ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಅವರ 50 ನೇ ಹುಟ್ಟುಹಬ್ಬಕ್ಕೆ ಹೃದಯ ತಪಾಸಣಾ ಶಿಬಿರ
ಜೆಡಿಎಸ್ ಪಕ್ಷ ಸಂಘಟನೆಯ ಮೂಲಕ ತಾಲ್ಲೂಕಿನಲ್ಲಿ ತನ್ನದೇ ವರ್ಚಸ್ಸು ಬೆಳೆಸಿಕೊಂಡ ನಾಗರಾಜು ಅವರ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆಗೆ ಅವರ ಅಭಿಮಾನಿಗಳು ಸಕಲ ಸಿದ್ಧತೆ ನಡೆಸಿದ್ದಾರೆ. ಇದೇ ತಿಂಗಳ 10 ಗುರುವಾರ ಬೆಳಿಗ್ಗೆ ನಡೆಯುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸೋಮಣ್ಣ ಸೇರಿದಂತೆ ಇನ್ನಿತರ ಗಣ್ಯರಿಗೆ ಆಹ್ವಾನ ನೀಡಲಾಗಿದೆ.


ಗುಬ್ಬಿ: ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಅವರ 50 ನೇ ಹುಟ್ಟುಹಬ್ಬದ ಪ್ರಯುಕ್ತ ಇದೇ ತಿಂಗಳ 10 ರಂದು ಗುಬ್ಬಿ ಪಟ್ಟಣದ ಬಂಗ್ಲೋಪಾಳ್ಯ ಶಾಲಾ ಮೈದಾನದಲ್ಲಿ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಸೇರಿದಂತೆ ಇತರೆ ಸಾಮಾಜಿಕ ಕಳಕಳಿಯ ಕೆಲಸ ಮಾಡುವ ನಾಗರಾಜು ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳಿಸಿ ಪರಾಭವಗೊಂಡ ನಾಗರಾಜು ಅವರು ತಾಲ್ಲೂಕಿನ ಮನೆ ಮಾತಾಗಿದ್ದಾರೆ. ಅವರ 50 ನೇ ಹುಟ್ಟುಹಬ್ಬ ಅದ್ದೂರಿ ಜೊತೆಗೆ ಸಮಾಜ ಸೇವ ಕಾರ್ಯದ ಮೂಲಕ ಗುರುತಿಸಿಕೊಳ್ಳಲು ಪ್ರಸ್ತುತ ಸಮಾಜದಲ್ಲಿ ಗಂಭೀರವಾದ ಹೃದಯಾಘಾತ ನಿದರ್ಶನಕ್ಕೆ ಸ್ಪಂದಿಸಿ ನಾಗರಾಜು ಅವರು ಸೂಚನೆ ಮೇರೆಗೆ ಹೃದಯ ತಪಾಸಣಾ ಶಿಬಿರ ಮೂಲಕ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಈ ಶಿಬಿರಕ್ಕೆ ಹೆಸರಾಂತ ವೈದ್ಯರ ತಂಡ ಬರಲಿದೆ. ಜೊತೆಗೆ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಕೂಡಾ ಜೆಡಿಎಸ್ ಕಾರ್ಯಕರ್ತರು ಆಯೋಜಿಸಿ ರಕ್ತದಾನ ಮಾಡಲಿದ್ದಾರೆ ಎಂದರು.
ಇದನ್ನೂ ಓದಿ: Gubbi (Tumkur) News: ಕಾರ್ಯಾಗಾರವು ಪಂಚಾಯತ್ ರಾಜ್ ವ್ಯವಸ್ಥೆ ವಿಚಾರ ತಿಳಿಯಲು ಸೂಕ್ತ ವೇದಿಕೆ : ಶಾಸಕ ಎಸ್.ಆರ್.ಶ್ರೀನಿವಾಸ್
ಪಪಂ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶಗೌಡ ಮಾತನಾಡಿ ಜೆಡಿಎಸ್ ಪಕ್ಷ ಸಂಘಟನೆಯ ಮೂಲಕ ತಾಲ್ಲೂಕಿನಲ್ಲಿ ತನ್ನದೇ ವರ್ಚಸ್ಸು ಬೆಳೆಸಿಕೊಂಡ ನಾಗರಾಜು ಅವರ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆಗೆ ಅವರ ಅಭಿಮಾನಿಗಳು ಸಕಲ ಸಿದ್ಧತೆ ನಡೆಸಿದ್ದಾರೆ. ಇದೇ ತಿಂಗಳ 10 ಗುರುವಾರ ಬೆಳಿಗ್ಗೆ ನಡೆಯುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸೋಮಣ್ಣ ಸೇರಿದಂತೆ ಇನ್ನಿತರ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಮೈತ್ರಿ ಹಿನ್ನಲೆ ಜೆಡಿಎಸ್ ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಹಾಗೂ ಎಂ.ಜಿ.ಶಿವಲಿಂಗಯ್ಯ ಮಾತನಾಡಿ ಜೆಡಿಎಸ್ ವರಿಷ್ಟರಿಗೂ ಆಹ್ವಾನ ನೀಡಿದ್ದೇವೆ. ಕುಮಾರಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಬರುವ ಸಾಧ್ಯತೆ ಇದ್ದು ಎಲ್ಲಾ ರೀತಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಸಜ್ಜಾಗಿದ್ದಾರೆ. ಸುಮಾರು 5 ಸಾವಿರ ಕಾರ್ಯ ಕರ್ತರ ನಡುವೆ ಹುಟ್ಟುಹಬ್ಬ ಆಚರಣೆ ಹಾಗೂ ರಕ್ತದಾನ ಮತ್ತು ಆರೋಗ್ಯ ಶಿಬಿರ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚನ್ನಬಸವಣ್ಣ, ವೆಂಕಟೇಶ್, ಪ್ರಕಾಶ್, ಜಿ.ಎಂ.ಶಿವಾನಂದ್, ಚಂದು ಇತರರು ಇದ್ದರು.