ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಬಣ್ಣಗಳ ಹಬ್ಬದ ಹಿಂದಿನ ಉದ್ದೇಶ

ಹಿರಣ್ಯಕಶ್ಯಪುಗೆ ಒಬ್ಬ ದುಷ್ಟ ತಂಗಿ ಇದ್ದಳು. ಅವಳ ಹೆಸರು ‘ಹೋಲಿಕಾ’. ಇವರಿಬ್ಬರೂ ಸೇರಿ ಒಂದು ಯೋಜನೆಯನ್ನು ರೂಪಿಸಿ ಅದರ ಪ್ರಕಾರ, ಹೋಲಿಕಾ ದಗ ದಗ ಉರಿಯುತ್ತಿರುವ ಬೆಂಕಿ ಯ ಒಳಗೆ ಕುಳಿತಿರುತ್ತಾಳೆ. ಅವಳ ಮೈ ಮೇಲೆ ಬೆಂಕಿ ತಗಲ ದಂತಿರುವ ವಸ್ತ್ರವಿರುತ್ತದೆ. ಹಿರಣ್ಯ ಕಶ್ಯಪು ತನ್ನ ಮಗನಿಗೆ, ಸಹೋದರಿ ಹೋಲಿಕಾಳ ತೊಡೆಯ ಮೇಲೆ ಕೂರುವಂತೆ ಹೇಳುತ್ತಾನೆ

ಬಣ್ಣಗಳ ಹಬ್ಬದ ಹಿಂದಿನ ಉದ್ದೇಶ

ಒಂದೊಳ್ಳೆ ಮಾತು

ಹಿರಣ್ಯಕಶ್ಯಪು ಬ್ರಹ್ಮನನ್ನು ಕುರಿತು ಕಠಿಣ ತಪಸ್ಸು ಮಾಡಿ ಬ್ರಹ್ಮನಿಂದ ವರಗಳನ್ನು ಪಡೆದನು. ನನ್ನ ಜೀವಮಾನ ಪಯಂತ ಮನುಷ್ಯರಿಂದಾಗಲಿ ರಾಕ್ಷಸರಿಂದಾಗಲಿ, ಪ್ರಾಣಿ , ಕೀಟ, ಪಶು, ಪಕ್ಷಿ ಹಾಗೂ ಭೂಮಿ- ಆಕಾಶ -ಮನೆ- ಹೊರಗೆ-ಒಳಗೆ, ಮತ್ತು ಆಯುಧ ಗಳಿಂದಾಗಲಿ ನನಗೆ ಸಾವು ಬರಬಾರದು ಎಂಬ ವರ ಪಡೆದು ಭೂಲೋಕದಲ್ಲಿ ದುಷ್ಟ ರಾಜನಾಗಿ ಮೆರೆಯುತ್ತಿದ್ದ. ವಿಷ್ಣು ದ್ವೇಷಿಯಾಗಿದ್ದ ಅವನು, ತನ್ನನ್ನೇ ದೇವರೆಂದು ಪೂಜಿಸಬೇಕು ಎಂದು ಪ್ರಜೆಗಳ ಮೇಲೆ ಒತ್ತಡ ತಂದನು. ಹಿರಣ್ಯ ಕಶ್ಯಪುವಿಗೆ ಕಯಾದು ಎಂಬ ರಾಣಿ, ಪ್ರಹ್ಲಾದನೆಂಬ ಒಬ್ಬ ಮಗ ಇದ್ದು ಅವನು ವಿಷ್ಣುವಿನ ಪರಮ ಭಕ್ತನಾಗಿದ್ದ. ಬಾಲಕನ ಮೇಲೆ ಸಾಕ್ಷಾತ್ ಭಗ ವಂತನೇ ಕರುಣೆ ತೋರಿದ್ದ.

ತಂದೆಗೆ ಇದು ಸರಿ ಬರುತ್ತಿರಲಿಲ್ಲ. ವಿಷ್ಣು ಪೂಜೆ ಮಾಡಬೇಡ ಎಂದು ಎಷ್ಟೋ ಬಾರಿ ತಿಳಿ ಹೇಳಿ ಗದರಿಸಿ, ಅದಕ್ಕಾಗಿ ಕಠಿಣ ಶಿಕ್ಷೆಗಳನ್ನೂ ಕೊಟ್ಟನು. ಪತ್ನಿ ಯನ್ನು ಹಿಂಸಿಸಿ ಮಗನಿಗೆ ಬುದ್ಧಿ ಹೇಳುವಂತೆ ಹೇಳಿದರೂ ಯಾವುದೋ ಫಲಿಸಲಿಲ್ಲ.

ಇದನ್ನೂ ಓದಿ: Roopa Gururaj Column: ಉತ್ತಮ ಸ್ನೇಹಿತರ ಲಕ್ಷಣ

ಹಿರಣ್ಯಕಶ್ಯಪುಗೆ ಒಬ್ಬ ದುಷ್ಟ ತಂಗಿ ಇದ್ದಳು. ಅವಳ ಹೆಸರು ‘ಹೋಲಿಕಾ’. ಇವರಿಬ್ಬರೂ ಸೇರಿ ಒಂದು ಯೋಜನೆಯನ್ನು ರೂಪಿಸಿ ಅದರ ಪ್ರಕಾರ, ಹೋಲಿಕಾ ದಗ ದಗ ಉರಿಯು ತ್ತಿರುವ ಬೆಂಕಿಯ ಒಳಗೆ ಕುಳಿತಿರುತ್ತಾಳೆ. ಅವಳ ಮೈ ಮೇಲೆ ಬೆಂಕಿ ತಗಲದಂತಿರುವ ವಸ್ತ್ರ ವಿರುತ್ತದೆ. ಹಿರಣ್ಯಕಶ್ಯಪು ತನ್ನ ಮಗನಿಗೆ, ಸಹೋದರಿ ಹೋಲಿಕಾಳ ತೊಡೆಯ ಮೇಲೆ ಕೂರುವಂತೆ ಹೇಳುತ್ತಾನೆ.

‘ಓಂ ನಮೋ ನಾರಾಯಣಾಯ, ಓಂ ನಮೋ ನಾರಾ ಯಣಾಯ’ ಎಂದು ನಾಮ ಸ್ಮರಣೆ ಮಾಡುತ್ತಾ ಹೋಲಿಕಾಳ ತೊಡೆಯ ಮೇಲೆ ಅಗ್ನಿಯ ಮಧ್ಯ ಬಾಲಕ ಪ್ರಹ್ಲಾದ ಕುಳಿತು ಕೊಳ್ಳುತ್ತಾನೆ. ಭಗವಂತ ವಿಷ್ಣುವಿನ ಕರುಣೆಯಿಂದ ಹೋಲಿಕಾಳ ವಸ್ತ್ರ ಪ್ರಹಲ್ಲಾದನ ಮೈ ಮೇಲೆ ಬೀಳುತ್ತದೆ. ಇದರಿಂದ ಪ್ರಹ್ಲಾದನಿಗೆ ಯಾವುದೇ ಅಪಾಯ ಆಗುವುದಿಲ್ಲ. ಆದರೆ ಹೋಲಿಕಾ, ಅದೇ ಬೆಂಕಿಯಲ್ಲಿ ಸುಟ್ಟು ದಹನವಾದಳು. ಕೆಟ್ಟದ್ದನ್ನು ನಾಶ ಮಾಡಿ, ಒಳ್ಳೆ ಯ ಕಾರ್ಯವನ್ನು ಮಾಡುವ ಸೂಚಕವಾಗಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಕಾಮನ ಹುಣ್ಣಿಮೆ ಪ್ರತಿ ವರ್ಷವೂ ವಸಂತ ಋತುವಿನಲ್ಲಿ ಬರುತ್ತದೆ. ಆದ್ದರಿಂದ ಇದನ್ನು ‘ಹೋಳಿ ಹುಣ್ಣಿಮೆ’ ಎಂದು ಕರೆಯುತ್ತಾರೆ.

ಕಾಮ ಅಥವಾ ಬಯಕೆ ಒಂದು ಮಿತಿಯಲ್ಲಿದ್ದರೆ ಚಂದ ಮಿತಿಮೀರಿದರೆ ಮನುಷ್ಯನಲ್ಲಿ ರುವ ಮಾನಸಿಕ, ಶಾರೀರಿಕ, ಹಾಗೂ ಬೌದ್ಧಿಕವಾದ ಸಮತೋಲನವನ್ನು ಹಾಳು ಮಾಡು ತ್ತದೆ. ಆದ್ದರಿಂದಲೇ ಈ ಕಾಮವನ್ನು ದಹಿಸುವ ಹಬ್ಬ ಇದಾಗಿದೆ. ಎಲ್ಲಾ ಯುಗದಲ್ಲೂ ಶ್ರೀ ಕೃಷ್ಣನು ರಾಧಾ ರುಕ್ಮಿಣಿಯರ ಜೊತೆ ಬಂಧು ಬಾಂಧವರೊಡಗೂಡಿ ಈ ಹಬ್ಬವನ್ನು ಕಾಮನಬಿಲ್ಲಿನ ಸಂಕೇತವಾದ ಬಣ್ಣಗಳನ್ನು ಒಬ್ಬರಿಗೊಬ್ಬರು ಎರಚಿಕೊಳ್ಳುವುದರ ಮೂಲಕ ಸಂಭ್ರಮದಿಂದ ಆಚರಿಸುತ್ತಿದ್ದರು.

ಹಾಡು, ಕುಣಿತ, ಕೋಲಾಟ, ಹೀಗೆ ಎಲ್ಲವೂ ಮೇಳೈಸಿದ ಸಂಭ್ರಮದ ಈ ಹಬ್ಬವನ್ನು ದೇಶ ದಲ್ಲೆಡೆ ಆಯಾ ಪ್ರಾಂತ್ಯಕ್ಕನುಗುಣವಾಗಿ ಬೇರೆ ಬೇರೆ ರೀತಿಯಲ್ಲೂ ಆಚರಿಸುತ್ತಾರೆ. ಸಂಭ್ರ ಮವೆಲ್ಲಾ ಮುಗಿದ ನಂತರ ಒಂದು ಅಗ್ನಿಕುಂಡದಂತೆ ರಚಿಸಿ ಕೆಟ್ಟದರ ಸಂಕೇತವಾಗಿ ಬೇಡದ ವಸ್ತುಗಳನ್ನು ಅದರಲ್ಲಿ ಹಾಕಿ ದಹಿಸುವ ಪ್ರತೀತಿಯೂ ಇದೆ. ಭಾರತೀಯ ಹಬ್ಬ ಗಳಲ್ಲಿ ಪ್ರತಿ ಹಬ್ಬಕ್ಕೂ ಕೂಡ ತನ್ನದೇ ಆದ ಐತಿಹ್ಯವಿದೆ.

ವಿಶೇಷವಾಗಿ ಹೋಳಿ ಹಬ್ಬದಲ್ಲಿ ಕಾಮದಹನ ಮತ್ತು ಕೆಟ್ಟದ್ದನ್ನು ಕೊನೆಗಾಣಿಸುವ ಸಂಕೇತವನ್ನು ಆಚರಿಸುತ್ತಾ ಬಣ್ಣಗಳ ಹಬ್ಬವನ್ನು ರಾಧಾಕೃಷ್ಣರ ಪ್ರೀತಿಯ ಸಂಕೇತವಾಗಿ ಆಚರಿಸುತ್ತಾ ಬಂದಿದ್ದೇವೆ. ಮನಸ್ಸಿನಲ್ಲಿರುವ ಕೆಟ್ಟ ಗುಣಗಳಾದ ಕಾಮ ಕ್ರೋಧ ಲೋಭ, ಮೋಹ ,ಮದ , ಮಾತ್ಸರ್ಯ ಇವುಗಳನ್ನ ಸುಟ್ಟು ಬದುಕಿನಲ್ಲಿ ಸುಖ ಶಾಂತಿ, ನೆಮ್ಮದಿ ಯನ್ನು ಕಾಣುವ ಸಾಂಕೇತಿಕವಾದ ಹಬ್ಬ ಹೋಳಿ ಹಬ್ಬ. ಪ್ರೀತಿಯ ಸಂಕೇತವಾದ ಬಣ್ಣ ಗಳನ್ನು ಬಂದು ಬಾಂಧವರಿಗೆ ಸ್ನೇಹಿತರಿಗೆ ಹಚ್ಚಿ, ದ್ವೇಷ ಮರೆತು ಪ್ರೀತಿಯನ್ನು ಹಂಚಿ ಕೊಂಡು, ಬಣ್ಣಗಳ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಎಲ್ಲ ಮನಸ್ಸುಗಳಿಗೂ ದೇವರು ಅಷ್ಟೈ ಶ್ವರ್ಯವನ್ನು, ಸುಖ ಶಾಂತಿ, ನೆಮ್ಮದಿಯನ್ನು ಕರುಣಿಸಿ ಹರಸಲಿ.