ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Mandya News: ನಾಡಬಾಂಬ್ ಸ್ಫೋಟಗೊಂಡು ವಿದ್ಯಾರ್ಥಿ ಅಂಗೈ ಛಿದ್ರ, ಮತ್ತೊಬ್ಬನಿಗೆ ಗಂಭೀರ ಗಾಯ

Mandya News: ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯ ಬೆಟ್ಟದಲ್ಲಿ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಒಬ್ಬ ವಿದ್ಯಾರ್ಥಿಯ ಅಂಗೈ ಛಿದ್ರಗೊಂಡಿದೆ. ಮತ್ತೊಬ್ಬನ ಮುಖದ ಭಾಗಕ್ಕೆ ಗಾಯವಾಗಿದೆ. ಕಾಡು ಹಂದಿ ಬೇಟೆಗೆ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.

ನಾಡಬಾಂಬ್ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Profile Prabhakara R Feb 23, 2025 1:13 PM

ಮಂಡ್ಯ: ದೇವಸ್ಥಾನದ ಬಳಿ ಸ್ವಚ್ಛತಾ ಕಾರ್ಯ ನಡೆಸುವಾಗ ನಾಡಬಾಂಬ್​ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ (Mandya News) ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯ ಬೆಟ್ಟದಲ್ಲಿ ನಡೆದಿದೆ. ಹರಿಯಂತ್ ಪಾಟೀಲ್, ಪಾರ್ಥ ಗಾಯಾಳುಗಳು. ಇವರು ಜೈನಬಸದಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಬೆಟ್ಟದ ಮೇಲಿನ ದೇವಸ್ಥಾನ ಸ್ವಚ್ಛಗೊಳಿಸಲು ಭಾನುವಾರ ತೆರಳಿದ್ದರು. ಸ್ವಚ್ಛತೆ ಮಾಡುವಾಗ ಕಸದ ರಾಶಿಗೆ ವಿದ್ಯಾರ್ಥಿಗಳು ಕೈ ಹಾಕುತ್ತಿದ್ದಂತೆ ನಾಡ ಬಾಂಬ್​ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ಒಬ್ಬನ ಅಂಗೈ ಛಿದ್ರಗೊಂಡಿದೆ. ಮತ್ತೊಬ್ಬನ ಮುಖದ ಭಾಗಕ್ಕೆ ಗಾಯವಾಗಿದೆ. ಕಾಡು ಹಂದಿ ಬೇಟೆಗೆ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ | Car Accident: ಮಂಗಳೂರಿನಲ್ಲಿ ಭೀಕರ ಕಾರು ಅಪಘಾತ; ಸಿಂಧನೂರು ಶಾಸಕರ ಸೋದರಳಿಯ ಸಾವು

ಅಥಣಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ತಂದೆ-ಮಗಳ ದುರ್ಮರಣ

ಬೆಳಗಾವಿ: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ತಂದೆ ಹಾಗೂ ಮಗಳು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ (Road Accident) ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಬಳಿ ನಡೆದಿದೆ. ಮೃತರನ್ನು ರಾಮು ಕರ್ಣಿ (28) ಹಾಗೂ ಮಗಳು ಜಾಹ್ನವಿ ಕರ್ಣಿ (11) ಎಂದು ಗುರುತಿಸಲಾಗಿದೆ. ಇನ್ನು ಅಪಘಾತದಲ್ಲಿ ರಾಮು ಪತ್ನಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮಹಾರಾಷ್ಟ್ರದ ಜತ್ತ ತಾಲೂಕಿನ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಅನಂತಪುರ ಗ್ರಾಮದ ಸೋದರ ಸಂಬಂಧಿ ಮದುವೆಗೆ ಇವರು ಬಂದಿದ್ದರು. ಬೈಕ್‌ನ ಹಿಂಬದಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದ್ದು, ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ಭೀಕರ ಕಾರು ಅಪಘಾತ; ಸಿಂಧನೂರು ಶಾಸಕರ ಸೋದರಳಿಯ ಸಾವು

ಸಿಂಧನೂರು: ಮಂಗಳೂರಿನ ಸುರತ್ಕಲ್ ರಸ್ತೆಯ ಬಳಿ ಭೀಕರ ಕಾರು ಅಪಘಾತ (Car Accident) ಸಂಭವಿಸಿದ್ದು, ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ ದೀಪುಗೌಡ (50) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಕಾರಟಗಿಯ ಪ್ರದೀಪ್ ಕೋಲ್ಕರ್ ಮತ್ತು ಮತ್ತೊಬ್ಬ ಗಾಯಾಳು ಗಂಗಾವತಿಯ ರಂಘುನಾಥ ಎಂಬುವವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ರಸ್ತೆಯ ಬದಿ ಕಾರು ನಿಲ್ಲಿಸಿ, ಡಿವೈಡರ್ ದಾಟುವ ಸಮಯದಲ್ಲಿ ವೇಗವಾಗಿ ಬಂದ ಕಾರು ಬಡಿದು ದೀಪುಗೌಡ ಕೊನೆಯುಸಿರೆಳೆದಿದ್ದಾರೆ.

ಈ ಸುದ್ದಿಯನ್ನೂ ಓದಿ | Physical abuse: ರಾಜಧಾನಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ; ಪರಿಚಯಸ್ಥ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!

ಸಿಂಧನೂರಿನ ದೀಪುಗೌಡ, ಕಾರಟಗಿಯ ಪ್ರದೀಪ್ ಕೋಲ್ಕರ್ ಮತ್ತು ಗಂಗಾವತಿಯ ಸಮರ್ಥ ಮೋಟಾರ್ಸ್ ಮಾಲೀಕ ರಂಘುನಾಥ ಅವರು, ರಸ್ತೆ ಬದಿ ಕಾರು ನಿಲ್ಲಿಸಿ ವಿಭಜಕ ದಾಟುವ ವೇಳೆ ಅಪಘಾತ ನಡೆದಿದೆ. ಭಾನುವಾರ ಬೆಳಗ್ಗೆ ದೀಪುಗೌಡರ ಮೃತದೇಹವನ್ನು ಸಿಂಧನೂರಿಗೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಪಘಾತದ ಸುದ್ದಿ ತಿಳಿಯುತಿದ್ದಂತೆ ದೀಪುಗೌಡರ ಸಂಬಂಧಿಕರು, ಸ್ನೇಹಿತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ದೀಪುಗೌಡ ಮತ್ತು ಶಾಸಕ ಹಂಪನಗೌಡ ಬಾದರ್ಲಿ ಅವರ ನಿವಾಸದಲ್ಲಿ ಸೇರಿದ್ದಾರೆ.