Flirting Day 2025: ವಿವಾಹಿತ ಗಂಡಸರು ಯಾಕೆ ಫ್ಲರ್ಟ್ ಮಾಡ್ತಾರೆ? ಇಲ್ಲಿದೆ 10 ಕಾರಣಗಳು
ವ್ಯಾಲೆಂಟೈನ್ ಡೇ ಸಂಭ್ರಮ ಮುಗಿದಿದೆ. ಇದರ ಬೆನ್ನಲ್ಲೇ ಫ್ಲರ್ಟಿಂಗ್ ದಿನ ಬಂದು ಬಟ್ಟಿದೆ. ವಿವಾಹಿತ ಪುರುಷರು ಯಾಕೆ ಬೇರೆ ಮಹಿಳೆಯೊರೊಂದಿಗೆ ಫ್ಲರ್ಟ್ ಮಾಡ್ತಾರೆ? ಮತ್ತು ಇದಕ್ಕೆ ಕಾರಣಗಳೇನು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ವಿವಾಹಿತ ಪುರುಷರು ಫ್ಲರ್ಟ್ ಮಾಡ್ತಿದ್ದಾರೆಂಬುದಕ್ಕೆ ಕೆಲವೊಂದು ಲಕ್ಷಣಗಳಿವೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಫೆಬ್ರವರಿ (February)ಯನ್ನು ‘ಪ್ರೀತಿ’ಯ ತಿಂಗಳು (month of love) ಎಂದು ಕರೆಯುತ್ತಾರೆ. ಆದರೆ ಇದು ವ್ಯಾಲೆಂಟೈನ್ ವಿರೋಧಿ ತಿಂಗಳಾಗಿಯೂ (Anti Valentine’s Week) ಗುರುತಿಸಿಕೊಳ್ಳುತ್ತದೆ. ಈ ವಾರವನ್ನು ಏಕಾಂಗಿ ದಿನ ಅಥವಾ ವ್ಯಾಲೆಂಟೈನ್ ದಿನವನ್ನು (Valentine’s Day) ಇಷ್ಟಪಡದವರ ದಿನವೆಂದೂ ಆಚರಿಸಿಕೊಳ್ಳಲಾಗುತ್ತಿದೆ. ಈ ವ್ಯಾಲೆಂಟೈನ್ ವಿರೋಧಿ ವಾರದಲ್ಲಿ, ಈ ವಾರದ 4ನೇ ದಿನವನ್ನು ಫ್ಲರ್ಟಿಂಗ್ ಡೇ (Flirting Day) ಎಂದೂ ಆಚರಿಸಲಾಗುತ್ತದೆ! ಅಂದ ಹಾಗೆ ಈ ಫ್ಲರ್ಟ್ ಅನ್ನುವುದು ಮೂಲತಃ ಇಂಗ್ಲಿಷ್ ಪದವಲ್ಲ, ಬದಲಿಗೆ ಇದು ಪ್ರೆಂಚ್ ಭಾಷೆಯಿಂದ ಹುಟ್ಟಿಕೊಂಡಿರುವ ಒಂದು ಪದವಾಗಿದೆ. ಫ್ರೆಂಚ್ (French) ಪದ ಫ್ಲ್ಯುರೆಟ್ಟೆಯಿಂದ (Fleurette) ‘ಫ್ಲರ್ಟ್’ (Flirt) ಎನ್ನುವ ಪದ ಹುಟ್ಟಿಕೊಂಡಿದೆ. ಯಾರದದ್ದಾರೂ ಮೇಲೆ ಗುಲಾಬಿ ಪಕಳೆಗಳನ್ನು ಎಸೆದು ಅವರನ್ನು ಉತ್ತೇಜಿಸುವುದು ಎಂಬುದು ಈ ಪದದ ಅರ್ಥವಾಗಿದೆ!
ಇದು ಯಾರ ಮೇಲಾದರೂ ನಮ್ಮ ರೊಮ್ಯಾಂಟಿಕ್ ಆಸಕ್ತಿಯನ್ನು ತೋರಿಸಲು ಇಂತಹ ಕ್ರಿಯೆಗಳನ್ನು ನಡೆಸಲಾಗುತ್ತದೆ. ಆದರೆ ವಿವಾಹಿತ ಪುರುಷರು ಇಂತಹ ವರ್ತನೆಗಳಲ್ಲಿ ತೊಡಗಿಸಿಕೊಂಡಾಗ ಇದು ಬೇರೆಯದೇ ಅರ್ಥವನ್ನು ಪಡೆದುಕೊಳ್ಳುತ್ತದೆ. ಕೆಲವರು ಇದನ್ನು ನಿರುಪದ್ರವಿ ತಮಾಷೆಯೆಂದು ಭಾವಿಸಿಕೊಂಡರೆ, ಕೆಲವರು ಇದನ್ನು ನಮ್ಮ ವೈವಾಹಿಕ ಜೀವನಕ್ಕೊಂದು ಬೆದರಿಕೆಯೆಂದೇ ಭಾವಿಸುತ್ತಾರೆ.
ಈ ಸುದ್ದಿಯಲ್ಲಿ ನಾವಿಂದು ಫ್ಲರ್ಟ್ ಮಾಡುವ ವಿವಾಹಿತ ಗಂಡಸರ ವರ್ತನೆಗಳು ಮತ್ತು ಅವರು ಹೀಗೆ ಮಾಡುವುದಕ್ಕಿರುವ ಕಾರಣಗಳು ಮತ್ತು ವಿವಾಹಿತನೊಬ್ಬ ಫ್ಲರ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬುದನ್ನು ಸೂಚಿಸುವ ಲಕ್ಷಣಗಳನ್ನು ನೋಡೋಣ.
ವಿವಾಹಿತ ಪುರುಷರು ಯಾಕಾಗಿ ಫ್ಲರ್ಟ್ ಮಾಡುತ್ತಾರೆಂಬುದಕ್ಕೆ 10 ಕಾರಣಗಳು
- ನಿರ್ಬಂಧಿಸಲಾಗದ ಕುತೂಹಲ: ಹೊಸಬರೊಂದಿಗೆ ಫ್ಲರ್ಟ್ ಮಾಡುವುದರಿಂದ ಏಕತಾನತೆಯ ಜೀವನ ಶೈಲಿಯಿಂದ ಹೊರಬರಲು ಸಾಧ್ಯವಾಗುತ್ತದೆ. ತಮ್ಮ ದೈನಂದಿನ ಜೀವನ ಶೈಲಿಯಿಂದ ಸ್ವಲ್ಪ ಹೊರಬರಲು ವಿವಾಹಿತ ಪುರುಷರು ಇಂತಹ ಸಾಹಸಗಳಲ್ಲಿ ಆಗಾಗ್ಗೆ ತೊಡಗಿಸಿಕೊಳ್ಳುತ್ತಾರೆ.
- ತನ್ನನ್ನು ತಾನು ಊರ್ಜಿತಗೊಳಿಸಿಕೊಳ್ಳುವುದು: ಮದುವೆಯಾದ ಮೇಲೆ ರೊಮ್ಯಾಂಟಿಕ್ ಜೀವನ ಬದಿಗೆ ಸರಿದುಬಿಟ್ಟು, ನಾನಾ ವಿಧದ ಜವಾಬ್ದಾರಿಗಳು ಹೆಗಲು ಹತ್ತಿರುತ್ತವೆ. ತಾನಿನ್ನೂ ಅವಿವಾಹಿತನಾಗಿದ್ದಾಗ ಇದ್ದಂತೆ ರೊಮ್ಯಾಂಟಿಕ್ ಆಗಿದ್ದೇನೆ ಎಂಬುದನ್ನು ಆಗಾಗ್ಗೆ ಖಚಿತಪಡಿಸಿಕೊಳ್ಳಲು ವಿವಾಹಿತರು ಇಂತಹ ಫ್ಲರ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿರುತ್ತಾರೆ.
- ಮಧ್ಯ ವಯಸ್ಸಿನ ಬಿಕ್ಕಟ್ಟು: ತಾವು ಯುವಕರಾಗಿದ್ದಾಗ ತಾನೆಷ್ಟು ಲವಲವಿಕೆ ಮತ್ತು ಚಟುವಟಿಕೆಯಿಂದಿದ್ದೆ ಎಂಬುದನ್ನು ವಿವಾಹಿತರು ಆಗಾಗ್ಗೆ ನೆನಪಿಸಿಕೊಳ್ಳುತ್ತಿರುತ್ತಾರೆ. ಇದನ್ನು ಮಧ್ಯವಯಸ್ಸಿನ ಬಿಕ್ಕಟ್ಟು ಎನ್ನುತ್ತಾರೆ, ಇದರಿಂದ ಹೊರಬರುವುದಕ್ಕಾಗಿ ವಿವಾಹಿತರು ಆಗಾಗ್ಗೆ ಫ್ಲರ್ಟ್ ಮಾಡುತ್ತಿರುತ್ತಾರೆ.
- ಜಾರಿಕೊಳ್ಳುವಿಕೆ: ವಿವಾಹಿತ ಜೀವನದ ನಿತ್ಯ ಜಂಜಾಟ ಹಾಗೂ ಜವಾಬ್ದಾರಿಗಳಿಂದ ಒಂದಷ್ಟು ಬಿಡುಗಡೆ ಹೊಂದಲು ಮತ್ತು ಅಲ್ಪಕಾಲದ ಥ್ರಿಲ್‌ಗಾಗಿ ಕೆಲವು ವಿವಾಹಿತ ಪುರುಷರು ಇಂತಹ ಫ್ಲರ್ಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ತಮ್ಮ ಬಗ್ಗೆ ಇನ್ನಷ್ಟು ದೃಢ ನಂಬಿಕೆ ಮೂಡಲು ಕಾರಣವಾಗುತ್ತದೆ.
- ಅಭದ್ರತೆ: ತಾನು ಯಾವುದಕ್ಕೂ ಸಲ್ಲುತ್ತಿಲ್ಲ ಅಥವಾ ಯಾರಿಂದಾದರೂ ತಿರಸ್ಕೃತಗೊಳ್ಳುವ ಭಯದಿಂದ ವಿವಾಹಿತ ಪುರುಷರು ಫ್ಲರ್ಟಿಂಗ್‌ನ ಮೊರೆ ಹೋಗುವ ಸಾಧ್ಯತೆಗಳಿರುತ್ತವೆ.
- ಗಮನ ನೀಡದಿರುವಿಕೆ: ಗಂಡಸೊಬ್ಬ ತನ್ನ ವೈವಾಹಿಕ ಜೀವನದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದರೆ ಅಥವಾ ಸಾಕಷ್ಟು ಹೊಗಳಿಕೆ ಪಾತ್ರನಾಗುತ್ತಿಲ್ಲವಾದರೆ, ತನ್ನ ಮೇಲೆ ಗಮನಕೊಡುವ ಬೇರೆ ಮಹಿಳೆಯೊಂದಿಗೆ ವಿವಾಹಿತ ಪುರುಷ ತನ್ನ ಫ್ಲರ್ಟಿಂಗ್ ವರ್ತನೆ ಮೂಲಕ ಫ್ಲರ್ಟ್ ಮಾಡುವ ಸಾಧ್ಯತೆಗಳಿರುತ್ತವೆ.
- ಪೂರ್ಣಗೊಳ್ಳದ ಆಸೆಗಳು: ವೈವಾಹಿಕ ಜಿವನದಲ್ಲಿ ಕೈಗೂಡದ ಬಯಕೆಗಳನ್ನು ತೀವ್ರ ಸ್ವರೂಪದಲ್ಲಿ ವ್ಯಕ್ತಪಡಿಸುವ ಮಾಧ್ಯಮವಾಗಿಯೂ ಈ ಫ್ಲರ್ಟಿಂಗ್ ಕೆಲಸ ಮಾಡಬಹುದಾಗಿರುತ್ತದೆ.
- ಸಂವಹನದ ಕೊರತೆ: ಪತಿ ಮತ್ತು ಪತ್ನಿ ನಡುವೆ ಒಂದು ಹೇಳಲಾಗದ ಮೌನ ಮತ್ತು ಸಂವಹನದ ಕೊರತೆ ಇದ್ದಲ್ಲಿ, ವಿವಾಹಿತ ಪುರುಷ ಇನ್ನೊಬ್ಬ ಮಹಿಳೆಯೊಂದಿಗೆ ಫ್ಲರ್ಟಿಂಗ್ ಮಾಡಲು ಪ್ರಾರಂಭಿಸುತ್ತಾನೆ.
- ಆಪ್ತತೆಯ ಕೊರತೆ: ವಿವಾಹಿತ ಪುರುಷರು ಬೇರೊಬ್ಬ ಮಹಿಳೆಯೊಂದಿಗೆ ಫ್ಲರ್ಟಿಂಗ್ ಮಾಡಲಿರುವ ಇನ್ನೊಂದು ಪ್ರಮುಖ ಕಾರಣವೆಂದರೆ ತನ್ನ ವೈವಾಹಿಕ ಜೀವನದಲ್ಲಿ ನಿಕಟತೆ ಮತ್ತು ಆಪ್ತತೆಯ ಕೊರತೆಯಾಗಿರುತ್ತದೆ. ಒಂದುವೇಳೆ ವೈವಾಹಿಕ ಜೀವನದಲ್ಲಿ ಆಪ್ತತೆ ದೂರವಾಗಿದ್ದರೆ ಅಂತಹ ಪುರುಷರು ಪರಸ್ತ್ರೀಯಲ್ಲಿ ಅದನ್ನು ಕಂಡುಕೊಳ್ಳಲು ಪ್ರಯತ್ನಿಸುವ ಸಾಧ್ಯತೆಗಳಿರುತ್ತವೆ.
- ಕೆಟ್ಟವರ ಸಹವಾಸ: ಕೊನೆಯದಾಗಿ ಕೆಟ್ಟ ಜನರ ಸಂಗದ ಕಾರಣದಿಂದಲೂ ವಿವಾಹಿತನೊಬ್ಬ ಬೇರೊಂದು ಮಹಿಳೆಯೊಂದಿಗೆ ಫ್ಲರ್ಟಿಂಗ್ ನಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.
ಇದನ್ನೂ ಓದಿ: Viral News: ಮಗಳು ಬಿಡಿಸಿದ ಡ್ರಾಯಿಂಗ್‌ನಲ್ಲಿ ಅಡಗಿತ್ತು ಅಮ್ಮನ ಸಾವಿನ ರಹಸ್ಯ! ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್
ವಿವಾಹಿತ ಪುರುಷ ಫ್ಲರ್ಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಲಕ್ಷಣಗಳು
- ನಿಮ್ಮೊಂದಿಗೆ ಸಮಯ ಕಳೆಯಲು ಸಬೂಬುಗಳನ್ನು ಹೇಳುತ್ತಿರುವುದು: ವಿವಾಹಿತ ವ್ಯಕ್ತಿಯೊಬ್ಬ ಫ್ಲರ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾನೆಂಬುದಕ್ಕೆ ಮೊದಲ ಪುರಾವೆಯೆಂದರೆ ಆತ ನಿಮ್ಮೊಂದಿಗೆ ಸಮಯ ಕಳೆಯಲು ಸುಖಾಸುಮ್ಮನೆ ಕೆಲವೊಂದು ಕಾರಣಗಳನ್ನು ಕೊಡುತ್ತಿರುವುದು. ಕೆಲಸದ ಸ್ಥಳದಲ್ಲಿ ತುಂಬಾ ಹೊತ್ತು ಇರುವುದು ಅಥವಾ ನಿಮ್ಮೊಂದಿಗೆ ಊಟ ಮಾಡುವುದು ಹೀಗೆ ನಿಮ್ಮೊಂದಿಗೆ ಇರಲು ಆತ ಏನಾದರೊಂದು ಕಾರಣಗಳನ್ನು ಹುಡುಕುತ್ತಲೇ ಇರುತ್ತಾನೆ.
- ಹೆಚ್ಚಿನ ಗಮನವನ್ನು ಕೊಡುವುದು: ನಿಮ್ಮ ಮೇಲೆ ವಿವಾಹಿತ ಪುರುಷನಿಗೆ ಆಸಕ್ತಿ ಮೂಡಿದೆ ಎಂದು ಕಂಡುಕೊಳ್ಳಲಿರುವ ಇನ್ನೊಂದು ಕಾರಣವೆಂದರೆ, ಆತ ಸಹಜಕ್ಕಿಂತ ಹೆಚ್ಚಾಗಿ ನಿಮ್ಮ ಬಗ್ಗೆ ಗಮನ ಕೊಡಲಾರಂಭಿಸುತ್ತಾನೆ. ನಿಮ್ಮೊಂದಿಗೆ ಮಾತನಾಡಲು ಅವಕಾಶಗಳನ್ನು ಸೃಷ್ಟಿಸಿಕೊಳ್ಳತ್ತಿರುವುದೆಲ್ಲಾ ಫ್ಲರ್ಟಿಂಗ್‌ನ ಲಕ್ಷಣವಾಗಿದೆ.
- ಮತ್ಸರ ಮತ್ತು ತುಂಬಾ ಹಚ್ಚಿಕೊಳ್ಳುವುದು: ನೀವು ಇತರರೊಂದಿಗೆ ಇರುವುದನ್ನು ನೋಡಿ ಮತ್ಸರ ಪಡುತ್ತಿದ್ದಲ್ಲಿ ಅಂತಹ ವಿವಾಹಿತ ವ್ಯಕ್ತಿ ನಿಮ್ಮೊಂದಿಗೆ ಫ್ಲರ್ಟ್ ಮಾಡುತ್ತಿದ್ದಾನೆ ಎನ್ನುವುದಕ್ಕೆ ಒಂದು ಸೂಚನೆ. ಇಂತಹ ವ್ಯಕ್ತಿಗಳು ನೀವು ಬೇರೆಯವರೊಂದಿಗೆ ಬೆರೆಯುವುದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ.
- ಪ್ರಶಂಸೆ ಮತ್ತು ಕಿಚಾಯಿಸುವಿಕೆ: ಒಂದುವೇಳೆ ವಿವಾಹಿತ ವ್ಯಕ್ತಿಯೊಬ್ಬ ನಿಮ್ಮನ್ನು ತುಂಬಾ ಹಚ್ಚಿಕೊಂಡಿದ್ದರೆ, ಆತ ನಿಮಗೆ ಆಗಾಗ್ಗೆ ಪ್ರಶಂಸೆಗಳನ್ನು ನೀಡುತ್ತಿರುತ್ತಾನೆ. ಸಹಜ ಹೊಗಳಿಕೆಗಳು ಸಾಮಾನ್ಯವಾದರೂ, ತೀರಾ ಓವರ್ ಎನಿಸುವ ಹೊಗಳಿಕೆಗಳ ಕುರಿತು ನೀವು ಜಾಗರೂಕರಾಗಿರುವುದು ಒಳ್ಳೆಯದು.
- ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು: ವಿವಾಹಿತ ವ್ಯಕ್ತಿಯೊಬ್ಬ ತನ್ನ ಖಾಸಗಿ ಸಂಗತಿಗಳನ್ನು ಪದೇ ಪದೇ ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದಾನೆಂದರೆ ಆತ ನಿಮ್ಮೊಂದಿಗೆ ಫ್ಲರ್ಟ್ ಮಾಡುತ್ತಿದ್ದಾನೆಂದು ಅರ್ಥ.
- ಬಾಡಿ ಲ್ಯಾಂಗ್ವೇಜ್: ವಿವಾಹಿತ ವ್ಯಕ್ತಿಯೊಬ್ಬ ನಿಮ್ಮ ಜತೆ ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಿದ್ದಾನೆಯೇ ಅಥವಾ ತೀರಾ ನಿಮ್ಮ ಸಮೀಪಕ್ಕೆ ಬಂದು ಮಾತನಾಡುತ್ತಿದ್ದರೆ, ಖಂಡಿತವಾಗಿಯೂ ಆತ ನಿಮ್ಮ ಬಗ್ಗೆ ಆಸಕ್ತಿ ಹೊಂದಿದ್ದಾನೆ ಎಂದೇ ಅರ್ಥ!
- ಪ್ಲ್ಯಾನ್ ಹಾಕಿಕೊಳ್ಳುವುದು: ನಿಮ್ಮೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು, ವಿವಾಹಿತ ವ್ಯಕ್ತಿಯೊಬ್ಬ ಹೊರಗಡೆ ಸಮಯ ಕಳೆಯುವ ವಿಚಾರವನ್ನು ಹೇಳಿಕೊಂಡರೆ ಅಥವಾ ಸಮಾರಂಭಗಳಿಗೆ ನಿಮ್ಮನ್ನು ಪದೇ ಪದೇ ಜೊತೆಯಲ್ಲಿ ಆಹ್ವಾನಿಸುತ್ತಿದ್ದರೆ ಅಂತಹ ವ್ಯಕ್ತಿ ಖಂಡಿತವಾಗಿಯೂ ನಿಮ್ಮ ಬಗ್ಗೆ ಆಕರ್ಷಿತಗೊಂಡಿದ್ದಾನೆಂದೇ ಅರ್ಥ.
- ನಿಮ್ಮನ್ನು ನಗಿಸಲು ಪ್ರಯತ್ನಿಸುತ್ತಿರುವುದು: ವ್ಯಕ್ತಿಯೊಬ್ಬ ಹಾಸ್ಯ ಪ್ರವತ್ತಿಯವನಲ್ಲದವನಾಗಿದ್ದರೂ ಸಂದರ್ಭ ಸಿಕ್ಕಾಗಲೆಲ್ಲಾ ನಿಮ್ಮನ್ನು ನಗಿಸಲು ಪ್ರಯತ್ನಿಸುತ್ತಿದ್ದರೆ ಆತ ಖಂಡಿತವಾಗಿಯು ನಿಮ್ಮ ಜೊತೆ ಫ್ಲರ್ಟ್ ಮಾಡುತ್ತಿದ್ದಾನೆಂದೇ ಅರ್ಥ!
- ಸರ್ಪೈಸ್ ಗಿಫ್ಟ್‌ಗಳನ್ನು ಕೊಡುವುದು: ನಿಮ್ಮ ಡೆಸ್ಕ್‌ನಲ್ಲಿ ಆಗಾಗ ಚಾಕೊಲೇಟ್‌ಗಳು ಇರುವುದನ್ನು ನೀವು ಕಂಡರೆ ಆಗ ಆ ವ್ಯಕ್ತಿ ನಿಮ್ಮನ್ನು ಖುಷಿ ಪಡಿಸಲು ಟ್ರೈ ಮಾಡುತ್ತಿದ್ದಾನೆ ಎಂದು ನೀವು ಖಂಡಿತವಾಗಿಯೂ ಅಂದುಕೊಳ್ಳಬಹುದು.
- ತನ್ನ ಹೆಂಡತಿಯ ಹತ್ತಿರ ವಿಚಿತ್ರವಾಗಿ ವರ್ತಿಸುವುದು: ವಿವಾಹಿತ ವ್ಯಕ್ತಿಯೊಬ್ಬ ಬೇರೊಬ್ಬ ಮಹಿಳೆಯೊಂದಿಗೆ ಫ್ಲರ್ಟ್ ಮಾಡುತ್ತಿದ್ದಾನೆಂದರೆ ಆತ ತನ್ನ ಪತ್ನಿಯೊಂದಿಗೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ. ನಿಮ್ಮ ಜೊತೆ ನೀವಿಬ್ಬರೆ ಇರುವಾಗ ಜಾಯಲ್ ಆಗಿರುವ ವ್ಯಕ್ತಿ ತನ್ನ ಪತ್ನಿಯೊಂದಿಗೆ ನಿಮ್ಮನ್ನು ಭೇಟಿಯಾದಾಗ ಸೀರಿಯಸ್ಸಾಗಿ ಇದ್ದುಬಿಡುತ್ತಾನೆ.