Pavagada News: ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿ ಶಿಕ್ಷಣ ಪ್ರೇಮ ಮೆರೆದ ಅಂಗನವಾಡಿ ಕಾರ್ಯಕರ್ತೆ!
Pavagada News: ಪಾವಗಡ ಶಿಶು ಅಭಿವೃದ್ಧಿ ಯೋಜನೆಯ (Pavagada News) ಕನ್ನಮೇಡಿ ಪಂಚಾಯಿತಿ ವ್ಯಾಪ್ತಿಯ ಓಬೇನಹಳ್ಳಿಯಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕಾಗಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಅವರು ಸ್ವಂತ ಹಣದಲ್ಲಿ ನಿವೇಶನವನ್ನು ಖರೀದಿಸಿ, ಇಲಾಖೆಯ ಹೆಸರಿಗೆ ಈ ಖಾತೆ ಮಾಡಿಸಿಕೊಟ್ಟಿದ್ದಾರೆ.


ಪಾವಗಡ: ತಮ್ಮ ಹಿರಿಯರು ಶಾಲೆ , ಗ್ರಂಥಾಲಯ ಇತರೆ ಸರ್ಕಾರಿ ಕಟ್ಟಡಗಳಿಗೆ ನೀಡಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಈ ಕಾಲದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯೊಬ್ಬರು, ಅಂಗನವಾಡಿ ಕೇಂದ್ರ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ. ಪಾವಗಡ ಶಿಶು ಅಭಿವೃದ್ಧಿ ಯೋಜನೆಯ (Pavagada News) ಕನ್ನಮೇಡಿ ಪಂಚಾಯಿತಿ ವ್ಯಾಪ್ತಿಯ ಓಬೇನಹಳ್ಳಿಯಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕಾಗಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಅವರು ಸ್ವಂತ ಹಣದಲ್ಲಿ ನಿವೇಶನವನ್ನು ಖರೀದಿಸಿ, ಇಲಾಖೆಯ ಹೆಸರಿಗೆ ಈ ಖಾತೆ ಮಾಡಿಸಿಕೊಟ್ಟಿದ್ದಾರೆ.
ನಾಗೇಂದ್ರ ಎಸ್ ಎಂಬುವವರ ಪತ್ನಿಯಾದ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಅವರು ಅಂಗನವಾಡಿ ಕೇಂದ್ರಕ್ಕೆ ನಿವೇಶನ ಒದಗಿಸಿದ್ದು, 574ನೇ ಸ್ವತ್ತು ನಂಬರ್‌ನಲ್ಲಿ 30x40 ಅಳತೆಯ ಜಾಗವನ್ನು ಅಂಗನವಾಡಿ ಕೇಂದ್ರ ನಿರ್ಮಾಣಕ್ಕಾಗಿ ದಾನವಾಗಿ ನೀಡಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ ಒಟ್ಟು 16 ಮಕ್ಕಳು ದಾಖಲಾಗಿದ್ದು, 4 ಗರ್ಭಿಣಿ, ಒಬ್ಬರು ಬಾಣಂತಿ ಈ ಅಂಗನವಾಡಿ ಕೇಂದ್ರದಿಂದ ಸರ್ಕಾರಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಇಲ್ಲಿಯವರೆಗೆ ಅಂಗನವಾಡಿ ಕೇಂದ್ರವು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಿವೇಶನ ಒದಗಿಸಿರುವುದರಿಂದ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುಕೂಲಕರವಾಗಲಿದೆ. ಕಾರ್ಯಕರ್ತೆಯ ಹಾಗೂ ಕುಟುಂಬದವರ ಸೇವಾ ಮನೋಭಾವಕ್ಕೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಈ ಸುದ್ದಿಯನ್ನೂ ಓದಿ | Tumkur News: ತುಮಕೂರಿನಲ್ಲಿ ಒಂದೇ ದಿನ ಹೃದಯಾಘಾತಕ್ಕೆ ಇಬ್ಬರು ಬಲಿ