ಯಶಸ್ಸು ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್ ಅವರ ನಿರ್ವಹಣೆಯನ್ನು ಅವಲಂಬಿಸಿದೆ.
🚨 Toss 🚨@SunRisers won the toss and elected to bat first against @DelhiCapitals in Match 1⃣0⃣
— IndianPremierLeague (@IPL) March 30, 2025
Updates ▶️ https://t.co/L4vEDKyVsb#TATAIPL | #DCvSRH pic.twitter.com/VuIzoiYCjf
ಆಡುವ ಬಳಗ
ಡೆಲ್ಲಿ: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್(ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್.
ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್(ಸಿ), ಜೀಶನ್ ಅನ್ಸಾರಿ, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ.