Haryana Horror: ಹರ್ಯಾಣ ಕಾಂಗ್ರೆಸ್ ಕಾರ್ಯಕರ್ತೆ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್! ಪಕ್ಷದವರ ಕೈವಾಡ? ಮೃತಳ ತಾಯಿ ಹೇಳಿದ್ದೇನು?
ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಮೃತದೇಹ ಶನಿವಾರ ರೋಹ್ಟಕ್‌ನ ಬಸ್ ನಿಲ್ದಾಣದ ಬಳಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಆಕೆಯ ಸಾವು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹೀಗಿರುವಾಗ ಹಿಮಾನಿ ತಾಯಿಯ ಈ ಹೇಳಿಕೆ ಸಂಚಲನವನ್ನೇ ಸೃಷ್ಟಿಸಿದೆ. ಹಿಮಾನಿ ಸಾವಿನ ಬಗ್ಗೆ ತಾಯಿ ಸವಿತಾ ನರ್ವಾಲ್ ಮಾತನಾಡಿ, ಪಕ್ಷದ ಕೆಲವು ಜನರು ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ. ರಾಜಕೀಯ ರಂಗ ಮತ್ತು ಪಕ್ಷದಲ್ಲಿ ನನ್ನ ಮಗಳ ಏಳಿಗೆಯಿಂದ ಅಸೂಯೆಗೊಂಡು ಆಕೆಯನ್ನು ಕೊಲೆಗೈದಿದ್ದಾರೆ ಎಂದು ಹೇಳಿದ್ದಾರೆ.


ರೋಹ್ಟಕ್: ಹರ್ಯಾಣದಲ್ಲಿ ಸೂಟ್‌ಕೇಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶವ ಪತ್ತೆಯಾಗಿರುವ ಕೇಸ್‌ಗೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮೃತ ದುರ್ದೈವಿ ಹಿಮಾನಿ ತಾಯಿ ತಮ್ಮ ಮಗಳ ಸಾವಿನ ಬಗ್ಗೆ ಆಘಾತಕಾರಿ ಹೇಳಿಕೆ(Haryana Horror) ನೀಡಿದ್ದಾರೆ. ಪಕ್ಷಕ್ಕೆ ಸಂಬಂಧಪಟ್ಟವರೇ ಆಕೆಯನ್ನು ಕೊಲೆಗೈದಿರುವ ಶಂಕೆ ಇದೆ ಎಂದಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ, ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯಳಾಗಿದ್ದ ಹಿಮಾನಿ ನರ್ವಾಲ್ ಅವರ ಮೃತದೇಹ ಶನಿವಾರ ರೋಹ್ಟಕ್‌ನ ಬಸ್ ನಿಲ್ದಾಣದ ಬಳಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಆಕೆಯ ಸಾವು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹೀಗಿರುವಾಗ ಹಿಮಾನಿ ತಾಯಿಯ ಈ ಹೇಳಿಕೆ ಸಂಚಲನವನ್ನೇ ಸೃಷ್ಟಿಸಿದೆ.
ಹಿಮಾನಿ ಸಾವಿನ ಬಗ್ಗೆ ತಾಯಿ ಸವಿತಾ ನರ್ವಾಲ್, ಪಕ್ಷದ ಕೆಲವು ಜನರು ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ. ರಾಜಕೀಯ ರಂಗ ಮತ್ತು ಪಕ್ಷದಲ್ಲಿ ನನ್ನ ಮಗಳ ಏಳಿಗೆ ಸಹಿಸಲಾರಾದೇ ಆಕೆಯನ್ನು ಕೊಲೆಗೈದಿದ್ದಾರೆ. ನನ್ನ ಮಗಳು ಕಾಂಗ್ರೆಸ್‌ಗಾಗಿ ಬಹಳಷ್ಟು ತ್ಯಾಗ ಮಾಡಿದ್ದಳು ಮತ್ತು ಪಕ್ಷದ ಸದಸ್ಯರು ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ತನ್ನ ಮಗಳು ಪ್ರಭಾವಿ ಹೂಡಾ ಕುಟುಂಬಕ್ಕೆ ತುಂಬಾ ಆಪ್ತಳಾಗಿದ್ದಳು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಯೂ ಕಾಣಿಸಿಕೊಂಡಿದ್ದಾಳೆ. ಇದು ಅವರ ಪ್ರತಿಸ್ಪರ್ಧಿಗಳಿಗೆ ಅಸೂಯೆ ಹುಟ್ಟಿಸಿತ್ತು. ಈ ರಾಜಕೀಯ ಜೀವನ ನನ್ನ ಮಗಳ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಹಂತಕರು ಪಕ್ಷದಿಂದ ಬಂದವರಾಗಿರಬಹುದು, ಅವರ ಸ್ನೇಹಿತರೂ ಆಗಿರಬಹುದು. ಫೆಬ್ರವರಿ 28 ರಂದು, ಅವರು ಮನೆಯಲ್ಲಿದ್ದರು ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Haryana Horror: ಸೂಟ್‌ಕೇಸ್‌ನಲ್ಲಿ ಯುವತಿ ಶವ ಪತ್ತೆ; ಪಕ್ಷದ ಕಾರ್ಯಕರ್ತೆ ಎಂದ ಕಾಂಗ್ರೆಸ್
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಿಂದ ನಮಗೆ ಫೋನ್ ಕರೆ ಬಂದಿತು. ನನ್ನ ಮಗಳು ಆಶಾ ಹೂಡಾ (ಭೂಪಿಂದರ್ ಸಿಂಗ್ ಹೂಡಾ ಅವರ ಪತ್ನಿ) ಅವರೊಂದಿಗೆ ತುಂಬಾ ಆಪ್ತಳಾಗಿದ್ದಳು, ಅವಳಿಗೆ ನ್ಯಾಯ ಸಿಗುವವರೆಗೂ ನಾನು ಅವಳ ಅಂತ್ಯಕ್ರಿಯೆಯನ್ನು ಮಾಡುವುದಿಲ್ಲ" ಎಂದು ಅವರು ಹೇಳಿದರು.
ಕೌಟುಂಬಿಕ ವಿವಾದನ್ನೂ ನಾವು ಎದುರಿಸುತ್ತಿದ್ದೆವು. ನನ್ನ ಹಿರಿಯ ಮಗನನ್ನು 2011 ರಲ್ಲಿ ಭೀಕರ ಹತ್ಯೆ ಮಾಡಲಾಗಿತ್ತು.ಮತ್ತೊಬ್ಬ ಮಗನ ಪ್ರಾಣ ಉಳಿಸುವ ಸಲುವಾಗಿ ಬಿಎಸ್‌ಎಫ್‌ಗೆ ಸೇರಿಸಿದೆವು. ಮಗಳ ಸ್ಥಿತಿ ಈಗ ಹೀಗೆ ಆಗಿದೆ. ಚುನಾವಣೆಯ ನಂತರ, ಅವಳು ಪಕ್ಷದ ಬಗ್ಗೆ ಸ್ವಲ್ಪ ಭ್ರಮನಿರಸನಗೊಂಡಿದ್ದಳು. ರಾಜಕೀಯ ರಂಗದಿಂದ ದೂರ ಉಳಿದು ಉದ್ಯೋಗದತ್ತ ಮುಖ ಮಾಡುವುದಾಗಿ ಆಕೆ ಹೇಳಿದ್ದಳು. ಅಲ್ಲದೇ ಪಕ್ಷಕ್ಕಾಗಿ ಹೆಚ್ಚು ಕೆಲಸ ಮಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದಳು. ಅವಳು ಕಳೆದ 10 ವರ್ಷಗಳಿಂದ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದಳು. ಅವಳು ಮದುವೆಯಾಗಲು ಸಹ ಒಪ್ಪಿಕೊಂಡಿದ್ದಳು. ಅವಳು ಎಲ್‌ಎಲ್‌ಬಿ ಓದುತ್ತಿದ್ದಳು. ನಾನು ಬೆಳಿಗ್ಗೆ ಆಶಾ ಹೂಡಾ ಅವರಿಗೆ ಕರೆ ಮಾಡಿದ್ದೆ ಆದರೆ ನನ್ನ ಫೋನ್ ಕರೆ ಸ್ವೀಕರಿಸಲಿಲ್ಲ ಎಂದು ಅವರು ಹೇಳಿದರು.