ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ಪ್ಯಾಂಟ್‌ ಬಿಚ್ಚಿ ಮಹಿಳೆಗೆ ಮರ್ಮಾಂಗ ತೋರಿದ ಫುಡ್‌ ಡೆಲಿವರಿ ಬಾಯ್‌!

28 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡಿಲೆವರಿ ಬಾಯ್‌ ಒಬ್ಬನನ್ನು ಬಂಧಿಸಲಾಗಿದೆ. ಮಾರ್ಚ್ 21 ರಂದು ಗಿರ್ಗಾಂವ್‌ನಲ್ಲಿರುವ ತನ್ನ ನಿವಾಸದಲ್ಲಿ 28 ವರ್ಷದ ಮಹಿಳೆಯೊಬ್ಬರಿಗೆ 29 ವರ್ಷದ ವ್ಯಕ್ತಿ ಕಿರುಕುಳ ನೀಡಿದ್ದಾನೆ. ಆ್ಯಪ್ ಮೂಲಕ ತಾನು ಮಾಡಿದ್ದ ಆಹಾರ ಆರ್ಡರ್ ಅನ್ನು ಪಡೆಯಲು ಮಹಿಳೆಯೊಬ್ಬರು ಮನೆ ಬಾಗಿಲಿಗೆ ಬಂದಾಗ ಈ ಘಟನೆ ಸಂಭವಿಸಿದೆ.

ಮಹಿಳೆಗೆ ಲೈಂಗಿಕ ಕಿರುಕುಳ; ಮರ್ಮಾಂಗ ತೋರಿದ ಫುಡ್‌ ಡೆಲಿವರಿ ಬಾಯ್‌

Profile Vishakha Bhat Apr 8, 2025 11:47 AM

ಮುಂಬೈ: 28 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡಿಲೆವರಿ ಬಾಯ್‌ ಒಬ್ಬನನ್ನು ಬಂಧಿಸಲಾಗಿದೆ. ಮಾರ್ಚ್ 21 ರಂದು ಗಿರ್ಗಾಂವ್‌ನಲ್ಲಿರುವ ತನ್ನ ನಿವಾಸದಲ್ಲಿ 28 ವರ್ಷದ ಮಹಿಳೆಯೊಬ್ಬರಿಗೆ 29 ವರ್ಷದ ವ್ಯಕ್ತಿ ಕಿರುಕುಳ (Physical Abuse) ನೀಡಿದ್ದಾನೆ. ಆ್ಯಪ್ ಮೂಲಕ ತಾನು ಮಾಡಿದ್ದ ಆಹಾರ ಆರ್ಡರ್ ಅನ್ನು ಪಡೆಯಲು ಮಹಿಳೆಯೊಬ್ಬರು ಮನೆ ಬಾಗಿಲಿಗೆ ಬಂದಾಗ ಈ ಘಟನೆ ಸಂಭವಿಸಿದೆ. ಮಹಿಳೆ ಬಾಗಿಲು ತೆರೆದ ತಕ್ಷಣ ವಿತರಣಾ ಏಜೆಂಟ್ ತನ್ನ ಪ್ಯಾಂಟ್ ಅನ್ನು ಕೆಳಗಿಳಿಸಿ ತನ್ನ ಮರ್ಮಾಂಗವನ್ನು ತೋರಿಸಿದ್ದಾನೆ. ಆರೋಪಿಯನ್ನು ಶಾರುಖ್‌ ಶೇಖ್‌ ಮೊಹಮ್ಮದ್‌ ಶೇಖ್‌ ಎಂದು ಗುರುತಿಸಲಾಗಿದೆ.

ಮಹಿಳೆ ಮಾರ್ಚ್ 21 ರಂದು ಮಹಿಳೆ ಫುಡ್‌ ಆರ್ಡರ್‌ ಮಾಡಿದ್ದಾಳೆ. ಡೆಲಿವರಿ ಬಾಯ್‌ ಬಂದ ಕೂಡಲೇ ಆಕೆ ಬಾಗಿಲು ತೆಗೆದಿದ್ದಾಳೆ. ಆದರೆ ಆರೋಪಿ ಪ್ಯಾಂಟ್ ಅನ್ನು ಕೆಳಗಿಳಿಸಿ ತನ್ನ ಮರ್ಮಾಂಗವನ್ನು ತೋರಿಸಿದ್ದಾನೆ. ಆಕೆ ತಕ್ಷಣ ತನ್ನ ಪತಿಯನ್ನು ಕೂಗಿದ್ದಾಳೆ. ಆಕೆಯ ಪತಿ ಕೂಡಲೇ ಬಂದು ಡಿಲೆವರಿ ಬಾಯ್‌ನ್ನು ಎದುರಿಸಿದ್ದಾರೆ. ಪತಿ ಮತ್ತು ವಿತರಣಾ ಏಜೆಂಟ್ ನಡುವೆ ಜಗಳ ನಡೆಯಿತು, ಆದರೆ ಆರೋಪಿ ಪತಿಯನ್ನು ಪಕ್ಕಕ್ಕೆ ತಳ್ಳಿ ಪರಾರಿಯಾಗುವಲ್ಲಿ ಯಶಸ್ವಿಗಿದ್ದಾನೆ. ದಂಪತಿಆಹಾರ ವಿತರಣಾ ವೇದಿಕೆಯ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ಏಜೆಂಟ್ ವರ್ತನೆಯನ್ನು ವರದಿ ಮಾಡಿದರು. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರಿಗೆ ಭರವಸೆ ನೀಡಲಾಗಿದ್ದರೂ, ಆರೋಪಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ನಂತರ ದಂಪತಿ ಪೊಲೀಸರ ಬಳಿ ತೆರಳಿದ್ದಾರೆ. ವಿಪಿ ರಸ್ತೆ ಪೊಲೀಸರನ್ನು ಸಂಪರ್ಕಿಸಿ ಔಪಚಾರಿಕವಾಗಿ ಎಫ್‌ಐಆರ್ ದಾಖಲಿಸಿದರು. ದೂರಿನ ಆಧಾರದ ಮೇಲೆ, ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಹುಡುಕಾಟ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ:Physical Abuse: ದೇಶವೇ ತಲೆ ತಗ್ಗಿಸುವ ಘಟನೆ; ಬೆಂಗಳೂರಿನ ನಡುರಸ್ತೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ಕೊನೆಗೂ ಸಿಕ್ಕಿಬಿದ್ದ ಆರೋಪಿ

ಘಟನೆ ನಡೆದು 15 ದಿನಗಳ ನಂತರ ಪೊಲೀಸರು ಆರೋಪಿ ಶಾರುಖ್‌ ಶೇಖ್‌ ಮೊಹಮ್ಮದ್‌ ಶೇಖ್‌ನನ್ನು ಬಂಧಿಸಿದ್ದಾರೆ. ಏಪ್ರಿಲ್ 4 ರಂದು, ಗಾಮ್‌ದೇವಿಯ ಕೆನಡಿ ಸೇತುವೆ ಬಳಿ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೇಖ್ ವಿರುದ್ಧ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 75 ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗೆ ಅಪರಾಧದ ಹಿನ್ನಲೆಯಿದೇಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.