Battle Of Galwan: ʼಬ್ಯಾಟಲ್ ಆಫ್ ಗಲ್ವಾನ್ʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಔಟ್; ಸಲ್ಮಾನ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ
ʼಬ್ಯಾಟಲ್ ಆಫ್ ಗಲ್ವಾನ್ʼ ಬಾಲಿವುಡ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಸಲ್ಮಾನ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟರ್‌ನಲ್ಲಿ ನಟ ಸಲ್ಮಾನ್ ಖಾನ್ ಯೋಧನಂತೆ ಕಾಣಿಸಿಕೊಂಡಿದ್ದಾರೆ. ಹುರಿ ಮೀಸೆ, ಎದೆಯಲ್ಲಿ ದೇಶಾಭಿಮಾನದ ಕಿಚ್ಚು ಹತ್ತಿಸುವ ಖಡಕ್ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ.

Salman Khan

ಮುಂಬೈ: ಬಾಲಿವುಡ್ ಬ್ಯಾಚುಲರ್, ಬಿಗ್ ಬಾಸ್ ಖ್ಯಾತಿಯ ನಟ ಸಲ್ಮಾನ್ ಖಾನ್ (Salman Khan) ಸದ್ಯ ʼಬ್ಯಾಟಲ್ ಆಫ್ ಗಲ್ವಾನ್ʼ (Battle Of Galwan) ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ʼಬ್ಯಾಟಲ್ ಆಫ್ ಗಲ್ವಾನ್ʼ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಸಲ್ಮಾನ್ ಖಾನ್ ಅವರು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಸಲ್ಲು ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟರ್ ನಲ್ಲಿ ನಟ ಸಲ್ಮಾನ್ ಖಾನ್ ಯುದ್ಧ ಮಾಡುವ ಯೋಧನಂತೆ ಕಾಣಿಸಿಕೊಂಡಿದ್ದಾರೆ. ಹುರಿ ಮೀಸೆ, ಎದೆಯಲ್ಲಿ ದೇಶಾಭಿಮಾನದ ಕಿಚ್ಚು ಹತ್ತಿಸುವ ಇವರ ಖಡಕ್ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದೀಗ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
ಇತ್ತೀಚೆಗೆ ತೆರೆಕಂಡ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಜತೆಯಾಗಿ ನಟಿಸಿದ್ದ ʼಸಿಕಂದರ್ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿತ್ತು. ಇದಲ್ಲದೆ ಕೆಲವು ವರ್ಷಗಳಿಂದ ಸಲ್ಮಾನ್ ಸತತ ಸೋಲು ಕಾಣುತ್ತಿದ್ದಾರೆ. ಹೀಗಾಗಿ ʼಬ್ಯಾಟಲ್ ಆಫ್ ಗಲ್ವಾನ್ʼ ಮೂಲಕ ಸಲ್ಮಾನ್ ಖಾನ್ ಗೆಲ್ಲಲೇಬೇಕಿದೆ. 2020ರಲ್ಲಿ ಭಾರತೀಯ-ಚೀನಾ ಸೈನಿಕರ ಸಂಘರ್ಷದ ಕಥೆಯನ್ನು ಇದು ಹೊಂದಿದೆ. ಈಗಾಗಲೇ ಶೂಟಿಂಗ್ ಚಿತ್ರತಂಡ ತಯಾರಿ ನಡೆಸಿದೆ.
ಈ ಚಿತ್ರದ ಶೂಟಿಂಗ್ ಆಗಸ್ಟ್‌ನಲ್ಲಿ ಆರಂಭವಾಗಲಿದೆ. ಲಡಾಖ್ ಹಾಗೂ ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರತಂಡವು ಮೋಷನ್ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶಭಕ್ತಿ ಸಾರುವ ಈ ಕಥೆಯ ಮೊದಲ ಲುಕ್ ಇದು. ಈ ಮೂಲಕ ʼಬ್ಯಾಟಲ್ ಆಫ್ ಗಲ್ವಾನ್ʼ ಸಿನಿಮಾದ ಪೋಸ್ಟರ್ ಈಗ ಬಿಡುಗಡೆಯಾಗಿದೆ ಎಂದು ಶೀರ್ಷಿಕೆ ನೀಡಿದ್ದು ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ:Jockey 42 Movie: ನಟ ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ಗುಡ್‌ನ್ಯೂಸ್ ಕೊಟ್ಟ ನಿರ್ದೇಶಕ ಗುರುತೇಜ್ ಶೆಟ್ಟಿ
2020ರಲ್ಲಿಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆ ನಡೆದಿತ್ತು. ಜೂನ್ 15ರಂದು ನಡೆದ ಈ ಘರ್ಷಣೆಯಲ್ಲಿ ಎರಡೂ ಕಡೆಗಳಲ್ಲಿ ಸಾವು ನೋವು ಸಂಭವಿಸಿತ್ತು. ಈ ಪ್ರದೇಶದಲ್ಲಿ ಬಂದೂಕುಗಳನ್ನು ನಿಷೇಧಿಸಲಾಗಿರುವುದರಿಂದ ಭಾರತೀಯ ಸೇನೆಯು ಮೂಲಭೂತ ಆಯುಧಗಳನ್ನು ಬಳಸಿಕೊಂಡು ಅಪ್ರತಿಮ ಧೈರ್ಯವನ್ನು ಪ್ರದರ್ಶಿಸಿತ್ತು. ಇದೇ ಕಥೆಯನ್ನು ಸಿನಿಮಾದಲ್ಲಿ ಅಳವಡಿಸಲಾಗಿದು, ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.